ಆಪರೇಷನ್‍ಗೆ ಹೋದ ಅಜ್ಜಿಯ ಹಲ್ಲು ಸೆಟ್ ಗಂಟಲಿಗಿಳಿಯಿತು- ಎಡವಟ್ಟು ಮುಚ್ಚಿಕೊಳ್ಳಲು ಕಥೆ ಕಟ್ಟಿದ್ರು ವೈದ್ಯರು

Public TV
1 Min Read
GM HOSPITAL

ಬೆಂಗಳೂರು: ಜೀವ ರಕ್ಷಿಸಿಕೊಳ್ಳೊಕೆ ಅಂತ ಆಸ್ಪತ್ರೆಗೆ ಹೋದ ಅಜ್ಜಿಯ ಹಲ್ಲು ಸೆಟ್ಟೇ ಅಂದರ್ ಆಗಿದ್ದು, ಮಾಡಿದ ಯಡವಟ್ಟನ್ನ ಮರೆಮಾಚೋಕೆ ಅಜ್ಜಿಯನ್ನು ಪರಲೋಕ ಸೇರಿಸೋಕೆ ವೈದ್ಯರು ಸಿದ್ಧರಾಗಿದ್ದ ಘಟನೆ ಬೆಳಕಿಗೆ ಬಂದಿದೆ..

GM HOSPITAL AJJI 3

ಬೆಂಗಳೂರಿನ ನಾಗರಬಾವಿಯಲ್ಲಿರೋ ಜಿಎಮ್ ಆಸ್ಪತ್ರೆಯ ವೈದ್ಯರ ಯಡವಟ್ಟಿನಿಂದಾಗಿ 68 ವರ್ಷದ ಜಯಲಕ್ಷ್ಮಮ್ಮ ಸಾವಿನ ಮನೆಯ ಕದ ತಟ್ಟಿ ಬಂದಿದ್ದಾರೆ. ಇವತ್ತಿಗೂ ಸುಧಾರಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದಾರೆ.

GM HOSPITAL AJJI 4

ಜೂನ್ 30ರಂದು ಕಿಡ್ನಿ ಸ್ಟೋನ್ ಆಪರೇಷನ್‍ಗಾಗಿ ಅಜ್ಜಿ ಸಂಸದ ಸಿದ್ದೇಶ್ವರ್ ಒಡೆತನದ ಜಿಎಮ್ ಆಸ್ಪತ್ರೆಗೆ ದಾಖಲಾಗಿದ್ರು. ಆಪರೇಷನ್ ಸಮಯದಲ್ಲಿ ವೈದ್ಯರ ಬೇಜವ್ದಾರಿಯಿಂದ ಈ ಅಜ್ಜಿಯ ಹಲ್ಲು ಸೆಟ್ ಗಂಟಲಿಗೆ ಇಳಿದಿದೆ. ಇದನ್ನು ಕುಂಟುಬಸ್ಥರಿಂದ ಜಿಎಮ್ ಆಸ್ಪತ್ರೆ ವೈದ್ಯರು ಮುಚ್ಚಿಟ್ಟಿದ್ದಾರೆ. ಅಜ್ಜಿ ಸ್ಥಿತಿ ಚಿಂತಾಜನಕವಾದಾಗ ಅವರು ಬದುಕೋದಿಲ್ಲ. ಮನೆಗೆ ಕರೆದುಕೊಂಡು ಹೋಗಿ ಅಂತ ಹೇಳಿ ಐದು ಲಕ್ಷ ರೂ. ಹಣ ಪೀಕಿ ಡಿಸ್ಜಾರ್ಜ್ ಮಾಡಿದ್ದಾರೆ.

GM HOSPITAL AJJI 5

ಡಿಸ್ಜಾರ್ಜ್ ಆದ ನಂತರ ಅಜ್ಜಿ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ. ಮನಸ್ಸು ತಡೆಯದೆ ಮಗ ಗಂಗಾಧರ್ ಅಜ್ಜಿಯನ್ನು ನಾಗರಬಾವಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲಿ ಅಜ್ಜಿ ಗಂಟಲಲ್ಲಿ ಹಲ್ಲು ಸೆಟ್ ಇರೋದನ್ನ ಪತ್ತೆ ಹಚ್ಚಿದ ವೈದ್ಯರು ಅದನ್ನ ಗಂಟಲಿನಿಂದ ತೆಗೆದಿದ್ದಾರೆ.

GM HOSPITAL AJJI 1

ಅಜ್ಜಿಯನ್ನು ಪರಲೋಕಕ್ಕೆ ಕಳಿಸೋಕೆ ಸಿದ್ಧತೆ ನಡೆಸಿದ್ದ ಜಿಎಮ್ ಆಸ್ಪತ್ರೆ ವೈದ್ಯರು ಈಗ ಮಗ ಗಂಗಾಧರ್ ಹತ್ತಿರ ದುಡ್ಡಿನ ಡೀಲ್ ಮಾಡಲು ಮುಂದಾಗಿದ್ದು, ಅಜ್ಜಿ ಬದುಕೋದಿಲ್ಲ ಅಂತಾ ಹೇಳಿದ್ದನ್ನು ಒಪ್ಪಿಕೊಂಡಿದ್ದಾರೆ.

https://youtu.be/mQ-Y9vGC1Ss

Share This Article
Leave a Comment

Leave a Reply

Your email address will not be published. Required fields are marked *