ಮಹಾರಾಷ್ಟ್ರದ ಇಂದ್ರಯಾಣಿ ನದಿ ಸೇತುವೆ ಕುಸಿತ – ಕರ್ನಾಟಕದ ಟೆಕ್ಕಿ ಸಾವು

Public TV
1 Min Read
Indrayani River Bridge Collapse Techie Died

ಚಿಕ್ಕೋಡಿ: ಮಹಾರಾಷ್ಟ್ರದ (Maharashtra) ಪುಣೆಯ ಇಂದ್ರಯಾಣಿ ನದಿಯ (Indrayani River) ಸೇತುವೆ ಕುಸಿದು ದುರಂತದಲ್ಲಿ ವೀಕೆಂಡ್ ಮಸ್ತಿಗಾಗಿ ಹೋಗಿದ್ದ ಕರ್ನಾಟಕ (Karntaka) ಮೂಲದ ಟೆಕ್ಕಿ (Techie)  ಸಾವನ್ನಪ್ಪಿದ್ದಾರೆ.

ಬೆಳಗಾವಿ (Belagavi) ಜಿಲ್ಲೆಯ ರಾಯಭಾಗ ತಾಲೂಕಿನ ನಸಲಾಪುರ ಗ್ರಾಮದ ಚೇತನ್ ಚಾವರೇ (22) ಸೇತುವೆ ದುರಂತದಲ್ಲಿ ಮೃತಪಟ್ಟ ಟೆಕ್ಕಿ.  ಇದನ್ನೂ ಓದಿ: ರ‍್ಯಾಪಿಡೊ ಚಾಲಕನಿಂದ ಹಲ್ಲೆ – ಒಂದೇ ಏಟಿಗೆ ಕೆಳಗೆ ಬಿದ್ದ ಯುವತಿ, ಸ್ಥಳೀಯರಿಂದ ರಕ್ಷಣೆ

ಪುಣೆಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ಚಾವರೇ ಅವರು ಸ್ನೇಹಿತರ ಜೊತೆಗೆ ಭಾನುವಾರ ಬೆಳಗ್ಗೆ ಇಂದ್ರಯಾಣಿ ನದಿ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ಸೇತುವೆ ಕುಸಿದು ಚೇತನ್ ಕೊಚ್ಚಿ ಹೋಗಿದ್ದರು. ಭಾನುವಾರವೇ ಚೇತನ್ ಶವ ಪತ್ತೆಯಾಗಿತ್ತು. ಇದನ್ನೂ ಓದಿ: ಕಲಬುರಗಿ | ಹೃದಯಾಘಾತದಿಂದ ಹಿರಿಯ ನ್ಯಾಯಾಧೀಶ ಸಾವು

ಈಗಾಗಲೇ ಆರು ಜನರ ಶವ ಪತ್ತೆಯಾಗಿದ್ದು, ಮೃತದೇಹಗಳನ್ನು ಮಹಾರಾಷ್ಟ್ರ ಸರ್ಕಾರ ಮೃತರ ಕುಟುಂಬಕ್ಕೆ ಹಸ್ತಾಂತರ ಮಾಡಿದೆ. ಚೇತನ್ ಕುಟುಂಬಸ್ಥರು ಇಂದು ಬೆಳಗ್ಗೆ ನಸಲಾಪುರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಿದರು. ಈ ದುರ್ಘಟನೆಯಲ್ಲಿ 25ಕ್ಕೂ ಅಧಿಕ ಜನರು ಕೊಚ್ಚಿ ಹೋಗಿರುವ ಮಾಹಿತಿ ಲಭ್ಯವಾಗಿದ್ದು, ಇನ್ನುಳಿದ ಮೃತದೇಹಗಳಿಗೆ ಶೋಧ ಕಾರ್ಯ ಮುಂದುವರೆದಿದೆ.

Share This Article