ಪಾಟ್ನಾ: ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ (Reservation) ಕೋಟಾವನ್ನು 85%ಗೆ ಏರಿಕೆ ಮಾಡುವುದಾಗಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ (Tejashwi Yadav) ಹೇಳಿದ್ದಾರೆ.
ಬಿಹಾರದ (Bihar) ಮೋತಿಹಾರಿಯಲ್ಲಿ (Motihari) ನಡೆಯುತ್ತಿರುವ ಮತದಾರರ ಅಧಿಕಾರ ಯಾತ್ರೆಯ (Voter Adhikar Yatra) ಅಂಗವಾಗಿ ಸಂವಿಧಾನ ಸುರಕ್ಷಾ ಸಮ್ಮೇಳನದಲ್ಲಿ (Samvidhaan Suraksha Samelan) ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಂವಿಧಾನವನ್ನು ದುರ್ಬಲಗೊಳಿಸುತ್ತಿದೆ. ಜನರು ತಮ್ಮ ಹಕ್ಕುಗಳನ್ನು ಕಾಪಾಡಲು ಒಂದಾಗಬೇಕು ಎಂದು ಹೇಳಿದರು. ಈಗ ಮತ ಕಳ್ಳತನ, ಮುಂದೆ ಸರ್ಕಾರದ ಕ್ರಮಗಳು ಕ್ರಮೇಣ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳಬಹುದು. ಮೊದಲು, ಅವರು ನಿಮ್ಮ ಮತವನ್ನು, ನಂತರ ನಿಮ್ಮ ಪಡಿತರವನ್ನು, ನಂತರ ನಿಮ್ಮ ಪಿಂಚಣಿಯನ್ನು ಮತ್ತು ಅಂತಿಮವಾಗಿ ನಿಮ್ಮ ಆಸ್ತಿಗಳನ್ನು ಕಸಿದುಕೊಳ್ಳುತ್ತಾರೆ. ಪ್ರಜಾಪ್ರಭುತ್ವವನ್ನು ಸರ್ವಾಧಿಕಾರದಿಂದ ಬದಲಾಯಿಸಲಾಗುತ್ತದೆ ಎಂದರು. ಇದನ್ನೂ ಓದಿ: ಇನ್ಮುಂದೆ ಎಲ್ಲ ಯುದ್ಧ ನೌಕೆಗಳನ್ನು ಭಾರತದಲ್ಲೇ ತಯಾರಿಸಲಾಗುತ್ತದೆ: ರಾಜನಾಥ್ ಸಿಂಗ್
ಇದೇ ವೇಳೆ ಮೀಸಲಾತಿ ಸೌಲಭ್ಯಗಳನ್ನು ಹೆಚ್ಚಿಸುವ ತಮ್ಮ ಪಕ್ಷದ ಭರವಸೆಯನ್ನು ಪುನರುಚ್ಛರಿಸಿದ ತೇಜಸ್ವಿ ಯಾದವ್, ‘ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾವನ್ನು 85%ಗೆ ಏರಿಕೆ ಮಾಡುತ್ತೇವೆ ಎಂದರು. ಅಂತೆಯೇ ಜನರ ಹಕ್ಕುಗಳ ಅಡಿಪಾಯ ಸಂವಿಧಾನ ಎಂದು ಕರೆದ ತೇಜಸ್ವಿ, ಪ್ರಜಾಪ್ರಭುತ್ವವನ್ನು ರಕ್ಷಿಸಲು ಬಯಸಿದರೆ ಅಧಿಕಾರದಲ್ಲಿರುವವರನ್ನು ತೆಗೆದುಹಾಕುವಂತೆ ನಾಗರಿಕರನ್ನು ಒತ್ತಾಯಿಸಿದರು. ಇದನ್ನೂ ಓದಿ: ದೇವರ ವಿರುದ್ಧವೇ ಸೇಡು – 10 ವರ್ಷಗಳಿಂದ ದೇವಸ್ಥಾನದ ಹುಂಡಿ ಹಣ ಕದಿಯುತ್ತಿದ್ದ HIV ಸೋಂಕಿತ ಅರೆಸ್ಟ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಟೀಕಿಸಿದ ಅವರು, ಚಾಚಾ ಸಿಲುಕಿಕೊಂಡಿದ್ದಾರೆ. ಅವರು ಮೊದಲಿನಂತೆಯೇ ಇಲ್ಲ. ಅವರು ಇನ್ನು ಮುಂದೆ ಮುಖ್ಯಮಂತ್ರಿಯಾಗುವುದಿಲ್ಲ ಎಂದರು. ಇದೇ ವೇಳೆ, ಇವರು ನನ್ನ ದೇಹದಲ್ಲೂ ಹರಿಯುತ್ತಿರುವುದು ಲಾಲೂ ಪ್ರಸಾದ್ ಯಾದವ್ ಅವರ ರಕ್ತ ಎಂಬುದನ್ನು ಮರೆತಿದ್ದಾರೆ. ಲಾಲೂ ಜಿ ಸಕ್ರಿಯವಾಗಿಲ್ಲದಿದ್ದರೂ ಅವರ ಪರವಾಗಿ ನಾನು ಹೋರಾಡುತ್ತೇನೆ. ಲಾಲೂ ಪ್ರಸಾದ್ ಯಾದವ್ ತಗ್ಗಿರಬಹುದು. ಅವರ ಮಕ್ಕಳಾದ ನಾವು ಎದ್ದಿದ್ದೇವೆ. ನಾವು ಹೋರಾಟಗಾರರು. ಎಲ್ಲರೂ ಒಂದಾಗಿ. ಇಲ್ಲದಿದ್ದರೆ, ಅವರು ನಿಮ್ಮ ಅಸ್ತಿತ್ವವನ್ನು ಕೊನೆಗೊಳಿಸುತ್ತಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌ಗೆ ಬೆಂಗಳೂರಿನ ನಂಟು – ತಿಮರೋಡಿ ಆಪ್ತ ಜಯಂತ್ ಮನೆ ಜಾಲಾಡಿದ SIT