ಚೆನ್ನೈ: 17 ವರ್ಷದ ಮಹತ್ವಾಕಾಂಕ್ಷಿ ಫುಟ್‌ಬಾಲ್ ಆಟಗಾರ್ತಿ (Football Player) ವೈದ್ಯರ ನಿರ್ಲಕ್ಷ್ಯದಿಂದಾಗಿ ಮೊದಲಿಗೆ ತನ್ನ ಕಾಲನ್ನು ಕಳೆದುಕೊಂಡು ಬಳಿಕ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ (Tamil Nadu) ನಡೆದಿದೆ.
ದೈಹಿಕ ಶಿಕ್ಷಣದಲ್ಲಿ ಪದವಿಪೂರ್ವ ವಿದ್ಯಾರ್ಥಿನಿಯಾಗಿದ್ದ ಪ್ರಿಯಾ ತನ್ನ ಬಲಗಾಲಿನ ಅಸ್ಥಿರಜ್ಜು ಹರಿದ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಮೊಣಕಾಲು ಸಂಬಂಧಿತ ಶಸ್ತ್ರಚಿಕಿತ್ಸೆಗೆ (Surgery) ಒಳಗಾಗಿದ್ದಳು. ಆದರೆ ಶಸ್ತ್ರಚಿಕಿತ್ಸೆಯ ನಂತರ ತೊಡಕುಗಳ ಕಾರಣದಿಂದ ಬಾಲಕಿಯ ಕಾಲನ್ನೇ ಕತ್ತರಿಸಬೇಕಾಯಿತು.
Advertisement
Advertisement
ನವೆಂಬರ್ 8ರಂದು ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾಳೆ. ಆದರೆ ಆಕೆಯ ಸಾವಿಗೆ ಕಾರಣ ಅಂಗಾಂಗ ವೈಫಲ್ಯ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಲವ್ ಜಿಹಾದ್‌ಗೆ ಬಲಿಯಾದ್ರೆ ಇದೇ ಗತಿ – ಹೊಸ ಆಯಾಮದಲ್ಲಿ ತನಿಖೆ ನಡೆಸುವಂತೆ VHP ಮನವಿ
Advertisement
ಬಾಲಕಿ ಮೃತಪಟ್ಟ ಬಳಿಕ ಆಕೆಯ ಪೋಷಕರು ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯವೇ ಮಗಳ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆ ನಿರ್ಲಕ್ಷ್ಯದಿಂದ ಶಸ್ತ್ರಚಿಕಿತ್ಸೆ ನಡೆಸಿದ ಇಬ್ಬರು ವೈದ್ಯರನ್ನು ಅಮಾನತುಗೊಳಿಸಲಾಗಿದೆ. ಅವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಸುಬ್ರಮಣ್ಯಂ ತಿಳಿಸಿದ್ದಾರೆ.
Advertisement
ಬಾಲಕಿಯ ಸಾವಿಗೆ ಸಂತಾಪ ವ್ಯಕ್ತಪಡಿಸಿದ ಸುಬ್ರಮಣ್ಯಂ, ಇದು ಭರಿಸಲಾರದ ನಷ್ಟವಾಗಿದೆ. ಬಾಲಕಿಗೆ ಶಸ್ತ್ರಚಿಕಿತ್ಸೆಯನ್ನು ಸರಿಯಾಗಿಯೇ ಮಾಡಲಾಗಿದೆ. ಆದರೆ ಕಂಪ್ರೆಷನ್ ಬ್ಯಾಂಡೇಜ್ ಅನ್ನು ಬಿಗಿಯಾಗಿ ಹಾಕಿದ್ದರಿಂದ ರಕ್ತ ಪರಿಚಲನೆ ನಿಂತಿದೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಬ್ಬರು ವೈದ್ಯರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂ. ಆರ್ಥಿಕ ನೆರವು ಹಾಗೂ ಆಕೆಯ ಸಹೋದರ ಒಬ್ಬನಿಗೆ ಅರ್ಹತೆ ಪಡೆದಾಗ ಸರ್ಕಾರಿ ಉದ್ಯೋಗವನ್ನು ಘೋಷಿಸಿರುವುದಾಗಿ ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ಬಾವಿಗೆ ಬಿದ್ದ ಒಂಟಿ ಸಲಗ – ಮೇಲಕ್ಕೆತ್ತಲು ಅರಣ್ಯಾಧಿಕಾರಿಗಳಿಂದ ಬಿಗ್ ಸರ್ಕಸ್