ಬೆಂಗಳೂರು: ಮನೆ ಕಟ್ಟಿ, ಗೃಹ ಪ್ರವೇಶ ಮಾಡಬೇಕೆಂದು ನೂರಾರು ಕನಸು ಕಟ್ಟಿಕೊಂಡಿದ್ದ ಟೆಕ್ಕಿ, ಅದೇ ಕಟ್ಟಡದಲ್ಲಿ ನೇಣಿಗೆ ಕೊರಳೊಡ್ಡಿರುವ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ (Bengaluru Whitefield) ನಡೆದಿದೆ. ಮುರಳಿ ಆತ್ಮಹತ್ಯೆ ಶರಣಾದ ಟೆಕ್ಕಿ.
ಉಷಾ ನಂಬಿಯಾರ್ ಎಂಬುವವರಿಂದ ಮುರಳಿ ಜಾಗ ಖರೀದಿ ಮಾಡಿ, ಮನೆ ಕಟ್ಟಿಸುತ್ತಿದ್ದರು. ನಿಯಮ ಮೀರಿ ಹೆಚ್ಚುವರಿಯಾಗಿ ಕಟ್ಟಡ ಕಟ್ಡಿರುವ ಬಗ್ಗೆ ಉಷಾ ನಂಬಿಯಾರ್ ದೂರು ನೀಡಿದ್ದರಿಂದ ಜಿಬಿಎ ನೋಟಿಸ್ ನೀಡಿತ್ತು. ಅಲ್ಲದೇ, ಜಿಬಿಎ (GBA) ಅಧಿಕಾರಿಗಳ ಒಟ್ಟಿಗೆ ಶಾಮೀಲ್ ಆಗಿ 20 ಲಕ್ಷ ಹಣಕ್ಕೆ ಡಿಮಾಂಡ್ ಮಾಡುತ್ತಿದ್ದರು. ಇದನ್ನೂ ಓದಿ: ಯೆಲ್ಲೋ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಬೆಂಗಳೂರಿಗೆ ಬಂತು 6ನೇ ಡ್ರೈವರ್‌ಲೆಸ್ ರೈಲು
ಇಂದು ಹಣ ಕೊಡಲೇಬೇಕೆಂದು ಬೆದರಿಸಿದ್ದರಂತೆ. ಕಿರುಕುಳದಿಂದ ಬೇಸತ್ತಿದ್ದ ಮುರಳಿ ನಿರ್ಮಾಣ ಹಂತದ ಕಟ್ಟದ 2ನೇ ಫ್ಲೋರ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಉಷಾ ನಂಬಿಯಾರ್ ಸಾವಿಗೆ ಕಾರಣ ಅಂತ ಡೆತ್‌ನೋಟ್ ಬರೆದಿಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಇಂದು ಕೂಡ 60ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಉಷಾ ನಂಬಿಯಾರ್ ಸೇರಿ ಇಬ್ಬರ ವಿರುದ್ಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸದ್ಯ ಉಷಾ ವಶಕ್ಕೆ ಪಡೆದಿರೋ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ವಿಜಯಪುರ ರೈಲು ಸಂಚಾರಕ್ಕೆ ಅಸ್ತು; 3-4 ತಿಂಗಳಲ್ಲಿ ಹೊಸ ರೈಲು ಸೇವೆಗೆ ಪ್ರಯತ್ನ: ಎಂ.ಬಿ.ಪಾಟೀಲ್


