ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ತೇಜ್ ಬಹದ್ದೂರ್ ಹೋಲುವಂತಹ ಯೋಧರೊಬ್ಬರ ಫೋಟೋವೊಂದು ಹರಿದಾಡುತ್ತಿದ್ದು, ಬಿಎಸ್‍ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದ್ರೆ ಯಾದವ್ ಅವರ ಪತ್ನಿ ಹಾಗೂ ಬಿಎಸ್ ಎಫ್ ಯೋಧರು ಈ ಸುದ್ದಿಯನ್ನು ಅಲ್ಲಗೆಳೆದಿದ್ದಾರೆ.
ಯೋಧ ತೇಜ್ ಬಹದ್ದೂರ್ ಯಾದವ್ ಅವರನ್ನು ಹೋಲುವ ಯೋಧರೊಬ್ಬರು ಮೃತಪಟ್ಟಂತೆ ಇರುವ ಚಿತ್ರವೊಂದು ಕಳೆದ ಬುಧವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಚಿತ್ರದಲ್ಲಿರೋ ಯೋಧನ ತಲೆ ಬಟ್ಟೆಯಿಂದ ಮುಚ್ಚಲ್ಪಟ್ಟಿದ್ದು, ಕಣ್ಣು ಮುಚ್ಚಿದೆ. ಮಾತ್ರವಲ್ಲದೇ ಮೂಗಿನಿಂದ ರಕ್ತ ಸೋರಿತ್ತಿರುವಂತಿರುವ ಚಿತ್ರ ಫೇಸ್ಬುಕ್, ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ. ಈ ಪೋಟೋ ಮತ್ತು ತೇಜ್ ಬಹದ್ದೂರ್ ಫೋಟೋವನ್ನು ಜೋಡಿಸಿ ತೇಜ್ ಬಹದ್ದೂರು ಯಾದವ್ ಅವರು ಮೃತಪಟ್ಟಿದ್ದಾರೆ ಎಂದು ವೈರಲ್ ಆಗಿತ್ತು.
Advertisement
Advertisement
ಆದ್ರೆ ಈ ಸುದ್ದಿಯನ್ನು ಯೋಧರ ಪತ್ನಿ ಹಾಗೂ ಬಿಎಸ್‍ಎಫ್ ತಳ್ಳಿಹಾಕಿದ್ದಾರೆ. ತೇಜ್ ಬಹದ್ದೂರ್ ಯಾದವ್ ಆರೋಗ್ಯವಾಗಿದ್ದಾರೆ. ಸದ್ಯ ಇವರು ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಅಂತಾ ಬಿಎಸ್‍ಎಫ್ ಪಬ್ಲಿಕ್ ರಿಲೇಶನ್ ಆಫೀಸರ್ ಶುಭೇಂದು ಭಾರಧ್ವಾಜ್ ಸ್ಪಷ್ಟಪಡಿಸಿದ್ದಾರೆ.
Advertisement
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ ನೋಡಿ ಹಿರಿಯ ಅಧಿಕಾರಿಯೊಬ್ಬರು ತನಗೆ ಕರೆ ಮಾಡಿ ಗಂಡನ ಬಗ್ಗೆ ವಿಚಾರಿಸುವಂತೆ ಹೇಳಿದ್ದರು. ಅಂತೆಯೇ ನಾನು ತೇಜ್ ಬಹದ್ದೂರ್ ಅವರಿಗೆ ಕರೆ ಮಾಡಿ ವಿಚಾರಿಸಿದ್ದೇನೆ. ಅವರು ಆರೋಗ್ಯವಾಗಿದ್ದಾರೆ ಅಂತಾ ಯಾದವ್ ಪತ್ನಿ ಶರ್ಮಿಳಾ ಯಾದವ್ ಹೇಳಿದ್ದಾರೆ.
Advertisement
ತೇಜ್ ಬಹದ್ದೂರು ಇತ್ತೀಚೆಗಷ್ಟೆ ಸೇನೆಯಲ್ಲಿ ಕೊಡುವ ಆಹಾರದ ಗುಣಮಟ್ಟ ಹಾಗೂ ಅಧಿಕಾರಿಗಳ ಭ್ರಷ್ಟತೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದು, ವೈರಲ್ ಆಗಿತ್ತು. 5 ದಿನಗಳ ಬಳಿಕ ಭ್ರಷ್ಟಾಚಾರ ಬಯಲಿಗೆಳೆದ ಬಳಿಕ ತನಗೆ ಹಿಂಸೆ ನೀಡುತ್ತಿದ್ದಾರೆ ಎಂದು ಆಪಾದಿಸಿದ್ದರು.