– ಮೋದಿ 3ನೇ ಬಾರಿ ಪ್ರಧಾನಿ ಆಗ್ತಾರೆ ಎಂದ ಸಂಸದ
ರಾಮನಗರ: ಕಾಂಗ್ರೆಸ್‌ಗೆ ವಿರುದ್ಧವಾದ ಜನಾದೇಶ ಬಂದ್ರೆ ಅವರಿಗೆ ಎಕ್ಸಿಟ್ ಪೋಲ್ ಅಥವಾ ಇವಿಎಂ (Exit Poll And EVM) ಮೇಲೆ ನಂಬಿಕೆ ಇರಲ್ಲ. ಅವರ ಹೇಳಿಕೆಗಳಿಗೆ ನಾವೇನು ತಲೆ ಕೆಡಿಸಿಕೊಳ್ಳಲ್ಲ ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ತಿರುಗೇಟು ನೀಡಿದ್ದಾರೆ.
ಲೋಕಸಭಾ ಚುನಾವಣೆಯ (Lok Sabha Elections) ಎಕ್ಸಿಟ್ ಪೋಲ್ ಸಮೀಕ್ಷೆಗಳ ಕುರಿತು `ಪಬ್ಲಿಕ್ ಟಿವಿ’ ಜೊತೆಗೆ ರಾಮನಗರದಲ್ಲಿ ಮಾತನಾಡಿದ ಅವರು, ಪ್ರಾರಂಭದಲ್ಲೇ ನರೇಂದ್ರ ಮೋದಿ `ಅಪ್ ಕಿ ಬಾರ್ ಚಾರ್ ಸೌ ಪಾರ್’ ಅಂತ ಹೇಳಿದ್ದರು. ಚುನಾವಣೋತ್ತರ ಸಮೀಕ್ಷೆಗಳನ್ನ ನೋಡಿದ್ರೆ ಆ ಘೋಷಣೆಗೆ ಜನ ಸ್ಪಂದಿಸಿದ್ದಾರೆ ಅನ್ನಿಸುತ್ತಿದೆ. ಕಳೆದ 10 ವರ್ಷಗಳಲ್ಲಿ ದೇಶ ಸಾಕಷ್ಟು ಪ್ರಗತಿ ಕಂಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಟೆರರಿಸಂ, ನಕ್ಸಲಿಸಂ ಬಂದ್ ಆಗಿದೆ, ಆರ್ಥಿಕತೆ ಗಟ್ಟಿಯಾಗಿದೆ. ಅಭಿವೃದ್ಧಿ ಕೆಲಸಗಳು ಜನರ ಅನುಭವಕ್ಕೆ ಬಂದಿವೆ. ಹಾಗಾಗಿ ಜನ ನರೇಂದ್ರ ಮೋದಿಗೆ ಕಮಿಟ್ ಆಗಿ ವೋಟ್ ಮಾಡಿದ್ದಾರೆ. 2014ರಲ್ಲಿ ಎನ್‌ಡಿಎ ಪರವಾಗಿ ಎಷ್ಟು ಎಕ್ಸಿಟ್ ಪೋಲ್ ಕೊಟ್ಟಿದ್ದ ವರದಿಗಿಂತ ಹೆಚ್ಚು ಸ್ಥಾನ ಬಂದಿತ್ತು. ಈಗಲೂ ಎಕ್ಸಿಟ್ ಪೋಲ್ ಕೊಟ್ಟಿರೋ ಸಂಖ್ಯೆಗಿಂತ ಬಿಜೆಪಿ 30 ಸ್ಥಾನಗಳು ಹೆಚ್ಚು ಬರಲಿದೆ. 3ನೇ ಬಾರಿಗೆ ನರೇಂದ್ರ ಮೋದಿ ದೇಶದ ಪ್ರಧಾನಿ ಆಗ್ರಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೋದಿ ಮತ್ತೊಮ್ಮೆ ಪ್ರಧಾನಿಯಾಗ್ತಾರೆ- ಭವಿಷ್ಯ ನುಡಿದ ಕಾಲ ಭೈರವೇಶ್ವರನ ಶ್ವಾನ
ಎಕ್ಸಿಟ್ ಪೋಲ್ ಬಗ್ಗೆ ನಂಬಿಕೆ ಇಲ್ಲ ಎಂಬ ಕಾಂಗ್ರೆಸ್ ನಾಯಕರ (Congress Leader) ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ಸಿಗರು ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಎಕ್ಸಿಟ್ ಪೋಲ್ ನಂಬಿದ್ದರು. ಈಗ ಎಕ್ಸಿಟ್ ಪೋಲ್ ನಂಬಲ್ಲ ಅಂತಾರೆ. ಅವರ ವಿರುದ್ಧವಾದ ಆದೇಶ ಬಂದ್ರೆ ಅವರಿಗೆ ಎಕ್ಸಿಟ್ ಪೋಲ್ ಮೇಲೆ, ಇವಿಎಂ ಮೇಲೆ ನಂಬಿಕೆ ಬರಲ್ಲ. ಹಾಗಾಗಿ ಅವರ ಹೇಳಿಕೆಗೆ ತಲೆಕೆಡಿಸಿಕೊಳ್ಳಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ವೈದ್ಯಕೀಯ, ಎಂಜಿನಿಯರಿಂಗ್ – ಒಟ್ಟಿಗೇ ಕೌನ್ಸೆಲಿಂಗ್; ನೀಟ್ ಫಲಿತಾಂಶದ ನಂತರ ದಿನಾಂಕ ನಿಗದಿ – ಕೆಇಎ
ರಾಜ್ಯದಲ್ಲಿ ಮೈತ್ರಿ ಸಕ್ಸಸ್ ಆಗಿದೆ, ಹಾಗಾಗಿ ಹೆಚ್ಚು ಸ್ಥಾನ ನಮಗೆ ಸಿಗಲಿದೆ. ಗ್ಯಾರಂಟಿ ಯೋಜನೆಗಳಿಂದ ಆಗ್ತಿರೋ ಆರ್ಥಿಕ ಸಂಕಷ್ಟವನ್ನ ಜನ ನೋಡಿದ್ದಾರೆ. ಅಲ್ಲದೇ ಕಾಂಗ್ರೆಸ್ ನಾಯಕರ ದೇಶ ವಿಭಜನೆ ಹೇಳಿಕೆಗಳನ್ನು ಗಮನಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ರಾಜ್ಯದಲ್ಲೂ ಜನ ಕಾಂಗ್ರೆಸ್ ತಿರಸ್ಕರಿಸಿ ಮೋದಿಗೆ ಬೆಂಬಲ ನೀಡಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.