– ಕೊರೊನಾದಿಂದ ಸ್ವಲ್ಪ ಹೃದಯ ಸಮಸ್ಯೆ
ಬೆಂಗಳೂರು: 15 ವರ್ಷದೊಳಗಿನ ಮಕ್ಕಳಿಗೆ ಹೃದಯ ತಪಾಸಣೆ (Heart Checkup) ಮಾಡುವಂತೆ ರಾಜ್ಯ ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿ ಸಲಹೆ ನೀಡಿದೆ.
ರಾಜ್ಯದಲ್ಲಿ ಹೃದಯಾಘಾತದಿಂದ (Heart Attack) ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸರ್ಕಾರ ಸಾವಿಗೆ ಕಾರಣ ಪತ್ತೆ ಹಚ್ಚಲು ತಜ್ಞರ ಸಮಿತಿಯನ್ನು ರಚನೆ ಮಾಡಿತ್ತು.
ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ರವೀಂದ್ರನಾಥ್, ರಾಜೀವ್ ಗಾಂಧಿ ಆಸ್ಪತ್ರೆ ನಿರ್ದೇಶಕ ಶಶಿಭೂಷಣ್, ನಿಮ್ಹಾನ್ಸ್ ನಿರ್ದೇಶಕ ಡಾ. ಪ್ರಚೀತ್ ರಘುವೀರ್, ಬಿಎಂಆರ್‌ಸಿಐ ಮೆಡಿಸನ್ ವಿಭಾಗ ಮುಖ್ಯಸ್ಥ ಡಾ. ರವಿ, ನಿಮ್ಹಾನ್ಸ್‌ನ ಅಸೋಸಿಯೇಟ್ ಪ್ರೊಫೆಸರ್ ಡಾ. ರವಿ ಅವರನ್ನು ಒಳಗೊಂಡ ಸಮಿತಿ ಹಲವು ಶಿಫಾರಸು ಮಾಡಿದೆ.
ಕೋವಿಡ್ ಸಮಸ್ಯೆ ಕಾಣಿಸಿಕೊಂಡವರಲ್ಲೂ ಕೊಂಚ ಹೃದಯದ ಸಮಸ್ಯೆ (Heart Problem) ಇದೆ ಎಂದು ವರದಿ ನೀಡಿದೆ. ಕೋವಿಡ್ ಲಸಿಕೆ (Covid Vaccine) ತೆಗೆದುಕೊಂಡ 250 ಮಂದಿ ಮೇಲೆ ಅಧ್ಯಯನ ಮಾಡಿ ಸಮಿತಿ ಈ ವರದಿ ಸಿದ್ಧಪಡಿಸಿದೆ. ಇದನ್ನೂ ಓದಿ: ಕಾರು ರೇಸ್‌ಗೆ ಕಿಚ್ಚ ಎಂಟ್ರಿ – ಬೆಂಗಳೂರು ತಂಡ ಖರೀದಿಸಿದ ಸುದೀಪ್
ಮಕ್ಕಳ ಹೃದಯ ಪರೀಕ್ಷಿಸಿ
– 15 ವರ್ಷದ ಒಳಗಿನ ಶಾಲಾ ಮಕ್ಕಳಿಗೆ ಹೃದಯ ತಪಾಸಣೆ
– 10ನೇ ತರಗತಿ ಮಕ್ಕಳಿಗೆ ಕಡ್ಡಾಯ ತಪಾಸಣೆಗೆ ಸೂಚನೆ
– ಮಕ್ಕಳ ಹೃದಯ ಬಡಿತ, ಹೈಪರ್ ಟೆನ್ಷನ್ ಪತ್ತೆ ಹಚ್ಚಬೇಕು
– ಹೃದಯ ರಿಸ್ಕ್ ಫ್ಯಾಕ್ಟರ್ಸ್ ಪತ್ತೆ ಮಾಡಬೇಕು
– ಮಕ್ಕಳಿಗೆ ಶಾಲೆಗಳಲ್ಲಿ ಸ್ಕ್ರೀನಿಂಗ್ ಮಾಡಬೇಕು ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ – ಕತಾರ್‌ನಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅರೆಸ್ಟ್
ತಜ್ಞರ ವರದಿಯಲ್ಲಿ ಏನಿದೆ?
ಹೃದಯಾಘಾತಕ್ಕೆ ಕೋವಿಡ್ ಲಸಿಕೆ (Covid Vaccine) ಕಾರಣವಾಗಿಲ್ಲ. ಕೋವಿಡ್ ಬಂದು ಹೋದ 3 ವರ್ಷದ ಬಳಿಕ ಹೃದಯ ಸಮಸ್ಯೆ ಕಾಣಿಸಿದೆ. ನಿದ್ರಾಹೀನತೆ, ಸುಸ್ತು, ಉಸಿರಾಟ ಸಮಸ್ಯೆ, ಅತಿಯಾದ ಬೊಜ್ಜಿನಿಂದ ಹೃದಯದ ಕಾರ್ಯಕ್ಷಮತೆ ಕಡಿಮೆಯಾಗಿದೆ.
ಹೃದಯಾಘಾತದಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆ ಮಾಡಬೇಕು. ಕಡ್ಡಾಯವಾಗಿ ಸಾರ್ವಜನಿಕ ಧೂಮಪಾನ ಬ್ಯಾನ್ ಮಾಡಬೇಕು. ಅಪಾಯಕಾರಿ ಪೇನ್ ಕಿಲ್ಲರ್ ಮೆಡಿಸಿನ್‌ಗೆ ಕಡಿವಾಣ ಹಾಕಬೇಕು.