ಬೆಂಗಳೂರು: ಓಎಲ್‍ಎಕ್ಸ್ ನಲ್ಲಿ ರಾಯಲ್ ಎನ್‍ಫೀಲ್ಡ್ ಬೈಕ್ ಖರೀದಿಸಲು ಹೋಗಿ 26 ವರ್ಷದ ಟೆಕ್ಕಿಯೊಬ್ಬರು 1 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಓಡಿಶಾ ಮೂಲದ ಟೆಕ್ಕಿ ದಿನೇಶ್ ನಯ್ಯರ್ ಮೋಸ ಹೋಗಿದ್ದು, ಆರೋಪಿಯು ತಾನು ಭಾರತೀಯ ಸೇನೆಯವನು ಎಂದು ನಂಬಿಸಿದ್ದರಿಂದ ಸಂತ್ರಸ್ತ ವಾಹನ ಖರೀದಿಸಲು ಆಸಕ್ತಿ ತೋರಿದ್ದಾರೆ. ದಿನೇಶ್ ಅವರು ಓಎಲ್‍ಎಕ್ಸ್ ನಿಂದ ಆರೋಪಿಯ ಸಂಪರ್ಕ ಸಂಖ್ಯೆಯನ್ನು ಪಡೆಯುತ್ತಿದ್ದಂತೆ ಓಎಲ್‍ಎಕ್ಸ್ ಆತನ ಖಾತೆಯನ್ನು ಡಿಲೀಟ್ ಮಾಡಿದೆ. ಡಿಲೀಟ್ ಮಾಡಿರುವ ಕುರಿತು ಓಎಲ್‍ಎಕ್ಸ್ ಹಲವು ಬಾರಿ ಎಚ್ಚರಿಸಿದ್ದು, ಬೈಕ್ ಮಾರಾಟ ಮಾಡುವವನಿಗೆ ಮುಂಗಡ ಹಣ ಪಾವತಿಸದಂತೆ ತಿಳಿಸಿದೆ. ಆದರೂ ಲೆಕ್ಕಿಸದೆ ಟೆಕ್ಕಿ ವಾಹನ ಮಾಲೀಕನಿಗೆ ಹಣ ವರ್ಗಾಯಿಸಿದ್ದಾರೆ.
Advertisement
Advertisement
ನಾನು ಓಎಲ್‍ಎಕ್ಸ್ ಕಳುಹಿಸಿದ ಎಚ್ಚರಿಕೆ ಸಂದೇಶಗಳನ್ನು ನೋಡಲಿಲ್ಲ. ಹೀಗಾಗಿ ಆರೋಪಿಗೆ ಹಣ ವರ್ಗಾಯಿಸಿದೆ. ನಂತರ ರಾಯಲ್ ಎನ್‍ಫೀಲ್ಡ್ ಯಾವಾಗ ಸಿಗುತ್ತದೆ ಎಂದು ಸಂದೇಶ ಕಳುಹಿಸಿದೆ. ಆದರೆ ಆರೋಪಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದೀಗ ಓಎಲ್‍ಎಕ್ಸ್ ನಿಂದ ಅವನ ಖಾತೆಯನ್ನು ಡಿಲೀಟ್ ಮಾಡಲಾಗಿದೆ ಎಂದು ದಿನೇಶ್ ದೂರಿದ್ದಾರೆ.
Advertisement
ಆರೋಪಿಯು ಮರುದಿನ ಮಧ್ಯಾಹ್ನ 2 ಗಂಟೆ ಸುಮಾರಿಗೆ ನನಗೆ ಕರೆ ಮಾಡಿ, ನಾನು ಭಾರತೀಯ ಸೇನೆಯವನು, ದೊಮ್ಮಲೂರಿನಲ್ಲಿ ವಾಸವಿದ್ದೇನೆ ಎಂದು ಎಂದು ಪರಿಚಯ ಮಾಡಿಕೊಂಡಿದ್ದ. ಬಳಿಕ ನಾನು ವಾಹನ ಮಾರಾಟ ಮಾಡುವ ಕುರಿತ ಜಾಹೀರಾತನ್ನು ಏಕೆ ಡಿಲೀಟ್ ಮಾಡಿದಿರಿ ಎಂದು ಪ್ರಶ್ನಿಸಿದೆ. ಆಗ ಯಾರೋ ವಾಹನವನ್ನು ಕೊಳ್ಳಲು ಮುಂದಾಗಿದ್ದಾರೆ, ವ್ಯವಹಾರ ಮುಗಿದಿದೆ ಹೀಗಾಗಿ ತೆಗೆದಿದ್ದೇನೆ. ಆದರೆ ನಾನು ಅವರಿಗೆ ವಾಹನ ಮಾರುವುದಿಲ್ಲ. 65 ಸಾವಿರ ರೂ.ಗೆ ನಿಮಗೇ ಕೊಡುತ್ತೇನೆ ನನಗೆ ಮುಂಗಡ ಹಣ ಕೊಡುವಂತೆ ಕೇಳಿದ ಎಂದು ದಿನೇಶ್ ಮಾಹಿತಿ ನೀಡಿದ್ದಾರೆ.
Advertisement
ನಾನು 37 ಸಾವಿರ ರೂ. ಮುಂಗಡ ಹಣವನ್ನು ನೀಡಿದೆ. ಆರೋಪಿ ಒತ್ತಾಯಿಸಿದ್ದರಿಂದ ಎರಡನೇ ಬಾರಿ ಪೂರ್ತಿ ಹಣವನ್ನು ಆನ್‍ಲೈನ್ ಮೂಲಕ ಪಾವತಿಸಿದೆ. ಆದರೆ ಸೇನೆಯಿಂದ ನೋ ಅಬ್ಜಕ್ಷನ್ ಸರ್ಟಿಫಿಕೇಟ್ ಪಡೆಯಬೇಕು ಇನ್ನೂ ಹೆಚ್ಚು ಹಣ ಕಳುಹಿಸುವಂತೆ ಆರೋಪಿ ಒತ್ತಾಯಿಸಿದ. ಹೆಚ್ಚುವರಿ ಹಣವನ್ನು ಮರಳಿ ನೀಡುತ್ತೇನೆ ಎಂದು ಹೇಳಿದ. ಹೀಗಾಗಿ ನಾನು ಒಟ್ಟು 1 ಲಕ್ಷ ರೂ. ಪಾವತಿಸಿ, ನಂತರ ವಾಹನವನ್ನು ಕೇಳಲು ಕರೆ ಮಾಡಿದೆ. ಆಗ ಆರೋಪಿ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ವಿವರಿಸಿದ್ದಾರೆ.