ಬೆಳಗಾವಿ: ಬಸ್ ಬಿಡುವಂತೆ ಮನವಿ ಸಲ್ಲಿಸಲು ತಹಶೀಲ್ದಾರರ ಕಚೇರಿಗೆ ಬಂದಿದ್ದ ಶಾಲಾ ವಿದ್ಯಾರ್ಥಿಗಳಿಗೆ (Students) ಖಾನಾಪುರ (Khanapur) ತಹಶೀಲ್ದಾರ್ (Tehsildar) ಧಮ್ಕಿ ಹಾಕಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕರಂಜಾಳ, ಹಳಸಾಲ, ಬಾಲ್ಕಿ ಬಿಹೆಚ್ ಗ್ರಾಮದ ವಿದ್ಯಾರ್ಥಿಗಳು ಖಾನಾಪುರ ತಹಶೀಲ್ದಾರ್ ಪ್ರಕಾಶ್ ಗಾಯಕ್ವಾಡ್‌ಗೆ ಮನವಿ ಸಲ್ಲಿಸಲು ಹೋಗಿದ್ದರು. ಈ ವೇಳೆ ಪೊಲೀಸರನ್ನು ಕರೆಸಿ ನಿಮ್ಮನ್ನು ಅರೆಸ್ಟ್ ಮಾಡಿ ಒಳಗಡೆ ಹಾಕಿಸುತ್ತೇನೆ ಎಂದು ತಹಶೀಲ್ದಾರ್ ಮಕ್ಕಳ ಮೇಲೆ ದರ್ಪ ತೋರಿದ್ದಾರೆ.
Advertisement
Advertisement
ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಮನವಿ ಸಲ್ಲಿಸಲು ತಹಶೀಲ್ದಾರರ ಕಚೇರಿಗೆ ವಿದ್ಯಾರ್ಥಿಗಳು ಬಂದಿದ್ದರು. ಶಾಲಾ ಮಕ್ಕಳ ಸಮಸ್ಯೆಗೆ ಧ್ವನಿಯಾಗಬೇಕಿದ್ದ ತಹಶೀಲ್ದಾರ್ ವರ್ತನೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಈ ವೇಳೆ ಆವಾಜ್ ಹಾಕಿದ ತಹಶೀಲ್ದಾರ್ ಪ್ರಕಾಶ್ ಗಾಯಕ್ವಾಡ್, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದೀರಿ ಎಂದು ಮಕ್ಕಳ ಮೇಲೆಯೇ ಆರೋಪಿಸಿದ್ದಾರೆ. ಇದನ್ನೂ ಓದಿ: ಕಳೆಗಟ್ಟಿದ ಹಾಸನಾಂಬೆ ದರ್ಶನೋತ್ಸವ ಸಂಭ್ರಮ – ಇಂದು ದೇವಿಯ ದರ್ಶನ ಪಡೆಯಲಿರುವ ಸಿಎಂ
Advertisement
ಕಳೆದ ಹಲವಾರು ವರ್ಷಗಳಿಂದ ಬಸ್ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿಗಳು ಮನವಿ ಕೊಟ್ಟಿದ್ದರು. ಆದರೆ ಈವರೆಗೆ ಬಸ್ ಸೌಕರ್ಯ ಇಲ್ಲದೇ ಮಕ್ಕಳು ಪರದಾಟ ನಡೆಸಿದ್ದರು. ನಿತ್ಯ ನಡೆದುಕೊಂಡು ಹೋಗಿ ರಾತ್ರಿ ಮನೆ ಸೇರುವ ಪರಿಸ್ಥಿತಿ ನಿರ್ಮಾಣ ಆಗಿತ್ತು.
Advertisement
ಖಾನಾಪುರದ ಬಹುತೇಕ ಗ್ರಾಮಗಳು ಕಾಡಂಚಿನ ಪ್ರದೇಶದಲ್ಲಿ ಇದ್ದು, ಕಾಡು ಪ್ರಾಣಿಗಳ ಹಾವಳಿಯೂ ಹೆಚ್ಚಾಗಿದೆ. ಹೀಗಾಗಿ ಗ್ರಾಮಗಳಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಮನವಿ ಸಲ್ಲಿಸಲು ವಿದ್ಯಾರ್ಥಿಗಳು ಮುಂದಾಗಿದ್ದರು. ಇದನ್ನೂ ಓದಿ: ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದು ವೈದ್ಯ ಸಾವು