ಅಹ್ಮದ್ ಪಟೇಲ್ ಸೂಚನೆ ಮೇರೆಗೆ ಮೋದಿ ವಿರುದ್ಧ ತೀಸ್ತಾ ಸೆಟಲ್ವಾಡ್ ಸಂಚು: ತನಿಖಾ ತಂಡ

Public TV
2 Min Read
Teesta Setalvad and Ahmed Patel

ಗುರುಗ್ರಾಮ: ಗುಜರಾತ್‍ನ ಅಂದಿನ ಸಿಎಂ ಆಗಿದ್ದ ನರೇಂದ್ರ ಮೋದಿ ವಿರುದ್ಧ ದಿವಂಗತ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಸೂಚನೆ ಮೇರೆಗೆ ತೀಸ್ತಾ ಸೆಟಲ್ವಾಡ್ ಸಂಚು ಮಾಡಿದ್ದರು ಎಂದು ತನಿಖಾ ತಂಡ ತಿಳಿಸಿದೆ.

ಗುಜರಾತ್ ಪೊಲೀಸರು ತೀಸ್ತಾ ಸೆಟಲ್ವಾಡ್ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿದರು. ತೀಸ್ತಾ ಸೆಟಲ್ವಾಡ್ ಅವರು ನರೇಂದ್ರ ಮೋದಿ ಅವರ ವಿರುದ್ಧ ಅಹ್ಮದ್ ಪಟೇಲ್ ಅವರ ಇಚ್ಛೆಯ ಮೇರೆಗೆ ದೊಡ್ಡ ಪಿತೂರಿ ನಡೆಸಿದ್ದರು ಎಂಬ ವಿಷಯ ಈ ಮೂಲಕ ಬಯಲಿಗೆ ಬಂದಿದೆ. ಇದನ್ನೂ ಓದಿ: ಸಮ್ಮತಿಯ ಸೆಕ್ಸ್‌ನಿಂದ ಅವಿವಾಹಿತೆ ಗರ್ಭಧಾರಣೆ – 20 ವಾರಗಳ ಬಳಿಕ ಗರ್ಭಪಾತಕ್ಕೆ ಅವಕಾಶವಿಲ್ಲ: ಹೈಕೋರ್ಟ್ 

Ahmed Patel and modi

2002 ರ ಗಲಭೆಯ ನಂತರ ಗುಜರಾತ್‍ನಲ್ಲಿ ಬಿಜೆಪಿ ಸರ್ಕಾರವನ್ನು ವಜಾಗೊಳಿಸಲು ಅಹ್ಮದ್ ಪಟೇಲ್ ಅವರ ಆಜ್ಞೆಯ ಮೇರೆಗೆ ಸೆಟಲ್ವಾಡ್ ಒಂದು ಯೋಜನೆಯನ್ನು ರೂಪಿಸಿದ್ದರು ಎಂದು ಸೆಷನ್ಸ್ ನ್ಯಾಯಾಲಯಕ್ಕೆ ಪೊಲೀಸರ ವಿಶೇಷ ತನಿಖಾ ತಂಡ ಸಲ್ಲಿಸಿದ ಅಫಿಡವಿಟ್ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಡಿ.ಡಿ.ಠಕ್ಕರ್ ಅವರು ಎಸ್‍ಐಟಿಯ ಉತ್ತರವನ್ನು ದಾಖಲಿಸಿಕೊಂಡು ಸೋಮವಾರ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡಿದರು.

ಗುಜರಾತ್ ಗಲಭೆ ಪ್ರಕರಣಗಳಲ್ಲಿ ಅಮಾಯಕರನ್ನು ಬಂಧಿಸಲು ಸುಳ್ಳು ಸಾಕ್ಷ್ಯವನ್ನು ಸೃಷ್ಟಿಸಿದ ಆರೋಪದ ಮೇಲೆ ಮಾಜಿ ಐಪಿಎಸ್ ಅಧಿಕಾರಿಗಳಾದ ಆರ್.ಬಿ.ಶ್ರೀಕುಮಾರ್ ಮತ್ತು ಸಂಜೀವ್ ಭಟ್ ಅವರೊಂದಿಗೆ ಸೆಟಲ್ವಾಡ್ ಅವರನ್ನು ಬಂಧಿಸಲಾಗಿದೆ. ಈ ದೊಡ್ಡ ಪಿತೂರಿಯನ್ನು ಮಾಡುವಾಗ ಅರ್ಜಿದಾರರ(ಸೆಟಲ್ವಾಡ್) ರಾಜಕೀಯ ಉದ್ದೇಶವೆಂದರೆ ಚುನಾಯಿತ ಸರ್ಕಾರವನ್ನು ವಜಾಗೊಳಿಸುವುದು ಅಥವಾ ಅಸ್ಥಿರಗೊಳಿಸುವುದು ಎಂದು ಎಸ್‍ಐಟಿ ಅಫಿಡವಿಟ್‌ನಲ್ಲಿ ಹೇಳಿದೆ.

Teesta Setalvad

ಈ ಕುರಿತು ತನಿಖಾ ತಂಡ ಮಾಹಿತಿ ಕೊಟ್ಟಿದ್ದು, ದಿ.ಅಹ್ಮದ್ ಪಟೇಲ್ ಅವರ ಸೂಚನೆಯ ಮೇರೆಗೆ ಈ ಸಂಚು ನಡೆಸಲಾಗಿದೆ ಎಂದು ಸಾಕ್ಷಿಗಳನ್ನು ಉಲ್ಲೇಖಿಸಿ ಆರೋಪಿಸಾಗಿದೆ. 2002 ರಲ್ಲಿ ಗೋಧ್ರಾ ಗಲಭೆ ನಂತರ ಪಟೇಲ್ ಅವರ ಆದೇಶದ ಮೇರೆಗೆ ಸೆಟಲ್ವಾಡ್ 30 ಲಕ್ಷ ರೂ. ಕೊಡಲಾಗಿತ್ತು ಎಂಬುದು ತಿಳಿದುಬಂದಿದೆ ಎಂದು ವಿವರಿಸಿದರು. ಇದನ್ನೂ ಓದಿ: ಸರ್ಕಾರಿ ನೌಕರರು 2ನೇ ಮದುವೆಯಾಗಲು ಬೇಕು ಇಲಾಖೆ ಅನುಮತಿ – ಇಲ್ಲವಾದ್ರೆ ಸರ್ಕಾರಿ ಸೌಲಭ್ಯವಿಲ್ಲ

2002 ರಲ್ಲಿ ಗಲಭೆ ಪ್ರಕರಣಗಳಲ್ಲಿ ಬಿಜೆಪಿ ಸರ್ಕಾರದ ಹಿರಿಯ ನಾಯಕರ ಹೆಸರನ್ನು ಸಿಲುಕಿಸಲು ದೆಹಲಿಯ ಅಧಿಕಾರದಲ್ಲಿದ್ದ ಪ್ರಮುಖ ರಾಷ್ಟ್ರೀಯ ಪಕ್ಷದ ನಾಯಕರನ್ನು ಸೆಟಲ್ವಾಡ್ ಭೇಟಿಯಾಗುತ್ತಿದ್ದರು ಎಂದು ತಿಳಿಸಿದರು.

Live Tv
[brid partner=56869869 player=32851 video=960834 autoplay=true]

Share This Article