CrimeLatestMain PostNational

ಬಾಲಕಿಯನ್ನು ಎಳೆದೊಯ್ದು ಮನೆ ಮುಂದೆಯೇ ಅತ್ಯಾಚಾರ ಮಾಡ್ದ

ಲಕ್ನೋ: ಬಾಲಕಿಯೊಬ್ಬಳನ್ನು ಆಕೆಯ ಮನೆಯ ಹೊರಗಡೆ ಎಳೆದೊಯ್ದು ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಬಾಗ್‍ಪತ್ ಜಿಲ್ಲೆಯಲ್ಲಿ ನಡೆದಿದೆ.

ಬಾಲಕಿ 8ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ತಂದೆ ಮತ್ತು ಸಹೋದರನೊಂದಿಗೆ ವಾಸಿಸುತ್ತಿದ್ದಳು. 45 ವರ್ಷದ ಆರೋಪಿ ತನ್ನ ಮಗಳನ್ನು ಹೊರಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ. ಇದನ್ನೂ ಓದಿ: ಲಡಾಖ್‌ನಲ್ಲಿ ಚೀನಾದಿಂದ ಪ್ಯಾಂಗ್ಯಾಂಗ್‌ ಸೇತುವೆ ನಿರ್ಮಾಣ – ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ಅತ್ಯಾಚಾರ ವೇಳೆ ಬಾಲಕಿ ಕಿರುಚಾಡಿದ ಶಬ್ಧ ಕೇಳಿ ಸ್ಥಳಕ್ಕೆ ಧಾವಿಸಿದ ತಂದೆ ಆರೋಪಿಯೊಂದಿಗೆ ಸೆಣಸಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆರೋಪಿ ಅತ್ಯಾಚಾರ ಎಸಗಿರುವುದಲ್ಲದೇ, ಪಿಸ್ತೂಲ್‍ನಿಂದ ತನ್ನ ಮೇಲೆ ಹಲ್ಲೆ ನಡೆಸಿ, ಬೆದರಿಕೆಯೊಡ್ಡು ಸ್ಥಳದಿಂದ ಪರಾರಿಯಾಗಿರುವುದಾಗಿ ತಿಳಿಸಿದ್ದಾರೆ. ಸಮಾಜಕ್ಕೆ ಹೆದರಿ ಕುಟುಂಬಸ್ಥರು ಇಷ್ಟು ದಿನ ದೂರು ದಾಖಲಿಸಿರಲಿಲ್ಲ. ಆದರೆ ಇದೀಗ ದೂರು ದಾಖಲಿಸಿರುವುದಾಗಿ ತಿಳಿಸಿದ್ದಾರೆ ಮತ್ತು ಪೊಲೀಸರು ಈ ಕುರಿತಂತೆ ತನಿಖೆ ಆರಂಭಿಸಿದ್ದಾರೆ.ಮಹಾರಾಷ್ಟ್ರ ನಗರ ಪಂಚಾಯತ್‌ ಚುನಾವಣಾ ಫಲಿತಾಂಶ – ಬಿಜೆಪಿ ಅತಿ ದೊಡ್ಡ ಪಕ್ಷ

Leave a Reply

Your email address will not be published.

Back to top button