ಸರ್ಬಿಯಾದ ಶಾಲೆಯಲ್ಲಿ ಅಪ್ರಾಪ್ತ ಬಾಲಕನಿಂದ ಗುಂಡಿನ ದಾಳಿ – 8 ಮಕ್ಕಳ ಸಾವು

Public TV
1 Min Read
Serbian

ಬೆಲ್‌ಗ್ರೇಡ್: ಸರ್ಬಿಯಾದ (Serbia) ರಾಜಧಾನಿ ಬೆಲ್‌ಗ್ರೇಡ್‌ನ (Belgrade) ಶಾಲೆಯೊಂದರಲ್ಲಿ (ಅಪ್ರಾಪ್ತ ಬಾಲಕನೊಬ್ಬ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಶಾಲಾ ಸಿಬ್ಬಂದಿ ಸೇರಿದಂತೆ 8 ಮಕ್ಕಳು ಸಾವನ್ನಪ್ಪಿದ್ದಾರೆ.

ಬೆಲ್‌ಗ್ರೇಡ್‌ನ ವ್ಲಾಡಿಸ್ಲಾವ್ ರಿಬ್ನಿಕರ್ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 8:40ರ ವೇಳೆಗೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಒಟ್ಟು 9 ಮಂದಿ ಸಾವನ್ನಪ್ಪಿದರೆ, ಇನ್ನೂ 6 ಮಕ್ಕಳು ಹಾಗೂ ಶಿಕ್ಷಕರು ಗಾಯಗೊಂಡಿದ್ದಾರೆ. ಗುಂಡು ಹಾರಿಸಿದ್ದ 7ನೇ ತರಗತಿಯ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

Serbian 1

ವರದಿಗಳ ಪ್ರಕಾರ ಬಾಲಕ ತನ್ನ ತಂದೆಯ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋಗಳು ಹರಿದಾಡುತ್ತಿದ್ದು, ಪೊಲೀಸರು ಆರೋಪಿ ಬಾಲಕನ ತಲೆಯನ್ನು ಮುಚ್ಚಿ ತಮ್ಮ ವಾಹನದೆಡೆಗೆ ಕರೆದುಕೊಂಡು ಹೋಗುವುದು ಕಂಡುಬಂದಿದೆ. ಹಲವು ಮಕ್ಕಳ ಸಾವಿನ ಸುದ್ದಿ ಕೇಳುತ್ತಲೇ ಭಯಭೀತರಾದ ಪೋಷಕರು ತಮ್ಮ ಮಕ್ಕಳನ್ನು ಹುಡುಕಿಕೊಂಡು ಶಾಲೆಗೆ ಧಾವಿಸಿದ್ದಾರೆ. ಇದನ್ನೂ ಓದಿ: ಸಾಕಿದ್ದ ಮುದ್ದಿನ ಗಿಳಿ ಸಾವು – ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ

ಸರ್ಬಿಯಾದಲ್ಲಿ ಇಂತಹ ಸಾಮೂಹಿಕ ಗುಂಡಿನ ದಾಳಿಗಳು ತೀರಾ ಅಪರೂಪವಾಗಿದೆ. ಆದರೂ 1990ರ ಯುದ್ಧದ ಬಳಿಕ ದೇಶದಲ್ಲಿ ಉಳಿದಿರುವ ಶಸ್ತ್ರಾಸ್ತ್ರಗಳ ಸಂಖ್ಯೆಯ ಬಗ್ಗೆ ತಜ್ಞರು ಪದೇ ಪದೇ ಎಚ್ಚರಿಸಿದ್ದಾರೆ. ಆರ್ಥಿಕ ಸಂಕಷ್ಟ ಹಾಗೂ ಇತರ ಘರ್ಷಣೆಗಳಿಂದಾಗಿ ಇಂತಹ ಘಟನೆಗಳಿಗೆ ಪ್ರಚೋದನೆ ಸಿಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಲಿಂಗ ವಿವಾಹ ಕೇಸ್ – ಸಲಹಾ ಸಮಿತಿ ರಚಿಸುತ್ತೇವೆ ಎಂದ ಕೇಂದ್ರ ಸರ್ಕಾರ

Share This Article