– ಮೊಬೈಲ್ ನಂಬರ್ ಕೊಟ್ಟಿದ್ದೇ ತಪ್ಪಾಯ್ತು
ಮುಂಬೈ: ಆನ್‍ಲೈನ್ ಶಾಪಿಂಗ್ ವೆಬ್‍ಸೈಟ್‍ನಿಂದ 388 ರೂಪಾಯಿಯ ನೈಲ್ ಪಾಲಿಶ್ ಆರ್ಡರ್ ಮಾಡಿದ ಸಾಫ್ಟ್‌ವೇರ್ ಎಂಜಿನಿಯರ್ ಸುಮಾರು 92,446 ರೂ.ಗಳನ್ನು ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಕಳೆದ ವರ್ಷ ಡಿಸೆಂಬರಿನಲ್ಲಿ ನಡೆದಿದೆ. ಶನಿವಾರ ಸಂತ್ರಸ್ತೆ ವಕಾಡ್ ಪೊಲೀಸ್ ಠಾಣೆಯಲ್ಲಿ ವಂಚಕರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಈ ಕುರಿತು ಇಬ್ಬರ ವಿರುದ್ಧ ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ ಮತ್ತು ಐಪಿಸಿ ಸೆಕ್ಸನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಡಿಸೆಂಬರ್ 17 ರಂದು ಟೆಕ್ಕಿ ತನ್ನ ಮೊಬೈಲ್ ಮೂಲಕ ಆನ್‍ಲೈನ್ ಶಾಪಿಂಗ್ ವೆಬ್‍ಸೈಟ್‍ನಲ್ಲಿ ನೈಲ್ ಪಾಲಿಶ್ ಆರ್ಡರ್ ಮಾಡಿದ್ದಾರೆ. ಅದಕ್ಕಾಗಿ ಟೆಕ್ಕಿ ತನ್ನ ಬ್ಯಾಂಕ್ ಖಾತೆಯಿಂದ 388 ರೂ. ಮೊತ್ತವನ್ನು ಖಾಸಗಿ ಬ್ಯಾಂಕ್ ಖಾತೆಗೆ ಕಳುಹಿಸಿದ್ದಾರೆ. ಆದರೆ ನೈಲ್ ಪಾಲಿಶ್ ನಿಗದಿ ಪಡಿಸಿದ್ದ ದಿನದಂದು ಬಂದಿರಲಿಲ್ಲ. ಹೀಗಾಗಿ ಡೆಲಿವರಿ ನಿಧಾನವಾದ ಬಗ್ಗೆ ವಿಚಾರಿಸಲು ಟೆಕ್ಕಿ ಶಾಪಿಂಗ್ ವೆಬ್‍ಸೈಟ್‍ನ ಕಸ್ಟಮರ್ ಕೇರಿಗೆ ಫೋನ್ ಮಾಡಿದ್ದಾರೆ.
Advertisement
Advertisement
ಈ ವೇಳೆ ಕಸ್ಟಮರ್ ಕೇರಿನ ಕಾರ್ಯನಿರ್ವಾಹಕರಾಗಿ ಮಾತನಾಡಿದ ವ್ಯಕ್ತಿ, ನಮಗೆ ಯಾವುದೇ ಹಣ ಪಾವತಿಯಾಗಿಲ್ಲ. ಒಂದು ವೇಳೆ ನೀವು ಹಣ ಪಾವತಿಸಿದ್ದರೆ ಅದನ್ನು ಹಿಂದಿರುಗಿಸುತ್ತೇನೆ ಎಂದು ಹೇಳಿ ಆಕೆಯ ಮೊಬೈಲ್ ನಂಬರ್ ಕೇಳಿದ್ದಾನೆ. ಇದನ್ನು ನಂಬಿದ ಟೆಕ್ಕಿ ಆತನಿಗೆ ತಮ್ಮ ಮೊಬೈಲ್ ನಂಬರ್ ಕೊಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮೊಬೈಲ್ ನಂಬರ್ ಕೊಟ್ಟ ಕೆಲವು ನಿಮಿಷಗಳಲ್ಲಿ ಟೆಕ್ಕಿಯ ಎರಡೂ ಬ್ಯಾಂಕ್ ಖಾತೆಗಳಿಂದ ಐದು ವಹಿವಾಟುಗಳು ನಡೆದಿದ್ದವು. ಒಟ್ಟು 90,946 ರೂ. ನಂತರ ಅವರ ಸಾರ್ವಜನಿಕ ವಲಯದ ಬ್ಯಾಂಕ್ ಖಾತೆಯಿಂದ 1,500 ರೂ ಹಣ ಕಟ್ ಆಗಿತ್ತು. ಹೀಗಾಗಿ ಟೆಕ್ಕಿ ಖಾತೆಯಿಂದ ಒಟ್ಟಾಗಿ 92,446 ರೂ.ಗಳನ್ನು ಕಟ್ ಆಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟೆಕ್ಕಿ ತನ್ನ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಯಾರಿಗೂ ತಿಳಿಸಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈ ಕುರಿತು ತನಿಖೆ ಮುಂದುವರಿಸಿದ್ದಾರೆ.