ಬೆಂಗಳೂರು: ಹಣಕ್ಕಾಗಿ ಟೆಕ್ಕಿಯಿಂದಲೇ ಟೆಕ್ಕಿಯನ್ನು ಕಿಡ್ನಾಪ್ ಮಾಡಿದ ಪ್ರಕರಣ ಆಗಸ್ಟ್ 25ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಅಪಹರಣ ಪ್ರಕರಣವನ್ನು ಇದೀಗ ಬೆಂಗಳೂರು ಪೊಲೀಸರು ಬೇಧಿಸಿದ್ದಾರೆ.
Advertisement
ಬೆಂಗಳೂರಿನಲ್ಲಿ ಆಗಸ್ಟ್ 25ರಂದು ಟೆಕ್ಕಿ ವಿನೀತ್ ಕಿಡ್ನಾಪ್ ಆಗಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ತನಿಖೆ ಮುಂದುವರಿಸುತ್ತಿದ್ದಂತೆ ಸ್ನೇಹಿತನಾಗಿದ್ದ ಇನ್ನೋರ್ವ ಟೆಕ್ಕಿ ಎಡ್ವಿನ್ ಪ್ರಶಾಂತ್ ಎಂಬಾತ ಹಣದ ಆಸೆಗಾಗಿ ಕಿಡ್ನಾಪ್ ಮಾಡಿರುವ ಬಗ್ಗೆ ತಿಳಿದುಬಂದಿದೆ. ವಿನೀತ್ ಹಾಗೂ ಎಡ್ವಿನ್ ಪ್ರಶಾಂತ್ ಇಬ್ಬರು ಕೂಡ ಸ್ನೇಹಿತರಾಗಿದ್ದರು. ಜೊತೆಗೆ ಒಂದು ವ್ಯವಹಾರ ಆರಂಭಿಸಿದ್ದರು. ಇದರಲ್ಲಿ ಬಂದ ಹಣದಲ್ಲಿ 10 ಲಕ್ಷ ರೂ.ವನ್ನು ವಿನೀತ್, ಎಡ್ವಿನ್‍ಗೆ ಕೊಡಬೇಕಿತ್ತು. ಆ.25ಕ್ಕೆ ವಿನೀತ್‍ಗೆ 5 ಕೋಟಿ ಜಮೆ ಬಗ್ಗೆ ಸುಳಿವು ಪಡೆದ ಎಡ್ವಿನ್ ಮತ್ತು ಆತನ ಸಹಚರರು ಪ್ಲಾನ್ ಮಾಡಿ 5 ಕೋಟಿ ದೋಚಲು ವಿನೀತ್‍ನನ್ನು ಕಿಡ್ನಾಪ್ ಮಾಡಿದ್ದಾರೆ. ಇದನ್ನೂ ಓದಿ: ಮನೆಯ ಮೇಲ್ಛಾವಣಿ ಕುಸಿತ- ಅವಶೇಷಗಳಡಿಯಿಂದ ವೃದ್ಧೆಯ ರಕ್ಷಣೆ
Advertisement
Advertisement
ವಿನೀತ್‍ನನ್ನು ಬೆಂಗಳೂರಿನಲ್ಲಿ ಕಿಡ್ನಾಪ್ ಮಾಡಿ ಕಾರಿನಲ್ಲಿ ಚೆನ್ನೈಗೆ ತಲುಪಿದ್ದರು. ತನಿಖೆ ವೇಳೆ ಕಾರಿನ ಫಾಸ್ಟಾಗ್ ಮೂಲಕ ಕೇಸ್ ಸುಳಿವು ಪತ್ತೆ ಹಚ್ಚಿದ ಪೊಲೀಸರು, ಕೃತ್ಯಕ್ಕೆ ಬಳಸಿದ್ದ ಕಾರ್ ಮಾಲೀಕನಿಂದ ಮಾಹಿತಿ ಕಲೆಹಾಕಿದ್ದಾರೆ. ಕಿಡ್ನಾಪ್ ಬಳಿಕ ಕಾರು ಚೆನೈಗೆ ಹೊಗಿರೋದು ಕನ್ಫರ್ಮ್ ಮಾಡಿಕೊಂಡು ಟೋಲ್‍ನಲ್ಲಿ ಫಾಸ್ಟಾಗ್ ಆಪರೇಟ್ ಆದಾಗ ಈ ಕೇಸ್ ಬಗ್ಗೆ ಮಾಹಿತಿ ಸಿಕ್ಕಿದೆ. ಬಳಿಕ ಸಂತ್ರಸ್ತ ವಿನೀತ್ ಕಡೆಯವರ ಮೂಲಕ ಪೊಲೀಸರು ಜೊತೆ ಸೇರಿ ಆರೋಪಿಗಳಿಗೆ ಹಣ ವರ್ಗಾವಣೆ ಮಾಡಲು ಮುಂದಾಗಿದ್ದಾರೆ. ಹಣ ಜಮೆಯಾದ ಬಳಿಕ ಕಾರ್ಡ್ ಸ್ವೈಪ್ ಮಾಡಿ ಆರೋಪಿಗಳು ಹಣ ತೆಗೆದಿದ್ದಾರೆ. ಇದನ್ನು ಆಧರಿಸಿ ಕಾರ್ಡ್ ಸ್ವೈಪ್ ಆದ ಜಾಗದ ಮಾಹಿತಿಯನ್ನು ಪೊಲೀಸರು ಪಡೆದಿದ್ದರು. ಇದನ್ನೂ ಓದಿ: ಭೋಜನ ಕೂಟದಲ್ಲೂ ಆಪರೇಷನ್ ಹಸ್ತದ ಬಗ್ಗೆ ಎಚ್ಚರಿಕೆ ನೀಡಿದ ಬಿಎಸ್‍ವೈ
Advertisement
ಆರೋಪಿಗಳು ಹಣ ತೆಗೆದ ಬಳಿಕ ಪ್ರತಿ 5 ಗಂಟೆಗಳಿಗೊಮ್ಮೆ 50 ಕಿ.ಮೀ ವ್ಯಾಪ್ತಿಯಿಂದ ಫೋನ್ ಕರೆ ಮಾಡುತ್ತಿದ್ದರು. ಬಳಿಕ ಫೋನ್ ಸ್ವಿಚ್ ಆಫ್ ಮಾಡುತ್ತಿದ್ದರು. ಹೀಗೆ ಪ್ರತಿ ಬಾರಿ ಯಾವ ಕಡೆಗಳಿಂದ ಕರೆ ಬರುತ್ತಿದೆ ಅನ್ನೋದರ ಮ್ಯಾಪಿಂಗ್ ಮಾಡಿ ನಂತರ ಪೊಲೀಸರು, ಸಿನೆಮಾ ಸ್ಟೈಲ್‍ನಲ್ಲಿ ಆಪರೇಶನ್‍ಗಿಳಿದಿದ್ದಾರೆ. ಸದ್ಯ ಕೋರಮಂಗಲ ಪೊಲೀಸರಿಂದ ಎಡ್ವಿನ್ ಪ್ರಶಾಂತ್, ಸಂತೋಷ್ ಹಾಗೂ ಅರಿವೇಗಲನ್ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗೆ ಬಲೆಬೀಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿಗೆ ಹೆಚ್‍ಡಿಕೆ ಟಕ್ಕರ್ – ಸಿ.ಎಂ ಇಬ್ರಾಹಿಂ ಜೆಡಿಎಸ್ ಸೇರೋದು ಪಕ್ಕಾ!