ಚಂಡೀಗಢ: ಮದರಸಾದಲ್ಲಿ(Madrasa) ಓದಲು ಇಷ್ಟವಿಲ್ಲದೇ ತನ್ನ ಪೋಷಕರಿಗೆ ಬಂದು ಮನೆಗೆ ವಾಪಸ್ ಕರೆದುಕೊಂಡು ಹೋಗುವಂತೆ ಹಠ ಮಾಡುತ್ತಿದ್ದ ಬಾಲಕನಿಂದ ಮದರಸಾಗೆ ಎಲ್ಲಿ ಕೆಟ್ಟ ಹೆಸರು ಬರುತ್ತದೆಯೋ ಎಂದು ಆತನನ್ನು ಮದರಸಾದಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಕೊಲೆ ಮಾಡಿದ ಆರೋಪದಡಿ ಪೊಲೀಸರು ಬಂಧಿಸಿದ್ದಾರೆ.
Advertisement
ಹರಿಯಾಣದ(Haryana) ನುಹ್‍ನ (Nuh) ಮದರಸಾದ ಕೋಣೆಯೊಳಗೆ ಸಮೀರ್(11)ಗೆ ಮದರಸಾದಲ್ಲಿ ಓದಲು ಇಷ್ಟವಿರಲಿಲ್ಲ. ಮದರಸಾಗೆ ಧಕ್ಕೆ ತರುವ ಉದ್ದೇಶಹೊಂದಿದ್ದನು. ಹೀಗಾಗಿ ಸಮೀರ್ ಕತ್ತು ಹಿಸುಕಿ ವಿದ್ಯಾರ್ಥಿ ಕೊಲೆ ಮಾಡಿದ್ದಾನೆ. ಇದೀಗ ಆರೋಪಿಯನ್ನು ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದ್ದು, ಆತನನ್ನು ಫರಿದಾಬಾದ್‍ನಲ್ಲಿರುವ ಬಾಲ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Advertisement
Advertisement
ಶುಕ್ರವಾರದ ಪ್ರಾರ್ಥನೆ ಸಲ್ಲಿಸಲು ಮದರಸಾದಲ್ಲಿ ಹೆಚ್ಚಿನ ಜನರು ಸೇರುತ್ತಾರೆ ಎಂದು ಶನಿವಾರ ಸಮೀರ್ (Sameer) ಹತ್ಯೆಗೆ ಆರೋಪಿ ಹೊಂಚು ಹಾಕಿ, ನಂತರ ಸಮೀರ್ ಅನ್ನು ಮದರಸಾದ ನೆಲಮಾಳಿಗೆಯ ಕೋಣೆಗೆ ಕರೆದೊಯ್ದು ಕೊಂದು ಮರಳಿನಲ್ಲಿ ಹೂತು ಹಾಕಿದ್ದಾನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮೋತ್ಸವಕ್ಕೆ ಹೋಗಿದ್ದ ವ್ಯಕ್ತಿ ಕಾಣೆ- ಕುಟುಂಬ ಸದಸ್ಯರನ್ನ ಭೇಟಿಯಾದ ಸಿದ್ದರಾಮಯ್ಯ
Advertisement
ಆರೋಪಿ ಮತ್ತು ಮೃತ ವಿದ್ಯಾರ್ಥಿ ಒಟ್ಟಿಗೆ ಯಾವಾಗಲೂ ಆಟವಾಡುತ್ತಿದ್ದರು ಮತ್ತು ಚೆನ್ನಾಗಿದ್ದರು. ಆದರೆ ಈ ಪ್ರಕರಣ ಸಂಬಂಧ ಮದರಸಾಕ್ಕೆ ಭೇಟಿ ನೀಡಿ ಕೆಲವು ವಿದ್ಯಾರ್ಥಿಗಳನ್ನು ಪ್ರಶ್ನಿಸಿದಾಗ, ಆರೋಪಿ ಭಯಗೊಂಡನು. ಹೀಗಾಗಿ ಆತನನ್ನು ವಿಚಾರಣೆ ನಡೆಸಿದಾಗ ಸೆಪ್ಟೆಂಬರ್ 3ರ ಶನಿವಾರದಂದು ಬಾಲಕನನ್ನು ಕೊಂದಿರುವುದಾಗಿ ಸತ್ಯ ಬಹಿರಂಗಪಡಿಸಿದ್ದಾನೆ ಎಂದು ನುಹ್ ಅವರ ಪೊಲೀಸ್ ಅಧೀಕ್ಷಕ ವರುಣ್ ಸಿಂಗ್ಲಾ (Varun Singla) ಅವರು ಹೇಳಿದ್ದಾರೆ.
ಬಾಲಕನ ಮೃತ ದೇಹವನ್ನು ಸೆಪ್ಟೆಂಬರ್ 5 ರಂದು ಪೊಲೀಸರು ವಶಪಡಿಸಿಕೊಂಡರು ಮತ್ತು ಈ ಕುರಿತಂತೆ ಪಿನಂಗಾವಾ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿಕೊಂಡಿದ್ದರು. ಇದನ್ನೂ ಓದಿ: ಪಿಎಸ್‍ಐ ಹಗರಣ: ನಾನು ಯಾವುದೇ ತಪ್ಪು ಮಾಡಿಲ್ಲ, ಆಡಿಯೋದಲ್ಲಿ ಮಾತನಾಡಿದ್ದು ನಾನಲ್ಲ: ಬಸವರಾಜ ದಡೇಸಗೂರು
ಸಮೀರ್ ಅವರ ಚಿಕ್ಕಪ್ಪ ಇಕ್ಬಾಲ್ ನೀಡಿದ ದೂರಿನ ಆಧಾರದ ಮೇಲೆ ಬಾಲಕ 2021 ರಿಂದ ಶಾಚೌಖಾ ಗ್ರಾಮದ ದರ್ಗಾ ವಾಲಾ ಮದರಸಾದಲ್ಲಿ ಉರ್ದು ಮತ್ತು ಅರೇಬಿಕ್ ಕಲಿಯುತ್ತಿದ್ದನು ಮತ್ತು ಅಲ್ಲಿಯೇ ವಾಸವಾಗಿದ್ದನು. ಸೆಪ್ಟೆಂಬರ್ 3 ರಂದು ಮದರಸಾದಿಂದ ಸಮೀರ್ ನಾಪತ್ತೆಯಾಗಿದ್ದಾನೆ ಎಂದು ಗ್ರಾಮದ ಹಾಜಿ ಅಖ್ತರ್ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ. ಆದರೆ ನಂತರ ಕಟ್ಟಡದಲ್ಲಿಯೇ ಆತನ ಶವ ಪತ್ತೆಯಾಗಿದೆ.