ಅಹಮದಾಬಾದ್: 19 ವರ್ಷದ ಯುವಕನೊಬ್ಬ ತನ್ನ ವಿವಾಹಿತ ಸಹೋದರಿ ಮೇಲೆ ಅತ್ಯಾಚಾರವೆಸಗಿದ ತಂದೆಯನ್ನ ಕೊಲೆ ಮಾಡಿರೋ ಘಟನೆ ಗುಜರಾತ್ನ ರಾಜ್ಕೋಟ್ನಲ್ಲಿ ನಡೆದಿದೆ.
ಭಾನುವಾರದಂದು ಜಮ್ನಗರದ ಜೊದಿಯಾ ತಾಲೂಕಿನಲ್ಲಿ ತಂದೆ ತನ್ನ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದರಿಂದ ನೊಂದ ಆ ಮಹಿಳೆ ತನ್ನ ಸಹೋದರನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆ ಈಕೆಯ ತಂದೆ ಎರಡು ಬಾರಿ ಅತ್ಯಾಚಾರವೆಸಗಿದ್ದ ಎಂದು ವರದಿಯಾಗಿದೆ.
Advertisement
ವಿಷಯ ತಿಳಿದು ಸಿಟ್ಟಿಗೆದ್ದ ಯುವಕ ಕೂಡಲೇ ಮನೆಗೆ ಹೋಗಿ ಈ ಬಗ್ಗೆ ತಂದೆಯನ್ನು ವಿಚಾರಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿದ್ದು, ಯುವಕ ತಂದೆಯನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
Advertisement
ಸಂತ್ರಸ್ಥ ಮಹಿಳೆ ತನ್ನ ಗಂಡನೊಂದಿಗೆ ಜಗಳ ಮಾಡಿಕೊಂಡಿದ್ದು, ಒಂದು ತಿಂಗಳಿನಿಂದ ದೇವಭೂಮಿ ದ್ವಾರಕಾ ಜಿಲ್ಲೆಯ ಗಂಡನ ಮನೆ ಬಿಟ್ಟು ತಾಯಿ ಮನೆಗೆ ಬಂದು ನೆಲೆಸಿದ್ದರು. ಮಹಿಳೆಯ ತಂದೆ ಕಾರ್ಮಿಕನಾಗಿದ್ದು 10-15 ದಿನಗಳಿಗೊಮ್ಮೆ ಮನೆಗೆ ಬರುತ್ತಿದ್ದ ಎಂದು ಜೊದಿಯಾ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಪಿಎಸ್ ಕೊರಿಂಗಾ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
Advertisement
ಆರೋಪಿ ಯುವಕನನ್ನು ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.