ಐಜ್ವಾಲ್: ಮಿಜೋರಾಂ (Mizoram) ಹಾಗೂ ಛತ್ತೀಸ್‌ಗಢ ವಿಧಾನಸಭೆಗೆ ಇಂದು (ಮಂಗಳವಾರ) ಮೊದಲ ಹಂತದ ಮತದಾನ ಪ್ರಾರಂಭವಾಗಿದೆ. ಮತದಾನದ ದಿನದಂದು ಮಿಜೋರಾಂನ ಮುಖ್ಯಮಂತ್ರಿ ರಾಜಧಾನಿ ಐಜ್ವಾಲ್‌ನ (Aizawl) ಮತಗಟ್ಟೆಯನ್ನು ತಲುಪಿದರೂ ಮತಚಲಾಯಿಸಲಾಗದೆ ವಾಪಸಾಗಿದ್ದಾರೆ.
ಮಿಜೋರಾಂ ಮುಖ್ಯಮಂತ್ರಿ ಮತ್ತು ಎಂಎನ್‌ಎಫ್ ಅಧ್ಯಕ್ಷ ಝೋರಂತಂಗ (Zoramthanga) ಅವರು ಚುನಾವಣೆಗೆ ಮತಚಲಾಯಿಸಲು ತೆರಳಿದರೂ ಇವಿಎಂ (EVM) ಯಂತ್ರ ಕೈಕೊಟ್ಟ ಕಾರಣ ಮತಚಲಾಯಿಸಲಾಗಲಿಲ್ಲ ಎಂದು ತಿಳಿಸಿದ್ದಾರೆ. ಮತಯಂತ್ರ ಕಾರ್ಯನಿರ್ವಹಿಸದ ಕಾರಣ ಕೆಲ ಸಮಯ ಪ್ರಯತ್ನಿಸಿದೆ. ಆದರೆ ಮತಚಲಾಯಿಸಲು ಆಗದೇ ಹೋದ ಕಾರಣ ಬೆಳಗ್ಗೆ ಸಭೆಯ ನಂತರ ನನ್ನ ಕ್ಷೇತ್ರಕ್ಕೆ ಭೇಟಿ ನೀಡಿ ಮತಯಾಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ.
Advertisement
Advertisement
ಮಿಜೋರಾಂನಲ್ಲಿ 40 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ. ಈಶಾನ್ಯ ರಾಜ್ಯಾದ್ಯಂತ 1,276 ಮತಗಟ್ಟೆಗಳಲ್ಲಿ 8,00,000 ಕ್ಕೂ ಹೆಚ್ಚು ಅರ್ಹ ಮತದಾರರು ಇಂದು ಮತಚಲಾಯಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: ಚುನಾವಣೆ ದಿನವೇ ಮಾವೋವಾದಿಗಳಿಂದ ಸ್ಫೋಟ – ಕರ್ತವ್ಯದಲ್ಲಿದ್ದ ಯೋಧನಿಗೆ ಗಾಯ
Advertisement
Advertisement
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ರಾಜ್ಯದ ಜನರಲ್ಲಿ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಮಿಜೋರಾಂ, ಛತ್ತೀಸ್‌ಗಢದಲ್ಲಿ ಮೊದಲ ಹಂತದ ಮತದಾನ ಇಂದು