ಡ್ರಗ್ಸ್ ಸೇವಿಸಿ ದೇವರ ರೀತಿ ಡ್ರೆಸ್ ಹಾಕ್ತಿದ್ರು ತೇಜ್ ಪ್ರತಾಪ್ ಯಾದವ್: ಪತ್ನಿ

Public TV
2 Min Read
Tej Pratap Yadaw

-ಪತಿಯ ಅವತಾರದ ರಹಸ್ಯ ಬಿಚ್ಚಿಟ್ಟ ಐಶ್ವರ್ಯಾ

ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ತಮ್ಮ ವಿಭಿನ್ನ ವೇಷ ಭೂಷಣಗಳ ಮೂಲಕ ಹೆಚ್ಚು ಸುದ್ದಿಯಾಗುತ್ತಿರುವ ನಾಯಕ. ಇತ್ತೀಚೆಗೆ ಶಿವ ವೇಷಧಾರಿಯಾಗಿ ಕಾಣಿಸಿಕೊಂಡಿದ್ದ ತೇಜ್ ಪ್ರತಾಪ್ ಯಾದವ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ತೇಜ್ ಪ್ರತಾಪ್ ನಿಂದ ದೂರವಾಗಿರುವ ಪತ್ನಿ ಐಶ್ವರ್ಯಾ ಪತಿಯ ವೇಷದ ಹಿಂದಿನ ರಹಸ್ಯವನ್ನು ಹೊರ ಹಾಕಿದ್ದಾರೆ.

ನನ್ನ ಪತಿ ಮಾದಕ ವ್ಯಸನಿಯಾಗಿದ್ದು, ಡ್ರಗ್ಸ್ ಸೇವಿಸಿದಾಗ ದೇವರ ರೀತಿಯಲ್ಲಿ ಡ್ರೆಸ್ ಹಾಕುತ್ತಾರೆ. ಈ ರೀತಿ ಡ್ರೆಸ್ ಧರಿಸಿದಾಗ ತಾವು ದೇವರ ಅವತಾರ ಎಂಬಂತೆ ವರ್ತಿಸುತ್ತಾರೆ. ಮದುವೆ ಬಳಿಕ ಈ ವಿಷಯ ನನಗೆ ತಿಳಿಯಿತು. ಪತಿಗೆ ಬುದ್ಧಿ ಹೇಳುವಂತೆ ನಾನು ಅವರ ತಾಯಿ ಮತ್ತು ಸೋದರಿಗೆ ಈ ವಿಷಯವನ್ನು ತಿಳಿಸಿದೆ. ಅವರಿಬ್ಬರು ಪತಿಗೆ ತಿಳಿ ಹೇಳಿದ್ರೂ, ತೇಜ್ ಪ್ರತಾಪ್ ವರ್ತನೆಯಲ್ಲಿ ಯಾವುದೇ ಬದಲಾವಣೆಗಳು ಆಗಲಿಲ್ಲ ಎಂದು ಐಶ್ವರ್ಯ ಬೇಸರ ವ್ಯಕ್ತಪಡಿಸಿದ್ರು.

Tej Pratap Aishwarya Rai Marriage

ಒಂದು ದಿನ ಡ್ರಗ್ಸ್ ಸೇವಿಸಿದಾಗ ದೇವತೆ ರಾಧೆ ರೀತಿಯಲ್ಲಿ ವಿಗ್ ಹಾಕಿಕೊಂಡು, ಮೇಕಪ್ ಜೊತೆ ಲೆಹೆಂಗಾ ಮತ್ತು ಬ್ಲೌಸ್ ಸಹ ಧರಿಸಿದ್ದರು. ಗಾಂಜಾ ಸೇವನೆ ತ್ಯಜಿಸುವ ಮಾತನಾಡಿದ್ರೆ, ಇದು ಬಾಬಾ ಬೋಲೆನಾಥನ ಪ್ರಸಾದ. ಹಾಗಾಗಿ ಗಾಂಜಾ ಸೇವನೆ ತ್ಯಜಿಸಲು ಸಾಧ್ಯವಿಲ್ಲ. ಮಹಿಳೆಯ ತರಹ ಡ್ರೆಸ್ ಧರಿಸೋದು ನಿಲ್ಲಿಸಿ ಎಂದಾಗ ಕೃಷ್ಣನೇ ರಾಧ, ರಾಧೆಯೇ ಕೃಷ್ಣ ಎನ್ನುತ್ತಿದ್ದರು ಎಂದು ಐಶ್ವರ್ಯಾ ಆರೋಪಿಸಿದ್ದಾರೆ.

ತೇಜ್ ಪ್ರತಾಪ್ ಆರೋಪವೇನು?
ಐಶ್ವರ್ಯ 2019ರ ಚುನಾವಣೆಗೆ ತಮ್ಮ ತಂದೆ ಚಂದ್ರಿಕಾ ರಾಯ್ ಅವರಿಗೆ ಛಪರಾ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಬೇಕೆಂದು ಪತಿ ತೇಜ್ ಪ್ರತಾಪ್ ಮೇಲೆ ಒತ್ತಡ ಹಾಕುತ್ತಿದ್ದರಂತೆ. ತನ್ನ ತಂದೆಗೆ ಟಿಕೆಟ್ ನೀಡಬೇಕೆಂದು ಐಶ್ವರ್ಯ ಪತಿಯೊಂದಿಗೆ ಹಲವು ಬಾರಿ ಜಗಳ ಮಾಡಿಕೊಂಡಿದ್ದರು. ನಿಮ್ಮನ್ನು ಮದುವೆ ಆದ್ರೂ ನಾನು ತಂದೆಗೆ ಟಿಕೆಟ್ ಕೊಡಿಸಿದೆ ಇದ್ರೆ ಏನು ಪ್ರಯೋಜನ ಎಂದು ಹಲವು ಬಾರಿ ಗಲಾಟೆ ಮಾಡುತ್ತಿದ್ದಳು ಎಂದು ವಿಚ್ಛೇದನದ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

tej pratap yadav 3

ಮದುವೆಯಾದ ಬಳಿಕ ಮೇ 12ರಿಂದ ಸೆಪ್ಟೆಂಬರ್ 1ರವರೆಗೆ ಇಬ್ಬರ ದಾಂಪತ್ಯದಲ್ಲಿ ಸದಾ ಗಲಾಟೆ ನಡೆಯುತ್ತಿತ್ತು. ದೆಹಲಿ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿರುವ ಐಶ್ವರ್ಯ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿದ್ದಳು. ನಾನು ಭಜನೆ-ಕೀರ್ತನೆಗಳನ್ನು ಕೇಳಿದ್ರೆ, ಆಕೆ ವೆಸ್ಟರ್ನ್ ಹಾಡುಗಳನ್ನು ಇಷ್ಟಪಡುತ್ತಿದ್ದಳು. ಇಬ್ಬರ ಅಭಿರುಚಿಗಳು ಬೇರೆ ಬೇರೆಯಾಗಿದ್ದು, ಸಂಸಾರದಲ್ಲಿ ಹೊಂದಾಣಿಕೆಯೇ ಇರಲಿಲ್ಲ. ಒಮ್ಮೆ ನನ್ನ ಹಿರಿಯ ಸೋದರಿ ಮೀಸಾ ಭಾರತಿ ಸಲಹೆ ನೀಡಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡು ಎಲ್ಲರ ಮೇಲೆ ಕೋಪಗೊಂಡಿದ್ದಳು ಎಂದು ತೇಜ್ ಪ್ರತಾಪ್ ಪತ್ನಿಯ ಮೇಲೆ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ.

2018 ಮೇನಲ್ಲಿ ತೇಜ್ ಪ್ರತಾಪ್ ಯಾದವ್ ಮತ್ತು ಐಶ್ವರ್ಯಾರ ಮದುವೆ ಅದ್ಧೂರಿಯಾಗಿ ನಡೆದಿತ್ತು. ಮದುವೆಯಾದ ಐದು ತಿಂಗಳ ಬಳಿಕ ತೇಜ್ ಪ್ರತಾಪ್ ಯಾದವ್ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *