ಕೋಲ್ಕತ್ತಾ: ಕಾಲೇಜು ಯುವತಿಯೊಬ್ಬಳು (Teen) ಮಾಲ್‌ವೊಂದರಲ್ಲಿ (Mall) ಚಾಕಲೇಟ್ (Chocolate) ಕದ್ದಿರುವ ವೀಡಿಯೋ ವೈರಲ್ ಆಗಿರುವುದಕ್ಕೆ ಮನನೊಂದು ಆತ್ಮಹತ್ಯೆಗೆ (Suicide) ಶರಣಾಗಿರುವ ದಾರುಣ ಘಟನೆ ಪಶ್ಚಿಮ ಬಂಗಾಳದ (West Bengal) ಅಲಿಪುರ್‌ದವಾರ್ ಜಿಲ್ಲೆಯಲ್ಲಿ ನಡೆದಿದೆ.
ವರದಿಗಳ ಪ್ರಕಾರ ಯುವತಿ ಜೈಗಾಂವ್‌ನ ಶಾಪಿಂಗ್ ಮಾಲ್‌ನಲ್ಲಿ ಚಾಕಲೇಟ್ ಕದ್ದಿದ್ದಾಳೆ. ಯುವತಿಯ ಗಮನಕ್ಕೆ ಬಾರದಂತೆ ಅದರ ವೀಡಿಯೋವನ್ನು ಅಲ್ಲಿ ಕೆಲಸ ಮಾಡುವವರು ಚಿತ್ರೀಕರಿಸಿದ್ದಾರೆ. ಯುವತಿ ಚಾಕಲೇಟ್ ಕದ್ದ ಬಳಿಕ ಅಂಗಡಿ ಮಾಲೀಕರ ಕೈಯಲ್ಲಿ ಆಕೆ ಸಿಕ್ಕಿ ಬಿದ್ದಿದ್ದಾಳೆ. ಈ ವೇಳೆ ಆಕೆ ಕ್ಷಮೆಯನ್ನೂ ಕೇಳಿದ್ದಾಳೆ.
Advertisement
Advertisement
ಬಳಿಕ ಆಕೆ ಚಾಕಲೇಟ್ ಕದ್ದಿರುವ ವೀಡಿಯೋವನ್ನು ಚಿತ್ರೀಕರಿಸಿರುವ ವಿಚಾರ ತಿಳಿದು, ಅದನ್ನು ಎಲ್ಲಿಯೂ ಹಂಚಿಕೊಳ್ಳದAತೆ ಮನವಿ ಮಾಡಿಕೊಂಡಿದ್ದಾಳೆ. ಆದರೆ ಬಳಿಕ ವೀಡಿಯೋ ಸ್ಥಳೀಯವಾಗಿ ವೈರಲ್ ಆಗಿದೆ. ಇದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದನ್ನೂ ಓದಿ: ಬ್ರೇಕಪ್ ಮಾಡಿದಳೆಂದು ಗರ್ಲ್‍ಫ್ರೆಂಡ್ ಕೊಲೆಗೈದ ವಿವಾಹಿತ!
Advertisement
ಈ ಬಗ್ಗೆ ಕಂಬನಿ ಹಾಕಿರುವ ಯುವತಿಯ ಕುಟುಂಬ, ಆಕೆ ತಪ್ಪು ಮಾಡಿದ್ದಾಳೆ ನಿಜ. ಆದರೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಬಳಿಕ ಅವಳು ಚಾಕಲೇಟ್‌ಗೆ ಪಾವತಿಯನ್ನೂ ಮಾಡಿದ್ದಾಳೆ. ಇದಾದ ಬಳಿಕವೂ ಆಕೆಯನ್ನು ನಿಂದಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಆಕೆಯ ವೀಡಿಯೋವನ್ನು ವೈರಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement
ಘಟನೆಯ ಬಳಿಕ ಆಕೆ ತುಂಬಾ ಒತ್ತಡದಲ್ಲಿದ್ದಳು. ಇದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆ ವೀಡಿಯೋವನ್ನು ಏಕೆ ವೈರಲ್ ಮಾಡಬೇಕಿತ್ತು? ಆತ್ಮಹತ್ಯೆ ಮಾಡಿಕೊಂಡಿರುವ ಮಗಳನ್ನು ಮತ್ತೆ ಬದುಕಿಸಲು ಸಾಧ್ಯವೆ? ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆಯ ಬಳಿಕ ಕ್ರೋಧಗೊಂಡ ಜನರು ಸೋಮವಾರ ಶಾಪಿಂಗ್ ಮಾಲ್ ಮುಂದೆ ಜಮಾಯಿಸಿ, ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಘಟನೆಯ ಬಗ್ಗೆ ಶಾಪಿಂಗ್ ಮಾಲ್‌ನ ಅಧಿಕಾರಿಗಳೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಕಣ್ಣಾಮುಚ್ಚಾಲೆ ಆಡುವಾಗ ತಲೆಗೆ ಲಿಫ್ಟ್ ಬಡಿದು ಬಾಲಕಿ ಸಾವು