ಕನ್ನಡತಿ ಶ್ರೀಲೀಲಾಗೆ ಸರಸ್ವತಿ ವರಪ್ರಸಾದ ಎಂದು ಹೊಗಳಿದ ಬಾಲಯ್ಯ

Public TV
2 Min Read
sreeleela 1 1

ನ್ನಡದ ನಟಿ ಶ್ರೀಲೀಲಾ (Sreeleela) ಇದೀಗ ತೆಲುಗು ಚಿತ್ರರಂಗದಲ್ಲಿ (Tollywood) ಸೌಂಡ್ ಮಾಡ್ತಿದ್ದಾರೆ. ಟಾಪ್ ಸ್ಟಾರ್ ನಟರಿಗೆ ನಾಯಕಿಯಾಗಿ ಶ್ರೀಲೀಲಾ ಮೆರೆಯುತ್ತಿದ್ದಾರೆ. ‘ಧಮಾಕ’ (Dhamaka)  ಸಕ್ಸಸ್ ನಂತರ 10ಕ್ಕೂ ಹೆಚ್ಚು ಸಿನಿಮಾಗಳಿಗೆ ಲೀಲಾ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಕನ್ನಡದ ನಟಿಮಣಿಗೆ ಇರುವ ಡಿಮ್ಯಾಂಡ್ ನೋಡಿ, ಸಮಾರಂಭವೊಂದರಲ್ಲಿ ಶ್ರೀಲೀಲಾ ಸರಸ್ವತಿ ವರಪ್ರಸಾದ ಎಂದು ಹಾಡಿಹೊಗಳಿದ್ದಾರೆ.

sreeleela 3

ರಾಮ್ ಪೋತಿನೇನಿ(Ram Pothineni)- ಶ್ರೀಲೀಲಾ ನಟನೆಯ ಸ್ಕಂದ ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಶ್ರೀಲೀಲಾ ಅತಿಥಿಯಾಗಿ ಆಗಮಿಸಿದ್ದರು. ಆಗ ಶ್ರೀಲೀಲಾ ಬಗ್ಗೆ ನಟನೆ, ಆಕೆಯ ಶಿಸ್ತಿನ ಬಗ್ಗೆ ಬಾಲಯ್ಯ ಕೊಂಡಾಡಿದ್ದರು. ಶ್ರೀಲೀಲಾ ಸಂಪ್ರದಾಯಬದ್ಧ ತೆಲುಗು ಹುಡುಗಿ. ತೆಲುಗು ಚಿತ್ರರಂಗಕ್ಕೆ ಹಲವು ನಟಿಯರು ಬಂದಿದ್ದಾರೆ. ಆದರೆ ಕೆಲವರಿಗೆ ಮಾತ್ರವೇ ಇಲ್ಲಿಯೇ ನೆಲೆ ನಿಲ್ಲಲು ಸಾಧ್ಯವಾಗಿದೆ. ಅಂತೆಯೇ ಶ್ರೀಲೀಲಾಗೂ ಸಹ ಇಲ್ಲಿ ಬಹಳ ಒಳ್ಳೆಯ ಭವಿಷ್ಯವಿದೆ ಎಂದ ಬಾಲಕೃಷ್ಣ(Balakrishna) ಶ್ರೀಲೀಲಾ ಅಂದದ ಬಗ್ಗೆ ಹಿಂದಿಯಲ್ಲಿ ಯಾರಿಗೂ ಅರ್ಥವಾಗದಂಥಹಾ ಡೈಲಾಗ್ ಒಂದನ್ನು ಸಹ ಹೊಡೆದರು. ಬಾಲಕೃಷ್ಣ ಡೈಲಾಗ್‌ಗೆ ಶ್ರೀಲೀಲಾ ಸಹಿತ ಎಲ್ಲರೂ ನಕ್ಕರಾದರೂ ಯಾರಿಗೂ ಅರ್ಥವಾಗಲಿಲ್ಲ. ಇದನ್ನೂ ಓದಿ:ಎಲ್ಲವನ್ನೂ ಕಾಲವೇ ನಿರ್ಧರಿಸುತ್ತದೆ- ಜೋಡೆತ್ತು ಜೊತೆ ಡಿ ಬಾಸ್ ಪೋಸ್ಟ್ ವೈರಲ್

sreeleela 4

ಶ್ರೀಲೀಲಾಗೆ ಸೌಂದರ್ಯವಿದೆ ಜೊತೆಗೆ ಅಭಿನಯವೂ ಇದೆ. ಅಭಿನಯದ ಜೊತೆಗೆ ಡ್ಯಾನ್ಸ್ ಕಲೆಯೂ ಇದೆ. ಇವೆಲ್ಲವನ್ನೂ ಸೇರಿಸಿ ನಮಗೆ ಸಿಕ್ಕಿರುವ ಒಳ್ಳೆಯ ನಟಿ. ಸರಸ್ವತಿ ದೇವಿಯ ವರ ಪ್ರಸಾದ. ನಾನೂ ಸಹ ಅವರೊಟ್ಟಿಗೆ ‘ಭಗವಂತ್ ಕೇಸರಿ’ (Bhagavantha Kesari) ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಸೆಟ್‌ನಲ್ಲಿ ಅವರ ಶ್ರಮ, ಪ್ರತಿ ಸೀನ್ ಮಾಡುವಾಗಲೂ ತೋರುವ ಶ್ರದ್ಧೆಯನ್ನು ಪ್ರತಿದಿನವೂ ನೋಡುತ್ತಿದ್ದೇನೆ. ಇಷ್ಟು ಒಳ್ಳೆಯ ನಟಿಯಾಗಿದ್ದರೂ, ಇಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದರೂ ಸಾಮಾನ್ಯರಂತೆ ವರ್ತಿಸುತ್ತಾರೆ ಅದು ನನಗೆ ಬಹಳ ಇಷ್ಟವಾಗುತ್ತದೆ. ಆಕೆಗೆ ಒಳ್ಳೆಯ ಭವಿಷ್ಯ ಸಿಗಲಿ ಎಂದು ಬಾಲಯ್ಯ ಹಾರೈಸಿದ್ದಾರೆ.

ಕನ್ನಡದ ‘ಕಿಸ್’ (Kiss Film) ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ತೆಲುಗಿನ ಪೆಳ್ಳಿ ಸಂದಡಿ, ‘ಧಮಾಕ’ ಸಿನಿಮಾದ ಮೂಲಕ ಸಕ್ಸಸ್ ಕಂಡರು. ಈಗ ವಿಜಯ್ ದೇವರಕೊಂಡ, ನಿತಿನ್, ಐಕಾನ್ ಸ್ಟಾರ್ ಅಲ್ಲು ಅರ್ಜುನ್, ಮಹೇಶ್ ಬಾಬು ಹೀಗೆ ಸೂಪರ್ ಸ್ಟಾರ್‌ಗಳಿಗೆ ಶ್ರೀಲೀಲಾ ಹೀರೋಯಿನ್ ಆಗಿ ರಶ್ಮಿಕಾ ಠಕ್ಕರ್ ಕೊಡ್ತಿದ್ದಾರೆ. ನಿರ್ದೇಶಕರ ಪಾಲಿನ ನೆಚ್ಚಿನ ನಟಿಯಾಗಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article