ಹೈದರಾಬಾದ್: ಆರ್ಥಿಕ ಸಮಸ್ಯೆಯಿಂದಾಗಿ ಮಹಿಳೆಯೊಬ್ಬರು ಇಬ್ಬರು ಮಕ್ಕಳನ್ನು ಕೊಂದು ತಾವು ನೇಣು ಬೀಗಿದುಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಸ್ವಾತಿ ಕುಸುಮಾ (32) ಮೃತ ಮಹಿಳೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ಸ್ವಾತಿ ಕುಸುಮಾ ಹಾಗೂ ಅವರ ಪತಿ ಸಾಯಿಕುಮಾರ್ ಉದ್ಯೋಗವನ್ನು ಕಳೆದುಕೊಂಡಿದ್ದರು. ಇದರಿಂದಾಗಿ ಹಣದ ಸಮಸ್ಯೆ ಉಂಟಾಗಿತ್ತು.
ಆಕೆಯ ಪತಿ ಆರ್ಥಿಕ ಸಮಸ್ಯೆಯಿಂದಾಗಿ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಆದರೂ ತನ್ನ ಪತಿ ಕುಟುಂಬವನ್ನು ಪೋಷಿಸಲು ಸಾಕಾಗುವಷ್ಟು ದುಡಿಯುತ್ತಿಲ್ಲ ಎಂದು ಬೇಸರದಿಂದ ಮನನೊಂದಿದ್ದರು. ಇದನ್ನೂ ಓದಿ: ತೊಟ್ಟಿಲಲ್ಲಿ ಮಲಗಿದ್ದ ತಂಗಿಗೆ ಬಿಸಿಯಾದ ಫೋರ್ಕ್‍ನಿಂದ ಬರೆ ಹಾಕಿದ ಅಕ್ಕ
ಸ್ವಾತಿ ಅವರಿಗೆ ಅನೈತಿಕ ಸಂಬಂಧವಿದೆ ಎಂದು ಅನುಮಾನಿಸಿ ದಂಪತಿ ಆಗಾಗೆ ಜಗಳವಾಡುತ್ತಿದ್ದರು. ಈ ಜಗಳ ಅತಿಯಾಗಿ ಸಾಯಿಕುಮಾರ್ ಮನೆ ಬಿಟ್ಟು ಹೋಗಿದ್ದರು. ಇದರಿಂದಾಗಿ ಮನನೊಂದ ಸ್ವಾತಿ ಮಲಗುವ ಕೋಣೆಯ ಗೋಡೆಯ ಮೇಲೆ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದನ್ನೂ ಓದಿ: ಆಮ್ಲೆಟ್ ಸೀದು ಹೋಗಿದೆ ಎಂದಿದ್ದಕೆ ಬಿಸಿ ಬಾಣಲೆಯಿಂದ ಹೊಡೆದ ಹೋಟೆಲ್ ಮಾಲೀಕ
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ವಾತಿ ಕುಸುಮಾ ಅವರ ಪತಿ ಸಾಯಿಕುಮಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ.