ನವದೆಹಲಿ: ನೋಯ್ಡಾದ (Noida) ಸೆಕ್ಟರ್ 135ರ ಮೈದಾನದಲ್ಲಿ ಕ್ರಿಕೆಟ್ (Cricket) ಆಡುತ್ತಿದ್ದ ಸಂದರ್ಭ 36 ವರ್ಷದ ಟೆಕ್ಕಿ (Techie) ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದಾರೆ. ಘಟನೆ ಜನವರಿ 6ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರಾಖಂಡ (Uttarakhand) ಮೂಲದ ವ್ಯಕ್ತಿ ವಿಕಾಸ್ ನೋಯ್ಡಾದ ಖಾಸಗಿ ಸಂಸ್ಥೆಯೊಂದರಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ರೋಹಿಣಿಯಲ್ಲಿ ವಾಸಿಸುತ್ತಿದ್ದರು. ವಿಕಾಸ್ ಶನಿವಾರ ಮಧ್ಯಾಹ್ನ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಹೋಗಿದ್ದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ವಿಕಾಸ್ ರನ್ ಪಡೆಯುವ ಸಲುವಾಗಿ ಓಡುವ ವೇಳೆ ಪಿಚ್‌ನಲ್ಲಿ ಕುಸಿದು ಬೀಳುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ಇದನ್ನೂ ಓದಿ: ಮಗನ ಹತ್ಯೆ ಪ್ರಕರಣ- ಜೀವನಾಂಶವಾಗಿ ತಿಂಗಳಿಗೆ 2.5 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದ ಸುಚನಾ ಸೇಠ್
Advertisement
Advertisement
ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟು ಹೊತ್ತಿಗಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಕಾಸ್ ಮೃತದೇಹವನ್ನು ತಮ್ಮ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟರು. ಇದನ್ನೂ ಓದಿ: ಮಗುವಿಗೆ ಹೈಡೋಸ್ ಕೊಟ್ಟು, ಎಚ್ಚರ ತಪ್ಪಿಸಿ ಹತ್ಯೆ- ಸೇಠ್ ರೂಮಲ್ಲಿ ಕೆಮ್ಮಿನ ಔಷಧಿ ಬಾಟ್ಲಿ ಪತ್ತೆ
Advertisement
Advertisement
ಹೃದಯಾಘಾತವೇ ಟೆಕ್ಕಿ ಸಾವಿಗೆ ಕಾರಣ ಎಂದು ವೈದ್ಯರು ಮರಣೋತ್ತರ ವರದಿಯಲ್ಲಿ ಘೋಷಿಸಿದ್ದಾರೆ. ಪ್ರಾಥಮಿಕ ವರದಿಯ ಪ್ರಕಾರ ವಿಕಾಸ್ ಕೋವಿಡ್ ಸಂತ್ರಸ್ತರಾಗಿದ್ದರು. ಆದರೆ, ಆರೋಗ್ಯವಾಗಿದ್ದರು. ಫಿಟ್ ಆಗಲು ನೋಯ್ಡಾ ಮತ್ತು ದೆಹಲಿಯಲ್ಲಿ ಕ್ರಿಕೆಟ್ ಆಡುತ್ತಿದ್ದರು. ಆದರೆ, ಈಗ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇದನ್ನೂ ಓದಿ: ವಿಧಾನಸೌಧದ ಮುಂದೆ ಹೈಡ್ರಾಮ; ಸೀಮೆ ಎಣ್ಣೆ ಸುರಿದುಕೊಂಡು ಮುಸ್ಲಿಂ ಕುಟುಂಬ ಆತ್ಮಹತ್ಯೆಗೆ ಯತ್ನ