ಮುಂಬೈ: ಸೌಲಭ್ಯಗಳನ್ನು ಕೊಟ್ಟರೆ ಅದನ್ನು ಜನರು ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಈಗ ಮತ್ತೊಂದು ಉದಾಹರಣೆ ಸಿಕ್ಕಿದೆ. ಭಾರತೀಯ ರೈಲ್ವೇಯ ‘ಭೂಮಿಯ ಮೇಲೆ ಚಲಿಸುವ ವಿಮಾನ’ ಖ್ಯಾತಿಯ ತೇಜಸ್ ರೈಲಿನಲ್ಲಿ ನೀಡಲಾಗಿದ್ದ ಹೆಡ್‍ಫೋನ್‍ಗಳನ್ನು ಕಿಡಿಗೇಡಿ ಪ್ರಯಾಣಿಕರು ಕದ್ದಿದ್ದಾರೆ. ಅಷ್ಟೇ ಅಲ್ಲದೇ ಎಲ್‍ಇಡಿ ಸ್ಕ್ರೀನ್ ಗಳನ್ನು ಜಖಂಗೊಳಿಸಿದ್ದಾರೆ.
ಹೌದು. ಸೋಮವಾರ ರೈಲ್ವೇ ಸಚಿವ ಸುರೇಶ್ ಪ್ರಭು ಮುಂಬೈಯ ಛತ್ರಪತಿ ಶಿವಾಜಿ ಟರ್ಮಿನಲ್ ನಲ್ಲಿ ಈ ರೈಲಿಗೆ ಹಸಿರು ನಿಶಾನೆ ತೋರಿಸಿದ್ದರು. ಮುಂಬೈನಿಂದ ಗೋವಾಗೆ ತೆರಳಿದ್ದ ರೈಲು ಮಂಗಳವಾರ ಮುಂಬೈಗೆ ಹಿಂದಿರುಗಿತ್ತು. ಮರಳಿದ ತೇಜಸ್ ರೈಲಿನ ಒಳಗಡೆ ಪರಿಶೀಲನೆ ನಡೆಸಿದಾಗ ಅಧಿಕಾರಿಗಳು ಶಾಕ್ ಆಗಿದ್ದಾರೆ.
Advertisement
12 ಹೈ ಕ್ವಾಲಿಟಿ ಹೆಡ್‍ಫೋನ್ ಮತ್ತು ಇನ್ಫೋಟೈನ್ಮೆಂಟ್ ಸಿಸ್ಟಂಗಳು ಕಳುವಾಗಿದ್ದರೆ, ಕೆಲವು ಸ್ಕ್ರೀನ್‍ಗಳು ಜಖಂಗೊಂಡಿದೆ ಎಂದು ಎಂದು ರೈಲ್ವೇ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.
Advertisement
ಅಷ್ಟೇ ಅಲ್ಲದೇ ಕಸವನ್ನು ಎಲ್ಲೆಂದರಲ್ಲಿ ಬಿಸಾಡಿರುವುದು ಗಮನಕ್ಕೆ ಬಂದಿದೆ. ಈ ವಿಚಾರ ತಿಳಿದು ಇನ್ನು ಮುಂದೆ ಈ ರೀತಿ ಹಾನಿ ಆಗದೇ ಇರಲು ಪ್ರಯಾಣಿಕರಲ್ಲಿ ಮನವಿ ಮಾಡಲು ಸಿಬ್ಬಂದಿ ಮುಂದಾಗಿದ್ದಾರೆ.
Advertisement
ಕಿಡಿಗೇಡಿ ಪ್ರಯಾಣಿಕರು ಈ ರೀತಿ ಕೃತ್ಯ ಎಸಗಬಹುದು ಎಂದು ರೈಲ್ವೇ ಅಧಿಕಾರಿಗಳು ಮೊದಲೇ ಊಹಿಸಿದ್ದರು. ಆದರೆ ಇಷ್ಟೊಂದು ಪ್ರಮಾಣದಲ್ಲಿ ಆಗಬಹುದು ಎಂದು ಊಹಿಸಿರಲಿಲ್ಲ ಪತ್ರಿಕೆ ವರದಿ ಮಾಡಿದೆ.
Advertisement
ಕಲ್ಲು ತೂರಿದ್ದರು: ಸೋಮವಾರ ಲೋಕಾರ್ಪಣೆಯಾಗುವ ಹಿನ್ನೆಲೆಯಲ್ಲಿ ಈ ರೈಲನ್ನು ಮುಂಬೈ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ಆದರೆ ಭಾನುವಾರ ದುಷ್ಕರ್ಮಿಗಳು ಈ ರೈಲಿಗೆ ಕಲ್ಲು ತೂರಿದ್ದು, ಕಿಟಕಿಯ ಗಾಜನ್ನು ಜಖಂಗೊಳಿಸಿದ್ದರು.
ಈ ರೈಲಿನ ವಿಶೇಷತೆ ಏನು?
#1. ಜರ್ಮನ್ ಕೋಚ್ ಹೊಂದಿರುವ ತೇಜಸ್ ರೈಲಿನ ಪ್ರತಿ ಸೀಟ್‍ನಲ್ಲಿ ಎಲ್‍ಇಡಿ ಸ್ಕ್ರೀನ್, ಕಾಫಿ ಮತ್ತು ಟೀ ಪೂರೈಕೆ ಯಂತ್ರ, ವೈಫೈ ಸಂಪರ್ಕ ಇರಲಿದೆ.
#2. ಈ ರೈಲು 13 ಬೋಗಿಗಳನ್ನು ಒಳಗೊಂಡಿದೆ. ಇದರಲ್ಲಿ 56 ಸೀಟಿನ ಸಾಮರ್ಥ್ಯ ಇರುವ ಒಂದು ಎಕ್ಸ್ ಕ್ಯೂಟಿವ್ ಬೋಗಿ ಇರಲಿದೆ. ಅಷ್ಟೇ ಅಲ್ಲದೇ ಎಲ್ಲ ಬೋಗಿಗಳಿಗೆ ಸ್ವಯಂಚಾಲಿತ ಬಾಗಿಲುಗಳು ಇರಲಿದೆ.
#3. ಈ ರೈಲು ಸಿಸಿಟಿವಿ ಕ್ಯಾಮೆರಾಗಳನ್ನು ಹೊಂದಿದ್ದು ಬೆಂಕಿ ನಿರೋಧಕ ಮತ್ತು ಹೊಗೆ ಪತ್ತೆ ಹಚ್ಚುವ ವ್ಯವಸ್ಥೆಯನ್ನು ಹೊಂದಿದೆ. ಅಷ್ಟೇ ಅಲ್ಲದೇ ಕೋಚ್ ನಲ್ಲಿ ಗ್ರಾಫ್ಫಿಟಿ ಪೇಂಟ್ ಬಳಸಲಾಗಿದೆ. ಇದರಿಂದಾಗಿ ಕೋಚ್ ಸ್ವಚ್ಛವಾಗಿರಲಿದೆ.
#4. ಆರಂಭಿಕ ಹಂತವಾಗಿ ಈ ರೈಲು ವಾರದ ಐದು ದಿನಗಳ ಕಾಲ ಮುಂಬೈ ಮತ್ತು ಗೋವಾ ಮಧ್ಯೆ ಸಂಚರಿಸಲಿದೆ. ಮಳೆಗಾಲದಲ್ಲಿ ಮೂರು ದಿನಗಳಿಗೊಮ್ಮೆ ಸಂಚರಿಸಲಿದೆ.
#5. 640 ಕಿ.ಮೀ ಕ್ರಮಿಸುವ ಈ ರೈಲಿನಲ್ಲಿ ಎಕ್ಸಿಕ್ಯೂಟಿವ್ ಕೋಚ್ ಟಿಕೆಟ್ ಬೆಲೆ ಆಹಾರ ಸೇರಿ 2680 ರೂ. ಇದ್ದರೆ, ಆಹಾರವಿಲ್ಲದ 1 ಟಿಕೆಟಿಗೆ 2525ರೂ. ನಿಗದಿಯಾಗಿದೆ. ಎಸಿ ಚೇರ್ ಗೆ ಆಹಾರದೊಂದಿಗೆ 1280 ರೂ. ನಿಗದಿಯಾಗಿದ್ದರೆ, ಆಹಾರವಿಲ್ಲದ ಟಿಕೆಟಿಗೆ 1155 ರೂ. ನಿಗದಿಯಾಗಿದೆ.
#6. ವಿಮಾನದ ಟಿಕೆಟ್ ದರಕ್ಕಿಂತ ತೇಜಸ್ ರೈಲಿನ ದರ ಅಗ್ಗವಾಗಿದ್ದು, ಶತಬ್ದಿ ಎಕ್ಸ್ ಪ್ರೆಸ್ ರೈಲಿಗಿಂತ ಶೇ.20 ರಷ್ಟು ಅಧಿಕವಾಗಿದೆ.
#7. ರೈಲು ಪ್ರತಿ ಗಂಟೆಗೆ 200 ಕಿ.ಮೀ ವೇಗದಲ್ಲಿ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.
#8. ಪ್ರತಿಯೊಂದು ಕೋಚ್ ತಯಾರಿಕೆಗೆ 3.25 ಕೋಟಿ ರೂ. ಖರ್ಚಾಗಿದೆ. ಚರ್ಮದ ಸೀಟ್‍ಗಳು, ಎಲ್‍ಸಿಡಿ ಸ್ಕ್ರೀನ್ ಗಳು ಮತ್ತು ಕೂಡಲೇ ಯಾರನ್ನದರೂ ಕರೆಯಲು ಕಾಲ್ ಬಟನ್ ವಿಶೇಷ ಸೌಲಭ್ಯವನ್ನು ಹೊಂದಿದೆ.
#9. ಮುಂದಿನ ದಿನಗಳಲ್ಲಿ ತೇಜಸ್ ರೈಲು ದೆಹಲಿ ಮತ್ತು ಚಂಡೀಗಢ, ಸೂರತ್ ಮತ್ತು ಮುಂಬೈ ನಡುವೆ ಸಂಚರಿಸಲಿದೆ.
It's a shame. Headphones stolen, LED damaged in Mumbai Goa Tejas express. Do we really deserve such services from @RailMinIndia then ? pic.twitter.com/nLAQhInfwd
— IndianRailMedia ???????? (@IndianRailMedia) May 25, 2017