ಕಲಬುರಗಿ: ಶ್ರೀಲಂಕಾ (Sri Lanka) ಪ್ರವಾಸಕ್ಕೆ ತೆರಳಿದ್ದ ಜೇವರ್ಗಿ ಮೂಲದ ಟೆಕ್ಕಿ (Techie) ಹೋಟೆಲ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ (Swimming Pool) ಈಜಾಡುವಾಗ ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾನೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಲ್ಲೂರ್‌ಕೆ ಗ್ರಾಮದ ಸಂತೋಷ್ ಮಲ್ಲೆದ್ (34) ಮೃತ ಟೆಕ್ಕಿ. ಇದನ್ನೂ ಓದಿ: ಗಿಲ್ ಶತಕದಾಟ, ಶಮಿ ಬೆಂಕಿ ಬೌಲಿಂಗ್ – ಬಾಂಗ್ಲಾ ವಿರುದ್ಧ ಭಾರತಕ್ಕೆ 6 ವಿಕೆಟ್‌ಗಳ ಜಯ
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಸಂತೋಷ್, ಫೆ.15 ರಂದು ಸ್ನೇಹಿತರೊಂದಿಗೆ ಶ್ರೀಲಂಕಾದ ಕ್ಯಾಂಡಿಗೆ ಪ್ರವಾಸ ಕೈಗೊಂಡಿದ್ದರು. ಹೋಟೆಲ್‌ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡುತ್ತಿದ್ದಾಗ ತಲೆಗೆ ಪೆಟ್ಟು ಬಿದ್ದು ಸಂತೋಷ್ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಬ್ಯಾಂಕ್ ಹಗರಣ – ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ ಬಿಗ್ ರಿಲೀಫ್!
ಟೆಕ್ಕಿ ಸಂತೋಷ್ ಮೃತದೇಹ ಶುಕ್ರವಾರ ಹೈದರಾಬಾದ್ ಮೂಲಕ ಕಲಬುರಗಿಗೆ ಆಗಮಿಸಲಿದೆ. ಇದನ್ನೂ ಓದಿ: ತುಂಬಾ ಅನ್ಯಾಯ: ಭಾರತದಲ್ಲಿ ಟೆಸ್ಲಾ ಘಟಕ ಸ್ಥಾಪನೆಗೆ ಟ್ರಂಪ್ ಅಪಸ್ವರ