– ಇಡೀ ಸಮಸ್ಯೆಯ ಮೂಲವೇ ಈ ವಕ್ಫ್ ಅದಾಲತ್
– ಮುಸ್ಲಿಂ ಮತ ಬ್ಯಾಂಕ್‌ಗೆ 1995, 2013 ರಲ್ಲಿ ವಕ್ಫ್‌ಬೋರ್ಡ್‌ಗೆ ಪರಮಾಧಿಕಾರ
ಬೆಂಗಳೂರು: ಕಾಂಗ್ರೆಸ್ (Congress) ಅಮಿಷಕ್ಕೆ ಬಲಿಯಾದರೆ ಮುಂದೆ ಧರ್ಮಸ್ಥಳ ದೇವಸ್ಥಾನ (Dharmasthala), ಶೃಂಗೇರಿ ಮಠಗಳೂ (Sringeri Mutt) ಉಳಿಯುವುದಿಲ್ಲ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿದ್ದಾರೆ.
ರೈತರಿಗೆ ವಕ್ಫ್ ಬೋರ್ಡ್‌ನಿಂದ ನೋಟಿಸ್ ನೀಡಿದ ವಿಚಾರಕ್ಕೆ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗ ಉಚಿತ ಬಸ್ಸು ಇದೆ ಎಂದು ಶೃಂಗೇರಿ, ಧರ್ಮಸ್ಥಳ ಅಂತ ಓಡಾಡುತ್ತಿದ್ದೀರಿ. ಹೀಗೆ ಉಚಿತ ಕೊಡುತ್ತಾರೆ ಎಂದು ಕಾಂಗ್ರೆಸ್‌ಗೆ ಮತ ಹಾಕಿದರೆ ಮುಂದಿನ ದಿನಗಳಲ್ಲಿ ಉಚಿತ ಬಸ್ಸೂ ಇರುವುದಿಲ್ಲ. ನೋಡಲು ಧರ್ಮಸ್ಥಳ ಶೃಂಗೇರಿಯೂ ಇರುವುದಿಲ್ಲ. ಅದು ವಕ್ಫ್ ಅಂತ ಹೇಳುತ್ತಾರೆ ಎಂದು ಕಿಡಿಕಾರಿದರು.
Advertisement
ವಕ್ಫ್ ಸಭೆಯ ನಡಾವಳಿಯಲ್ಲಿ ಸಿಎಂ ಸೂಚನೆ ಎಂದೇ ಉಲ್ಲೇಖಿಸಲಾಗಿದೆ. ವಕ್ಫ್ ಅದಾಲತ್ ಕಲ್ಪನೆ ಸಂವಿಧಾನದಲ್ಲಿ ಹೇಳಿದ್ಯಾ? ಯಾವ ಕಾನೂನಿನಲ್ಲಿ ಬಂದಿದೆ? ವಕ್ಫ್ ಕಾಯ್ದೆ, ಕಂದಾಯ ಕಾಯ್ದೆಯಡಿ ವಕ್ಫ್ ಅದಾಲತ್ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
Advertisement
Advertisement
ಈ ವಕ್ಫ್ ಅದಾಲತ್ ಎನ್ನುವುದು ಸಿದ್ದರಾಮಯ್ಯ (Siddaramaiah) ಸರ್ಕಾರದ ಸಂಶೋಧನೆ. ಕೇಂದ್ರ ಸರ್ಕಾರ ವಕ್ಫ್ ನಿಯಮಕ್ಕೆ ತಿದ್ದುಪಡಿ ತರಲು ಮುಂದಾಗಿದೆ. ಅದಕ್ಕೂ ಮುನ್ನ ಸಾವಿರಾರು ಎಕ್ರೆ ಜಾಗವನ್ನು ವಕ್ಫ್‌ಗೆ ಕೊಡಲು ಈ ಹುನ್ನಾರ ನಡೆದಿದೆ. ಇವರಿಗೆ ವಕ್ಫ್ ಅದಾಲತ್ ನಡೆಸಲು ಅಧಿಕಾರ ಇಲ್ಲ, ಕಾನೂನಿನಲ್ಲೂ ಅವಕಾಶ ಇಲ್ಲ. ಇಡೀ ಸಮಸ್ಯೆಯ ಮೂಲವೇ ಈ ವಕ್ಫ್ ಅದಾಲತ್ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಜ್ಯದಲ್ಲಿ ನಿಲ್ಲದ ವಕ್ಫ್ ಅವಾಂತರ – ಹಿಂದೂ ಅಷ್ಟೇ ಅಲ್ಲ, ಮುಸ್ಲಿಮರ ಪಹಣಿಯಲ್ಲೂ ವಕ್ಫ್!
Advertisement
ನಮ್ಮ ಸರ್ಕಾರ ಅವಧಿಯಲ್ಲೂ ನೋಟಿಸ್ ಹೋಗಿದೆ. ಆದರೆ ಅದು ವಕ್ಫ್ ಬೋರ್ಡ್‌ನಿಂದ ಹೋಗಿದೆ. ಆದರೆ ವಕ್ಫ್ ಅದಾಲತ್ ನಡೆಸಲು ನಮ್ಮ ಸರ್ಕಾರ ಸೂಚನೆ ನೀಡಿಲ್ಲ. ಹಿಂದೆ ಅಕ್ಬರ್, ಔರಾಂಗಜೇಬ್, ಟಿಪ್ಪು ಸುಲ್ತಾನ್ ಅವಧಿಯಲ್ಲಿ ದೇವಸ್ಥಾನ ಒಡೆಯಲು ಮತ್ತು ಮತಾಂತರ ಮಾಡಲು ಟಾರ್ಗೆಟ್ ನೀಡಲಾಗಿತ್ತು. ಇದು ನಾನು ಹೇಳುತ್ತಿಲ್ಲ. ಅಂದಿನ ಇತಿಹಾಸಕಾರರೇ ಪುಸ್ತಕಗಳಲ್ಲಿ ದಾಖಲೆ ನೀಡಿದ್ದಾರೆ. ಈಗ ಅದೇ ರೀತಿಯಾಗಿ ಹಿಂದೂಗಳ ಆಸ್ತಿ ಒಡೆಯಲು ಸಿದ್ದರಾಮಯ್ಯ ಸರ್ಕಾರ ವಕ್ಫ್ ಅದಾಲತ್ ನಡೆಸಿ ಟಾರ್ಗೆಟ್ ನೀಡಿದೆ ಎಂದು ಆಕ್ರೋಶ ಹೊರಹಾಕಿದರು.
ವಕ್ಫ್ ವಿಚಾರದಲ್ಲಿ ಈಗ ಸಾಕಷ್ಟು ವಿಚಾರಗಳು ಹೊರಗೆ ಬರುತ್ತಿವೆ. ಈಗಾಗಲೇ ನಮ್ಮ ಪಕ್ಷದ ನಿಯೋಗ ವಿಜಯಪುರ ಭೇಟಿ ಮಾಡಿ ಪರಿಶೀಲಿಸಿದೆ. ಬೇರೆಲ್ಲ ಜಿಲ್ಲೆಗಳಿಗೂ ವಕ್ಫ್ ನೋಟಿಸ್, ಪಹಣಿ ದಾಖಲು ಹಬ್ಬಿದೆ. ರಾಜ್ಯದಲ್ಲಿ ನಮಗೆ ಸಿಕ್ಕ ಮಾಹಿತಿ ಪ್ರಕಾರ 50 ಸಾವಿರ ಎಕರೆ ಭೂಮಿಯನ್ನು ವಕ್ಫ್ ತನ್ನದು ಎಂದು ಹೇಳಿಕೊಂಡಿದೆ. ಯಾವ ಜಿಲ್ಲೆಯೂ ಇದರಿಂದ ಹೊರತಾಗಿಲ್ಲ. ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ಆರ್‌ಟಿಸಿ, ಮ್ಯೂಟೇಷನ್, ಪಹಣಿಗಳನ್ನು ಪರಿಶೀಲಿಸಿಕೊಳ್ಳುವುದು ಒಳ್ಳೆಯದು. ನಿಮ್ಮ ಜಮೀನು ಪತ್ರಗಳನ್ನು ಆದಷ್ಟು ಬೇಗ ಒಮ್ಮೆ ಪರಿಶೀಲಿಸಿಕೊಳ್ಳಿ ಎಂದು ಮನವಿ ಮಡಿದರು. ಇದನ್ನೂ ಓದಿ: Waqf Land Row | ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್ : ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
ಮುಸ್ಲಿಂ ಮತಗಳನ್ನು ಗಟ್ಟಿ ಮಾಡಿಕೊಳ್ಳುವ ಉದ್ದೇಶದಿಂದ ವಕ್ಫ್‌ಬೋರ್ಡ್‌ಗೆ 1995 ಮತ್ತು 2013 ರಲ್ಲಿ ಕಾಂಗ್ರೆಸ್ ಪರಮಾಧಿಕಾರ ನೀಡಿತು. 1995 ರಲ್ಲೂ ವಕ್ಫ್ ಟ್ರಿಬ್ಯೂನಲ್‌ಗಳನ್ನು ಶುರು ಮಾಡಿದರು. ಅದಕ್ಕೂ ಮುನ್ನ ವಕ್ಫ್ ತಕರಾರು ಪ್ರಶ್ನಿಸಿ ಜನ ಸಿವಿಲ್ ಕೋರ್ಟಿಗೆ ಹೋಗಬಹುದಿತ್ತು. ಆದರೆ 1995 ರಲ್ಲಿ ಕಾಂಗ್ರೆಸ್ ಸರ್ಕಾರ ಮುಸಲ್ಮಾನರಿಗೆ ಗಿಫ್ಟ್ ಕೊಡಲು ವಕ್ಫ್ ಟ್ರಿಬ್ಯೂನಲ್ ರಚನೆಗೆ ಅವಕಾಶ ನೀಡಿತು. 2013 ರಲ್ಲಿ ವಕ್ಫ್ ಕಾಯ್ದೆಗೆ ಕಾಂಗ್ರೆಸ್ ಸೆಕ್ಷನ್40 ಸೇರಿಸಿತು. ಇದರ ಪ್ರಕಾರ ವಕ್ಫ್ ತೋರಿಸಿದ ಜಾಗಕ್ಕೆ ಗೆಜೆಟ್ ನೊಟಿಫಿಕೇಷನ್ ಹೊರಡಿಸುವ ಅಧಿಕಾರ ನೀಡಿತು. ಈಗ ಕಾಂಗ್ರೆಸ್ ನವರ ಆಮಿಷಕ್ಕೆ ಬಲಿಯಾದರೆ ನಮ್ಮ ಜಮೀನು, ಮಠ, ದೇವಸ್ಥಾನದ ಜಾಗಗಳನ್ನೆಲ್ಲ ಮುಸಲ್ಮಾನರಿಗೆ ಕೊಡುತ್ತಾರೆ ಎಂದು ಕಿಡಿಕಾರಿದರು.
ಜೆಪಿಸಿ ಅಧ್ಯಕ್ಷ ಜಗದಂಬಿಕ ಪಾಲ್ ಅವರು ರಾಜ್ಯಕ್ಕೆ ಬರಬೇಕೆಂದು ನಾನು ಮನವಿ ಮಾಡಿಕೊಂಡಿದ್ದೇನೆ. ಇದರ ಬಗ್ಗೆ ಪತ್ರವನ್ನೂ ಬರೆದಿದ್ದೇನೆ. ನವೆಂಬರ್ 6 ಅಥವಾ 7 ರಂದು ಅವರು ರಾಜ್ಯಕ್ಕೆ ಪ್ರವಾಸ ಮಾಡುವ ಸಾಧ್ಯತೆಯಿದೆ ಎಂದು ತಿಳಿಸಿದರು.