ಅಪ್ರಾಪ್ತನಿಂದ ರೇಪ್‌- 2 ತಿಂಗಳ ಗರ್ಭಿಣಿಯಾದ ಅಪ್ರಾಪ್ತೆ

Public TV
0 Min Read
CRIME

ಬಾಗಲಕೋಟೆ: ಅಪ್ರಾಪ್ತೆಯ (Minor) ಮೇಲೆ ಅಪ್ರಾಪ್ತನೊಬ್ಬ ಅತ್ಯಾಚಾರ (Rape) ಎಸಗಿದ ಘಟನೆ ಇಳಕಲ್ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಾಲಕಿ ಈಗ ಎರಡು ತಿಂಗಳ ಗರ್ಭಿಣಿಯಾಗಿದ್ದು (Pregnant) ಇಳಕಲ್ ಗ್ರಾಮೀಣ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ.

ಇಬ್ಬರು ಈ ಹಿಂದೆ ಮೊರಾರ್ಜಿ ವಸತಿ ಶಾಲೆಯಲ್ಲಿ ಓದುತ್ತಿದ್ದರು. ಅಪ್ರಾಪ್ತೆ 7ನೇ ತರಗತಿಯಲ್ಲಿ ಬಾಲಕ 8ನೇ ತರಗತಿಯಲ್ಲಿದ್ದಾಗ ಅತ್ಯಾಚಾರ ಎಸಗಿದ್ದಾನೆ.

ಸದ್ಯ ಅಪ್ರಾಪ್ತನಿಗೆ 17 ವರ್ಷವಾಗಿದ್ದು ಅಪ್ರಾಪ್ತೆಗೆ 16 ವರ್ಷವಾಗಿದೆ. ಅಪ್ರಾಪ್ತೆಯ ತಂದೆ ನೀಡಿದ ದೂರಿನ್ವಯ ಅಪ್ರಾಪ್ತನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

Share This Article