ಮುಂಬೈ: ಮದ್ಯದ ಅಮಲಿನಲ್ಲಿ ಐಷಾರಾಮಿ ಕಾರು ಚಲಾಯಿಸಿ ಇಬ್ಬರು ಟೆಕ್ಕಿಗಳ ಸಾವಿಗೆ (Pune Porsche horror) ಕಾರಣನಾದ ಆಪ್ರಾಪ್ತನಿಗೆ ಜಾಮೀನು ನೀಡಿದ್ದ ವಿಚಾರದಲ್ಲಿ ಇಡೀ ದೇಶದಲ್ಲೇ ಭಾರೀ ಚರ್ಚೆ ಆಗುತ್ತಿದೆ. ಈ ಬೆನ್ನಲ್ಲೇ ಪುಣೆ ಪೊಲೀಸ್ ಆಯುಕ್ತರಾದ (Pune Police commissioner) ಅಮಿತೇಶ್ ಕುಮಾರ್ ಸ್ಫೋಟಕ ಮಾಹಿತಿಯೊಂದನ್ನ ನೀಡಿದ್ದಾರೆ.
ಈ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸ್ ಆಯುಕ್ತರು, ಇಬ್ಬರು ಟೆಕ್ಕಿಗಳಿಗೆ (Techies) ಕಾರು ಡಿಕ್ಕಿ ಹೊಡೆಯುವ ಮುನ್ನ ಅಪ್ರಾಪ್ತ ಎರಡು ಬಾರ್‌ಗಳಿಗೆ ಹೋಗಿದ್ದ. ಅದರಲ್ಲಿ ಮೊದಲನೇ ಬಾರ್‌ಗೆ ಹೋಗಿದ್ದಾಗ ಮದ್ಯಕ್ಕಾಗಿ ಕೇವಲ 90 ನಿಮಿಷದಲ್ಲಿ 48 ಸಾವಿರ ರೂ. ಖರ್ಚು ಮಾಡಿದ್ದಾನೆ ಎಂದು ಸ್ಫೋಟಕ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಿಲ್ಲರ್ ಬಾಯ್‌ಗೆ ಪುಣೆ ಠಾಣೆಯಲ್ಲಿ ರಾಜಾತಿಥ್ಯ – ಪಿಜ್ಜಾ, ಬಿರಿಯಾನಿ ತಿನ್ನಿಸಿದ್ದ ಪೊಲೀಸರ ವಿರುದ್ಧ ಆಕ್ರೋಶ
Advertisement
Advertisement
ಹೌದು. ಶನಿವಾರ ರಾತ್ರಿಯೇ ಅಪ್ರಾಪ್ತ ತನ್ನ ಸ್ನೇಹಿತರೊಟ್ಟಿಗೆ ರಾತ್ರಿ 10:40ರ ವೇಳೆಗೆ ಕೋಸಿ ರೆಸ್ಟೋರೆಂಟ್-ಪಬ್‌ಗೆ ಹೋಗಿದ್ದಾನೆ. ಅಲ್ಲಿ ಕೇವಲ 90 ನಿಮಿಷದಲ್ಲೇ 48 ಸಾವಿರ ರೂ. ಖರ್ಚು ಮಾಡಿದ್ದಾನೆ. ಅಲ್ಲಿ ಸೇವೆ ನೀಡಲು ನಿಲ್ಲಿಸಿದ ನಂತರ ತಡರಾತ್ರಿ 12:10ರ ವೇಳೆಗೆ ಬ್ಲ್ಯಾಕ್ ಮ್ಯಾರಿಯೊಟ್ ಪಬ್‌ಗೆ ತೆರಳಿದ್ದಾನೆ. ಆದ್ರೆ 48 ಸಾವಿರ ರೂ. ವೆಚ್ಚ ಆತನದ್ದೊಬ್ಬನದ್ದೇ ಅಲ್ಲ. ಸ್ನೇಹಿತರಿಗೂ ಕೊಡಿಸಿದ ವೆಚ್ಚ ಸೇರಿ ಆಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿರುವುದಾಗಿ ವರದಿಯಾಗಿದೆ.
Advertisement
ಭಾನುವಾರ ಅಪ್ತಾಪ್ತನನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ಆತನ ರಕ್ತದ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಸದ್ಯ ಆರೋಪಿ ವಿರುದ್ಧ ಸೆಕ್ಷನ್ 304 ಮತ್ತು 304 (ಎ) ಅನ್ವಯ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಪಘಾತಕ್ಕೆ ಇಬ್ಬರು ಟೆಕ್ಕಿಗಳು ಬಲಿ ಕೇಸ್; ಕಾರು ಚಲಾಯಿಸಿದ ಅಪ್ರಾಪ್ತನ ತಂದೆ ಬಂಧನ
Advertisement
ಕಿಲ್ಲರ್ ಬಾಯ್‌ಗೆ ಪುಣೆ ಠಾಣೆಯಲ್ಲಿ ರಾಜಾತಿಥ್ಯ:
ಪ್ರಭಾವಿ ಬಿಲ್ಡರ್ ಪುತ್ರನಿಗೆ ಪೊಲೀಸರು ಠಾಣೆಯಲ್ಲಿ ರಾಜ ಮರ್ಯಾದೆ ನೀಡಿದ್ರು. ಪಿಜ್ಜಾ, ಬರ್ಗರ್, ಬಿರಿಯಾನಿ ತಿನ್ನಿಸಿ ವಿವಿಐಪಿ ಆತಿಥ್ಯ ಕೊಟ್ಟಿದ್ರು ಎಂಬ ವಿಚಾರ ಬಯಲಾಗಿದೆ.
ಇದು ಗೊತ್ತಾದ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರು ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಸಾಕಷ್ಟು ಟೀಕೆ, ಆಕ್ರೋಶದ ನಂತ್ರ ಎಚ್ಚೆತ್ತ ಪೊಲೀಸರು, 17 ವರ್ಷದ ಯುವಕನ ತಂದೆ, ಬಿಲ್ಡರ್ ವಿಶಾಲ್ ಅಗರ್ವಾಲ್‌ರನ್ನು ಬಂಧಿಸಿದ್ದಾರೆ. ಅಪ್ರಾಪ್ತ ಮಗನನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಿರುವುದು. ಅವರಿಗೆ ಮಾದಕವಸ್ತುಗಳನ್ನು ಸಿಗುವಂತೆ ಮಾಡಿದ ಆರೋಪದಡಿ ಅಪ್ರಾಪ್ತನ ತಂದೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಲ್ಲದೇ, ಅಪ್ರಾಪ್ತನಿಗೆ ಮದ್ಯ ಪೂರೈಸಿದ ಆರೋಪದ ಮೇರೆಗೆ ಕೋಸಿ ರೆಸ್ಟೋರೆಂಟ್ ಮಾಲಿಕ ಸಚಿನ್ ಕಾಟ್ಕರ್, ಹೋಟೆಲ್ ಬ್ಲಾಕ್ ಮ್ಯಾನೇಜರ್ ಸಂದೀಪ್ ಸಾಂಗ್ಳೆ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮಮತಾಗೆ ನಿಮ್ಮ ಬೆಲೆ ಎಷ್ಟು ಎಂದ ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ 24 ಗಂಟೆ ಪ್ರಚಾರದಿಂದ ನಿಷೇಧ
ಬೆಂಗಳೂರಿನ ಪೋರ್ಶೆ ಶೋರೂಂನಲ್ಲೇ ಈ ಕಾರು ಖರೀದಿ ಮಾಡಿದ್ದು, ನಂಬರ್ ಪ್ಲೇಟ್ ಇಲ್ಲದೇ 1,600 ಕಿಲೋಮೀಟರ್ ಸಂಚಾರ ಮಾಡಿರೋದು ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿದೆ. ಈ ಮಧ್ಯೆ, ಅಪಘಾತ ಎಸಗಿದ ಅಪ್ರಾಪ್ತ ಬಾರ್‌ನಲ್ಲಿ ಮದ್ಯ ಸೇವಿಸುವ. ಮಾರ್ಗಮಧ್ಯೆ ಇಬ್ಬರು ಟೆಕ್ಕಿಗಳಿಗೆ ಕಾರನ್ನು ಡಿಕ್ಕಿ ಹೊಡೆಸುವ ದೃಶ್ಯಾವಳಿಗಳು ವೈರಲ್ ಆಗಿವೆ. 200 ಕಿಲೋಮೀಟರ್ ವೇಗದಲ್ಲಿ ಪೋರ್ಶೆ ಕಾರನ್ನು ಓಡಿಸಿದ್ದ ಅಪ್ರಾಪ್ತ, ನಿಯಂತ್ರಣ ಕಳೆದುಕೊಂಡು ಬೈಕ್‌ಗೆ ಡಿಕ್ಕಿ ಹೊಡೆದಿದ್ದ. ಈ ವೇಳೆ ಬೈಕ್‌ನಲ್ಲಿ ತೆರಳುತ್ತಿದ್ದ ಅನಿಶ್ ಮತ್ತು ಅಶ್ವಿನಿ ಮೃತಪಟ್ಟಿದ್ದರು.