ಹಾಸನ: ಹದಿಹರಿಯದ ಪ್ರೇಮಕ್ಕೆ ಅಪ್ರಾಪ್ತ ಬಾಲಕಿ ಬಲಿಯಾದ ಘಟನೆ ಹಾಸನ (Hassan) ಜಿಲ್ಲೆ ಸಕಲೇಶಪುರ (Sakleshpura) ತಾಲೂಕಿನ ಯಸಳೂರು ಗ್ರಾಮದಲ್ಲಿ ನಡೆದಿದೆ.
ಬಾಲಕಿ ಇತ್ತೀಚೆಗೆ ಮತ್ತೋರ್ವ ಅಪ್ರಾಪ್ತ ಬಾಲಕನೊಂದಿಗೆ ಸುತ್ತಾಡುತ್ತಿದ್ದಳು. ಮಂಗಳವಾರ ತನ್ನ ಅಪ್ರಾಪ್ತೆ ಸ್ನೇಹಿತೆ, ಅಪ್ರಾಪ್ತ ಬಾಲಕನೊಂದಿಗೆ ಬೈಕ್ನಲ್ಲಿ ಜಾಲಿ ರೈಡ್ ಹೋಗಿದ್ದಳು. ಇದನ್ನು ಲೋಕೇಶ್ ಪ್ರಶ್ನಿಸಿದ್ದನು. ಇದಾದ ಬಳಿಕ ಆತ ಅಪ್ರಾಪ್ತ ಬಾಲಕಿ ಮೇಲೆ ಪದೇ ಪದೇ ಅನುಮಾನಗೊಂಡು ಜಗಳವಾಡುತ್ತಿದ್ದ.
Advertisement
Advertisement
ಇತ್ತ ಜಾಲಿ ರೈಡ್ ಹೋಗಿದ್ದಕ್ಕೆ ಅಪ್ರಾಪ್ತ ಬಾಲಕಿಗೆ ಪೋಷಕರು ಕೂಡ ಬುದ್ಧಿ ಹೇಳಿದ್ದರು. ಇದರಿಂದ ಮನನೊಂದು ಬಾಲಕಿ ಬುಧವಾರ ವಿಷ ಕುಡಿದಿದ್ದಳು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಹಾಸನದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಸ್ವಚ್ಛತೆ ಮರೆತ ಹಾಸ್ಟೆಲ್ ಸಿಬ್ಬಂದಿ- 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅಂಟಿದ ಚರ್ಮರೋಗ!
Advertisement
ಘಟನೆ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಲೋಕೇಶ್ ವಿರುದ್ಧ ಕೇಸ್ ದಾಖಲಿಸಿ ಬಂಧಿಸಿದ್ದಾರೆ. ಈ ಘಟನೆ ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k