ಹೈದರಾಬಾದ್: ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಶೂ ಎತ್ತಿಕೊಟ್ಟ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Telangana BJP state president MP Bandi Sanjay rushing to give foot-ware to his colleague MP Amit Shah!
Gulamgiri at its best ???? pic.twitter.com/W1yXFI6zVZ
— YSR (@ysathishreddy) August 22, 2022
Advertisement
ಹೌದು. ಅಮಿತ್ ಶಾ ಅವರು ಸಿಕಂದರಾಬಾದ್‍ನಲ್ಲಿರುವ ಉಜೈನಿ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ದೇಗುಲದಲ್ಲಿ ಪೂಜೆ ಮುಗಿಸಿ ಹೊರ ಬರುತ್ತಿದ್ದಂತೆಯೇ ಕೇಂದ್ರ ಸಚಿವ ಜೊತೆಗಿದ್ದ ಸಂಜಯ್ ಕುಮಾರ್ ಕೂಡಲೇ ಓಡಿ ಹೋಗಿ ಶಾ ಅವರ ಶೂ ಎತ್ತಿ ಕೊಟಿದ್ದಾರೆ. ಈ ದೃಶ್ಯವನ್ನು ದೇವಸ್ಥಾನದ ಪಕ್ಕದ ಕಟ್ಟಡದಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಪರ ವಿರೋಧ ಕಾಮೆಂಟ್ ಗಳು ಬರುತ್ತಿವೆ. ಇದನ್ನೂ ಓದಿ: ಕೊರೊನಾ ವೇಳೆ ಜನರಿಂದ ಸುಲಿಗೆ – 577 ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್
Advertisement
Telangana BJP state president Sanjay Bandi takes shoes of Amit shah …
“Telugu Vari Atma Gauravam”
????????????????????????????????????
What’s the position of Backward class leader in BJP see the truth .. pic.twitter.com/buk99T4Jlg
— Manickam Tagore .B????????✋மாணிக்கம் தாகூர்.ப (@manickamtagore) August 22, 2022
Advertisement
ತೆಲಂಗಾಣ ಸಚಿವ ಹಾಗೂ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರ ಕೆಟಿ ರಾಮರಾವ್ ಟ್ವೀಟ್ ಮಾಡಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ತೆಲಂಗಾಣದ ಸ್ವಾಭಿಮಾನಕ್ಕೆ ಧಕ್ಕೆ ತಂದವರನ್ನು ತಿರಸ್ಕರಿಸಲು ಮತ್ತು ತೆಲಂಗಾಣದ ಸ್ವಾಭಿಮಾನವನ್ನು ಕಾಪಾಡಲು ಸಮಾಜದ ಎಲ್ಲಾ ವರ್ಗಗಳು ಸಿದ್ಧವಾಗಿವೆ ಎಂದು ಹೇಳಿದರು. ಅಲ್ಲದೆ ಇನ್ನೂ ಹಲವಾರು ಮಂದಿ ಕಾಮೆಂಟ್ ಮಾಡಿದ್ದಾರೆ.
Advertisement
తెలంగాణ ఆత్మగౌరవం ఒకప్పటి తడీపార్ కాళ్ళ వద్ద పెట్టిన బండి! @bandisanjay_bjp @BJP4Telangana నేతల కట్టు బానిసత్వానికి పరాకాష్ట!ఇంత నీచమా బీజేపీలో మీ బ్రతుకులు!మరి తెలంగాణ బీజేపీ అధ్యక్షుడే చెప్పులు మోస్తుంటే, మిగతవారు ఇంకేమి పనులు చెయ్యాలో? pic.twitter.com/9MAANDoVhQ
— Telangana Congress (@INCTelangana) August 22, 2022
ಟಿಆರ್ ಎಸ್‍ನ ಸಾಮಾಜಿಕ ಮಾಧ್ಯಮ ಸಂಚಾಲಕ ವೈ ಸತೀಶ್ ರೆಡ್ಡಿಅವರು, ರಾಜ್ಯ ಬಿಜೆಪಿ ಮುಖ್ಯಸ್ಥರ ಕಾರ್ಯವು ಗುಲಾಮಗಿರಿ ಅತ್ಯುತ್ತಮವಾಗಿದೆ ಎಂದು ಹೇಳಿದ್ದಾರೆ.