– ಪಿಜಿ, ಅಪಾರ್ಟ್ ಮೆಂಟುಗಳೇ ಇವರ ಟಾರ್ಗೆಟ್
ಬೆಂಗಳೂರು: ಎನ್‍ಜಿಒ ಹೆಸರು ಹೇಳಿಕೊಂಡು ಅಪಾರ್ಟ್‍ಮೆಂಟ್ಸ್, ಪಿಜಿಗಳನ್ನು ಟಾರ್ಗೆಟ್ ಮಾಡಿಕೊಂಡು ದೇಣಿಗೆ ಹೆಸರಿನಲ್ಲಿ ಕಳ್ಳತನ ಮಾಡುವ ಗ್ಯಾಂಗ್ ನಗರದಲ್ಲಿ ಹುಟ್ಟಿಕೊಂಡಿದೆ. ಪ್ರಮುಖವಾಗಿ ಮಹಿಳೆಯರೇ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿರುವುದು ಆತಂಕಕಾರಿಯಾಗಿದೆ.
ದೇಣಿಗೆ ಸಂಗ್ರಹಿಸುವ ನೆಪದಲ್ಲಿ ಮಾರ್ಚ್ 13 ರಂದು ಎಚ್‍ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುತಿನಗರದ ಕೋಲಿವ್ ಅಟಾಟ್ಲ ಪಿಜಿಗೆ ಕಳ್ಳಿಯೊಬ್ಬಳು ಎಂಟ್ರಿ ಕೊಟ್ಟಿದ್ದಾಳೆ. ಕೈಯಲ್ಲಿ ಒಂದು ಪುಸ್ತಕ ಹಿಡಿದುಕೊಂಡು ಸಾಮಾನ್ಯ ಧಿರಿಸಿನಲ್ಲಿ ಬರುವ ಮಹಿಳೆಯ ಪಿಜಿ ಪ್ರವೇಶಿಸಿ ಎನ್‍ಜಿಓದಿಂದ ಬಂದಿರುವೆ, ಬಡ ಮಕ್ಕಳ ಸಹಾಯಕ್ಕಾಗಿ ಏನಾದರೂ ಸಹಾಯ ಮಾಡಿ ಎಂದು ಹೇಳಿದ್ದಾಳೆ.
Advertisement
Advertisement
ಇದಾದ ನಂತರ ಪಿಜಿಯ ನಾಲ್ಕನೇ ಮಹಡಿಗೆ ಹೋಗಿ ರೂಂ ಕದ ತಟ್ಟಿದ್ದಾಳೆ. ಬಾಗಿಲು ಒಳಗಿನಿಂದ ಲಾಕ್ ಆಗಿರದ ಕಾರಣ ಡೋರ್ ತೆಗೆದು ಒಳಪ್ರವೇಶಿಸಿದ್ದಾಳೆ. ಕೊಠಡಿಯಲ್ಲಿ ವಾಸವಾಗಿದ್ದ ಸಾಫ್ಟ್‍ವೇರ್ ಇಂಜಿನಿಯರ್ ರಾಘವ್ ಎಂ.ನಾಯರ್ ರೂಮಿನಲ್ಲಿ ಇಲ್ಲದಿರುವುದನ್ನು ಕಂಡು ರೂಂ ಹಾಲ್ ನ ಟೇಬಲ್ ಮೇಲೆ ಇಟ್ಟಿದ್ದ ದುಬಾರಿ ಮೌಲ್ಯದ ಲ್ಯಾಪ್ ಟಾಪ್ ಕಳ್ಳತನ ಮಾಡಿ, ವೇಲ್ ನಲ್ಲಿ ಲ್ಯಾಪ್ ಟಾಪ್ ಬಚ್ಚಿಟ್ಟುಕೊಂಡು ಕಾಲ್ಕಿತ್ತಿದ್ದಾಳೆ.
Advertisement
Advertisement
ಕೆಲಸ ನಿಮಿತ್ತ ಹೊರಹೋಗಿದ್ದ ಟೆಕ್ಕಿ ರೂಮಿಗೆ ಬಂದು ನೋಡಿದಾಗ ಲ್ಯಾಪ್ ಟಾಪ್ ಸಿಗದಿರುವುದನ್ನು ಕಂಡು ಆತಂಕ ವ್ಯಕ್ತಪಡಿಸಿದ್ದಾರೆ. ಕೂಡಲೇ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಕಳ್ಳಿಯ ಕೈಚಳಕ ಸೆರೆಯಾಗಿದೆ. ಇದೇ ರೀತಿ ಸುತ್ತಲಿನ ಏರಿಯಾಗಳಲ್ಲಿ ಎನ್‍ಜಿಓ ಸೋಗಿನಲ್ಲಿ ಮಹಿಳೆಯರು ಬಂದು ಹೋಗಿರುವುದು ಗೊತ್ತಾಗಿದೆ. ಕೃತ್ಯ ಸಂಬಂಧ ರಾಘವ್ ಎಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.