ಲಂಡನ್: ಪ್ರೇಮಿಯೊಬ್ಬಳು ತನ್ನ ಪ್ರಿಯತಮ ಸಾಯುವ ಕೊನೆಯ ಕ್ಷಣದಲ್ಲಿ ನೀಡಿದ ಅಪ್ಪುಗೆಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದ್ದು, ಸ್ಟಿಫೇನಿ ರೇ ಅಪ್ಪುಗೆ ನೀಡಿದ ಪ್ರೇಮಿ. ಈಕೆ ತನ್ನ ಪ್ರೇಮಿಯಾದ ಬ್ಲೇಕ್ ವಾರ್ಡ್ ಸಾಯಲು ಇನ್ನು 16 ನಿಮಿಷ ಇರುವಾಗ ಪ್ರೀತಿಯಿಂದ ಒಂದು ಅಪ್ಪುಗೆಯನ್ನು ನೀಡಿದ್ದಾರೆ. ಈ ಫೋಟೋವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Advertisement
ಬ್ಲೇಕ್ ವಾರ್ಡ್, ವೇಲ್ಸ್ ನಲ್ಲಿರುವ ತಮ್ಮ ಮನೆಯ ಸಮೀಪದ ತಮ್ಮ ಕುಟುಂಬದ ಜೊತೆ ಪ್ರವಾಸದಲ್ಲಿದ್ದು, ಬೀಚಿನಲ್ಲಿ ಸ್ವಿಮಿಂಗ್ ಮಾಡುತ್ತಿದ್ದರು. ಈ ವೇಳೆ ಸಮುದ್ರದ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಆಗ ಸ್ಥಳದಲ್ಲಿದ್ದ ಕರಾವಳಿ ಸಿಬ್ಬಂದಿ ಗಮನಿಸಿ ತಕ್ಷಣ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾದರೆ ಶನಿವಾರ ಮೃತಪಟ್ಟಿದ್ದಾರೆ.
Advertisement
ಈ ವೇಳೆ ಸ್ಟಿಫೇನಿ ರೇ ಪ್ರೇಮಿಯನ್ನು ನೋಡಲು ಆಸ್ಪತ್ರೆಗೆ ಹೋಗಿದ್ದು, ಆತನ ಕೊನೆಯ ಕ್ಷಣದಲ್ಲಿ ಪಕ್ಕದಲ್ಲಿ ಮಲಗಿಕೊಂಡು ಗಟ್ಟಿಯಾಗಿ ಅಪ್ಪಿಕೊಂಡಿದ್ದಾಳೆ. ಬಳಿಕ ಆಗಸ್ಟ್ 4 ರಂದು ಅಪ್ಪುಗೆ ಫೋಟೋವನ್ನು ತನ್ನ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾಳೆ.
Advertisement
ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ ಬಳಿಕ ಅನೇಕರು ಅದನ್ನು ಶೇರ್ ಮಾಡಿ ಸಾಂತ್ವನ ಹೇಳಿದ್ದಾರೆ. ಬ್ಲೇಕ್ ಸಾವಿನ ನಂತರ ಕರಾವಳಿಯ ಸಿಬ್ಬಂದಿ ಒಂದು ನಿಮಿಷ ಬೀಚ್ ನಲ್ಲಿ ಮೌನಾಚರಣೆ ಮಾಡಿದ್ದಾರೆ. ಸ್ಟಿಫೇನ್ ರೇ ಫೋಟೋ ಜೊತೆ ಒಂದು ಭಾವನಾತ್ಮಕವಾದ ಪತ್ರವೊಂದನ್ನು ಬರೆದಿದ್ದಾಳೆ.