ಹೈದರಾಬಾದ್: ರಾಜೇಂದ್ರನಗರದ ನರ್ಸಿಂಗ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕನೊಬ್ಬ ಅನುಮಾನಸ್ಪದವಾಗಿ ಮೃತಪಟ್ಟಿದ್ದು, ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪಪ್ಪಾಲಗುಡಾ ಪ್ರದೇಶದ ಜುಪಲ್ಲಿ ತರುಣ್ (19) ಆತ್ಮಹತ್ಯೆ ಮಾಡಿಕೊಂಡಿರುವ ಹುಡುಗ. 10ನೇ ತರಗತಿ ವ್ಯಾಸಂಗ ಮುಗಿದ ನಂತರ ತರುಣ್ ಮನೆಯಲ್ಲಿಯೇ ಇದ್ದನು. ಏಪ್ರಿಲ್ 6 ರಂದು ತರುಣ್ ಸುಮಾರು ರಾತ್ರಿ 11.40 ಗಂಟೆಗೆ ತನ್ನ ತಾಯಿಗೆ ಕರೆ ಮಾಡಿ ತಾನು ಸ್ನೇಹಿತನ ಹುಟ್ಟುಹಬ್ಬಕ್ಕೆ ಹೋಗುತ್ತಿದ್ದಾನೆ ಎಂದು ತಿಳಿಸಿದ್ದಾನೆ. ನಂತರ ಮಧ್ಯರಾತ್ರಿ ಸುಮಾರು 1.20 ಗಂಟೆಗೆ ಮತ್ತೆ ಫೋನ್ ಮಾಡಿ ಈಗ ತುಂಬಾ ಲೇಟ್ ಆಗಿದೆ ಬೆಳಗ್ಗೆ ಮನೆಗೆ ಬರುತ್ತೀನಿ ಎಂದು ತಿಳಿಸಿದ್ದನು.
ಮುಂಜಾನೆ ಆದರೂ ತರುಣ್ ಮನೆಗೆ ಹಿಂದಿರುಗಲಿಲ್ಲ. ಜೊತೆಗೆ ಆತನ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ನಂತರ ಕುಟುಂಬ ಸದಸ್ಯರು ಮತ್ತು ಆತನ ಸ್ನೇಹಿತರು ಹುಡುಕಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಕೊನೆಗೆ ಸಂಜೆ ವೇಳೆಗೆ ಮನೆಯ ಕಟ್ಟಡದ ಟೆರೇಸ್‍ನಲ್ಲಿದ್ದ ರೂಮಿನಲ್ಲಿ ತರುಣ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ತಕ್ಷಣವೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತನ ತಲೆಯಿಂದ ಮತ್ತು ಮೂಗಿನಿಂದ ರಕ್ತಸ್ರಾವವಾಗಿತ್ತು. ಅಷ್ಟರಲ್ಲಾಗಲೇ ತರುಣ್ ಮೃತಪಟ್ಟಿದ್ದನು ಎಂದು ವೈದ್ಯರು ದೃಢಪಡಿಸಿದ್ದಾರೆ.
ಮೃತ ತರುಣ್ ದೇಹದ ಮೇಲೆ ಕಂಡುಬಂದ ಗಾಯಗಳ ಗುರುತಿನ ಆಧಾರದ ಮೇಲೆ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತರುಣ್ ತಮ್ಮ ಪ್ರದೇಶದ ವ್ಯಾಪ್ತಿಯ ಹುಡುಗಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದನು ಎಂದು ಸ್ಥಳೀಯರು ತಿಳಿಸಿದ್ದಾರೆ. ಹೀಗಾಗಿ ಪ್ರೀತಿಯ ವಿಚಾರದಿಂದ ಎರಡು ಕುಟುಂಬಗಳ ನಡುವೆ ವಾದ-ವಿವಾದ ನಡೆದಿಯಾ ಎಂದು ಪೊಲೀಸರು ಶಂಕಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.