CrimeLatestMain PostNational

ಅಪ್ರಾಪ್ತೆ ಮೇಲೆ ಅತ್ಯಾಚಾರ- ಆರೋಪಿಗಳ ಮನೆಗೆ ನುಗ್ಗಿದ ಬುಲ್ಡೋಜರ್

ಭೋಪಾಲ್: ಅಪ್ರಾಪ್ತ ಬಾಲಕಿಯ ಮೇಲೆ ಇಬ್ಬರು ಅಪ್ರಾಪ್ತ ಬಾಲಕರು ಸೇರಿ ಆರು ಮಂದಿ ಅತ್ಯಾಚಾರವೆಸಗಿದ ಘಟನೆ ಮಧ್ಯಪ್ರದೇಶದ(Madhya Pradesh) ರೇವಾ ಜಿಲ್ಲೆಯಲ್ಲಿ ನಡೆದಿದೆ.

ರೇವಾ ಜಿಲ್ಲಾ ಕೇಂದ್ರದಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ನೈಗರ್ಹಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತೆಯು ತನ್ನ ಸ್ನೇಹಿತನೊಂದಿಗೆ(Friend) ದೇವಸ್ಥಾನಕ್ಕೆ(Temple) ಹೋಗಿದ್ದಳು. ಇಬ್ಬರೂ ಹರಟೆ ಹೊಡೆಯುತ್ತಿದ್ದಾಗ ಅಲ್ಲಿಗೆ ಬಂದ ನಾಲ್ವರು ವ್ಯಕ್ತಿಗಳು ಹಾಗೂ ಇಬ್ಬರು ಅಪ್ರಾಪ್ತರು ಸ್ನೇಹಿತನ ಮುಂದೆ ಬಾಲಕಿಯನ್ನು ಎಳೆದೊಯ್ದಿದ್ದಾರೆ. ಆ ಬಳಿಕ ನದಿಯ ಬಳಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಬಾಲಕಿಯು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ದೂರಿನ ಪ್ರಕಾರ, ಬಾಲಕಿ ಹಾಗೂ ಆಕೆಯ ಸ್ನೇಹಿತ ಎಷ್ಟೇ ಬೇಡಿಕೊಂಡರೂ, ಆರೋಪಿಗಳು ಆಕೆಯನ್ನು ಬಿಡಲಿಲ್ಲ. ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಬಳಿಕ ಆಕೆಯ ಮೊಬೈಲ್ ಹಾಗೂ ಕಾಲ್ಗೆಜ್ಜೆಯನ್ನು ಕಿತ್ತುಕೊಂಡರು. ಅದಾದ ನಂತರ ಬಾಲಕಿಗೆ ಬೆದರಿಕೆ ಹಾಕಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಬೆಂಗಳೂರಲ್ಲಿ ಮತ್ತೆ ಆಪರೇಷನ್‌ ಬುಲ್ಡೋಜರ್‌ – ದೊಡ್ಡ ಕಟ್ಟಡಗಳು, ವಿಲ್ಲಾಗಳನ್ನು ಕೆಡವುತ್ತಾ BBMP?

ಘಟನೆ ಬೆನ್ನಲ್ಲೇ ಮೂವರು ಆರೋಪಿಗಳ ಅಕ್ರಮ ಕಟ್ಟಡವನ್ನು ಜಿಲ್ಲಾಡಳಿತ ನೆಲಸಮಗೊಳಿಸಲಾಗಿದೆ. ಇನ್ನುಳಿದಂತೆ ಘಟನೆಯಲ್ಲಿ ಭಾಗಿಯಾದ ಉಳಿದ ಮೂವರಿಗೂ ಅದೇ ರೀತಿಯ ಶಿಕ್ಷೆಯನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕಿಯ ಆರೋಗ್ಯ ಹದಗೆಟ್ಟಿದ್ದರಿಂದ ಪೊಲೀಸ್ ತಂಡ ಆಸ್ಪತ್ರೆಗೆ ಸಾಗಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಜಮೀರ್ ಸಿಎಂ ಆಗ್ತಾರೆ ಎಂದ ಚರ್ಚ್ ಫಾದರ್

Live Tv

Leave a Reply

Your email address will not be published.

Back to top button