ಸಾಂದರ್ಭಿಕ ಚಿತ್ರ
ಲಕ್ನೋ: ಚಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ 15 ವರ್ಷದ ಬಾಲಕನೊಬ್ಬ ಓವನ್ ಒಳಗೆ ಸಿಲುಕಿ ಹೊರಬರಲಾಗದೇ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಖೈರಪುರ್ ಗ್ರಾಮದಲ್ಲಿ ನಡೆದಿದೆ.
Advertisement
ದೀಪಕ್ ಜೈಸ್ವಾಲ್ (15) ಮೃತ ಬಾಲಕ. ತಂದೆಯ ಬಿಸ್ಕತ್ ಫ್ಯಾಕ್ಟರಿಯಲ್ಲಿ ದುರಂತ ಸಂಭವಿಸಿದೆ. 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ದೀಪಕ್ ಶನಿವಾರ ತಂದೆಯ ಬಿಸ್ಕತ್ ಫ್ಯಾಕ್ಟರಿಗೆ ನೌಕರರೆಲ್ಲ ತೆರಳಿದ ಮೇಲೆ ಓವನ್ ಬಂದ್ ಮಾಡಲು ತೆರಳಿದ್ದ. ಆದರೆ ಈ ವೇಳೆ ಚಳಿಯಿಂದ ರಕ್ಷಿಸಿಕೊಳ್ಳಲು ಕೆಲ ಸಮಯ ಓವನ್ ಬಳಿ ಕುಳಿತಿದ್ದ ದೀಪಕ್ ಆಕಸ್ಮಿಕವಾಗಿ ಒಳಗೆ ಸಿಲುಕಿಕೊಂಡಿದ್ದಾನೆ. ಈ ವೇಳೆ ಓವನ್ ಬಾಗಿಲು ತೆರಯಲು ಆಗದ ಕಾರಣ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿ ಆರ್ ಪಿ ಸಿಂಗ್ ತಿಳಿಸಿದ್ದಾರೆ.
Advertisement
ದೀಪಕ್ ಮನೆಯ ನೆಲ ಮಹಡಿಯಲ್ಲೇ ತಂದೆ ಬಿಸ್ಕತ್ ಫ್ಯಾಕ್ಟರಿ ನಡೆಸುತ್ತಿದ್ದು, ಫ್ಯಾಕ್ಟರಿಗೆ ತೆರಳಿದ ಆತ ಹೆಚ್ಚಿನ ಸಮಯ ಬಾರದ ಕಾರಣ ಪೋಷಕರು ಹುಡುಕಾಟ ನಡೆಸಿದ್ದಾರೆ. ಆದರೆ ಆಕಸ್ಮಿಕವಾಗಿ ಓವನ್ ಒಳಗೆ ಸಿಲುಕಿದ್ದ ದೀಪಕ್ ಜೀವಂತವಾಗಿಯೇ ಬೆಂದು ಹೋಗಿದ್ದ. ಈ ವೇಳೆ ಪೋಷಕರು ಓವನ್ ಬಾಗಿಲು ಒಡೆದು ದೀಪಕ್‍ನನ್ನು ಹೊರತೆಗೆದಿದ್ದು, ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದ್ದರು. ಆದರೆ ಆಸ್ಪತ್ರೆಗೆ ತೆರಳುವ ಮುನ್ನವೇ ಬಾಲಕ ಮೃತ ಪಟ್ಟಿದ್ದ.
Advertisement
ಮೃತ ಬಾಲಕ ದೀಪಕ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ ಎಂದು ಎಸ್‍ಪಿ ಮಾಹಿತಿ ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv