ಬೆಂಗಳೂರು: ಇಂದು ಮೊದಲ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ಐಟಿ ಉದ್ಯೋಗಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಕಾರಣವಿಲ್ಲದೆ ಟೆಕ್ಕಿಗಳನ್ನು ಕೆಲಸದಿಂದ ವಜಾ ಮಾಡುವುದು ಹಾಗೂ ಉದ್ಯೋಗದಲ್ಲಿ ಅಭದ್ರತೆ ವಿರೋಧಿಸಿ ಟೆಕ್ಕಿಗಳು ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಅಮೆರಿಕ ಹಾಗೂ ಬೇರೆ ದೇಶದಿಂದ ಬಂದ ಐಟಿ ಇಂಡಸ್ಟ್ರಿಗಳು ಚೆನ್ನಾಗಿ ದುಡ್ಡು ಮಾಡಿಕೊಡಂವು. ಈಗ ಟಾರ್ಗೆಟ್ ರೀಚ್ ಆಗಿಲ್ಲ ಅನ್ನುವ ಕಾರಣ ಮುಂದಿಟ್ಟು ಕೆಲಸದಿಂದ ವಜಾ ಮಾಡುತ್ತಿದ್ದಾರೆ ಅಂತಾ ಪ್ರತಿಭಟನಾಕಾರರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಕಾರ್ಮಿಕ ಸಚಿವ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆಗೆ ಮನವಿ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ವಿಪ್ರೋ, ಐಬಿಎಂ, ಇನ್ಫೋಸಿಸ್, ಟೆಕ್ ಮಹೀಂದ್ರ, ಎಲ್‍ಎನ್‍ಎಟಿ ಸೇರಿದಂತೆ ನಾನಾ ಐಟಿ ಇಂಡಸ್ಟ್ರಿಯ ಉದ್ಯೋಗಿಗಳು ಭಾಗಿಯಾಗಿದ್ದರು.
ಈಗಾಗಲೇ ಬೆಂಗಳೂರಿನಲ್ಲಿ ಸುಮಾರು ಇಪ್ಪತ್ತು ಸಾವಿರಕ್ಕಿಂತಲೂ ಅಧಿಕ ಐಟಿ ಉದ್ಯೋಗಿಗಳನ್ನು ಕೆಲ್ಸದಿಂದ ವಜಾ ಮಾಡಲಾಗಿದೆ.