ಹೈದರಾಬಾದ್: 18 ವರ್ಷದ ಯುವತಿಯೊಬ್ಬಳನ್ನು (Woman) ಆಕೆಯ ತಂದೆಯ ಸಮ್ಮುಖದಲ್ಲೇ ನಾಲ್ವರು ಯುವಕರು ಮಂಗಳವಾರ ಫಿಲ್ಮಿ ಸ್ಟೈಲ್‌ನಲ್ಲಿ ಬಂದು ಅಪಹರಣ (Abduction) ಮಾಡಿದ್ದರು. ಆದರೆ ಘಟನೆ ಇದೀಗ ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಯುವತಿ ಕಿಡ್ನಾಪರ್‌ನನ್ನೇ (Kidnapper) ಮದುವೆಯಾಗಿದ್ದಾಳೆ.
ತೆಲಂಗಾಣದಲ್ಲಿ (Telangana) ನಡೆದ ಅಪಹರಣ ಪ್ರಕರಣ ನಿಜವಾಗಿಯೂ ಕಿಡ್ನಾಪ್ (Kidnap) ಆಗಿರಲಿಲ್ಲ. ತನ್ನ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ಯುವತಿ ತನ್ನ ಪ್ರೇಮಿಯನ್ನು ಮದುವೆಯಾಗಲು ತಾನೇ ಕಿಡ್ನಾಪ್ ಮಾಡಿಸಿದ ವಿಚಾರ ಬೆಳಕಿಗೆ ಬಂದಿದೆ. ಯುವತಿ ತನ್ನನ್ನು ಕಿಡ್ನಾಪ್ ಮಾಡಿದ ಯುವಕನನ್ನೇ ಮದುವೆಯಾಗಿದ್ದಾಳೆ (Marriage).
Advertisement
To dear Godi Media ,
Who have been telephoning us for reaction on a story in your desperate attempt to malign Governance of Telangana based on a video footage alleging kidnap, here the Girl is saying that she wasn’t kidnapped and married the boy whom she loved . pic.twitter.com/0YiSmIjgbl
— krishanKTRS (@krishanKTRS) December 20, 2022
Advertisement
ಚಂದೂರ್ತಿ ಮಂಡಲದ ಮೂಡೆಪಲ್ಲಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಸುಮಾರು 5:30ರ ವೇಳೆಗೆ ಯುವತಿ ತನ್ನ ತಂದೆಯೊಂದಿಗೆ ದೇವಾಲಯಕ್ಕೆ ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ನಾಲ್ವರು ಯುವಕರು ಯುವತಿಯನ್ನು ಅಪಹರಣ ಮಾಡಿದ್ದರು. ಯುವಕರು ಬಲವಂತವಾಗಿ ಯುವತಿಯನ್ನು ಎಳೆದೊಯ್ದು, ಕಾರಿನಲ್ಲಿ ಕುಳ್ಳಿರಿಸಿ ಪರಾರಿಯಾಗಿರುವುದು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.
Advertisement
#WATCH | Telangana: An 18-year-old girl was kidnapped in front of her father when they were returning to their house after visiting a temple, in the Sircilla district
(CCTV visuals) pic.twitter.com/GYedm9jkHJ
— ANI (@ANI) December 20, 2022
Advertisement
ಇದಾದ ಬಳಿಕ ಯುವತಿ ತನ್ನನ್ನು ಕಿಡ್ನಾಪ್ ಮಾಡಿದ ಯುವಕರಲ್ಲಿ ಒಬ್ಬನಾದ ತನ್ನ ಪ್ರೇಮಿಯನ್ನು ಮದುವೆಯಾಗಿದ್ದಾಳೆ. ಮದುವೆಯ ಬಳಿಕ ಯುವತಿ ವೀಡಿಯೋವೊಂದನ್ನು ಮಾಡಿದ್ದು, ನಾನು ಈ ವ್ಯಕ್ತಿಯನ್ನು ಕಳೆದ 4 ವರ್ಷದಳಿಂದ ಪ್ರೀತಿಸುತ್ತಿದ್ದೇನೆ. 1 ವರ್ಷದ ಹಿಂದೆಯೇ ನಮ್ಮ ಮದುವೆಯೂ ಆಗಿತ್ತು. ಆದರೆ ನಾನು ಅಪ್ರಾಪ್ತೆಯಾಗಿದ್ದರಿಂದ ನಾವು ಒಟ್ಟಿಗೆ ಇರಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದ್ದಾಳೆ. ಇದನ್ನೂ ಓದಿ: ಕಾರಿನಲ್ಲೇ ನೈಟ್ರೋಜನ್ ಸಿಲಿಂಡರ್ ಲೀಕ್ ಮಾಡ್ಕೊಂಡು ಸೀನಿಯರ್ ಟೆಕ್ಕಿ ಆತ್ಮಹತ್ಯೆ
ನನ್ನ ಪೋಷಕರು ಆತನ ವಿರುದ್ಧ ಪ್ರಕರಣ ದಾಖಲಿಸಿ, ನನ್ನನ್ನು ಮನೆಗೆ ಕರೆದೊಯ್ದಿದ್ದರು. ಆತ ದಲಿತ ಕುಟುಂಬದವನಾಗಿದ್ದರಿಂದ ನಮ್ಮ ಮದುವೆಯನ್ನು ಮನೆಯಲ್ಲಿ ಒಪ್ಪಿಕೊಂಡಿರಲಿಲ್ಲ. ನನಗೆ ಮನೆಯಲ್ಲಿ ಬೇರೆ ಮದುವೆಯನ್ನೂ ಏರ್ಪಡಿಸಲಾಗಿತ್ತು. ಈ ವೇಳೆ ನಾನು ಆತನನ್ನು ಓಡಿಹೋಗಲು ಕೇಳಿಕೊಂಡೆ. ಇದಕ್ಕೆ ಆತ ಒಪ್ಪಿದ. ನಮ್ಮ ಕುಟುಂಬದಿಂದ ನಮಗೆ ಬೆದರಿಕೆ ಇರುವುದರಿಂದ ನಮಗೆ ರಕ್ಷಣೆಯ ಅಗತ್ಯವಿದೆ ಎಂದು ಯುವತಿ ವೀಡಿಯೋದಲ್ಲಿ ಹೇಳಿದ್ದಾಳೆ.
ಅಪಹರಣವಾದ ಬಳಿಕ ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ಇದನ್ನು ವರದಿ ಮಾಡಲಾಗಿತ್ತು. ಅಪಹರಣದ ವೇಳೆ ಯುವತಿಯ ತಂದೆ ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದ್ದು ವೀಡಿಯೋದಲ್ಲಿ ಕಂಡುಬಂದಿದೆ. ನನ್ನ ಮಗಳನ್ನು ಕಿಡ್ನಾಪ್ ಮಾಡುವುದಕ್ಕೂ ಮೊದಲು ಆರೋಪಿಗಳು ನನಗೆ ಥಳಿಸಿದ್ದಾರೆ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ. ಇದನ್ನೂ ಓದಿ: ಸ್ನೇಹಿತರನ್ನು ಮೆಚ್ಚಿಸಲು ಪಾರ್ಟಿಗೆ ಗನ್ ತೆಗೆದುಕೊಂಡು ಹೋದ ವ್ಯಕ್ತಿ ಪೊಲೀಸರಿಗೆ ಅತಿಥಿಯಾದ
ಯುವತಿ ತಂದೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ತನಿಖೆ ವೇಳೆ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ತಿಳಿಸಿದ್ದಾರೆ.