– ಮನೆ ಬಿಟ್ಟ 7 ವರ್ಷದ ಬಳಿಕ ಲಾಕ್
ಬೆಂಗಳೂರು: ಪತ್ನಿ ಕಾಟ ತಾಳಲಾರದೇ ಮನೆ ಬಿಟ್ಟು ಹೋಗಿದ್ದ ಟೆಕ್ಕಿಯೊಬ್ಬ ಬರೋಬ್ಬರಿ ಏಳು ವರ್ಷದ ಬಳಿಕ ಪತ್ತೆಯಾಗಿದ್ದಾನೆ.
ಟೆಕ್ಕಿಯನ್ನು ಕೋಟೆಪ್ಪ ಎಂದು ಗುರುತಿಸಲಾಗಿದೆ. ಇವರು ಇದ್ದಕ್ಕಿದ್ದಂತೆ ಮನೆಯಿಂದ ನಾಪತ್ತೆ ಆಗಿದ್ದನ್ನು ಕಂಡು ಪತ್ನಿ ಸವಿತಾ 2015 ರಲ್ಲಿ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಟೆಕ್ಕಿಗಾಗಿ ರಾಜ್ಯ ಹೊರ ರಾಜ್ಯದೆಲ್ಲೆಡೆ ಹುಡುಕಾಟ ನಡೆಸಿದ್ದರೂ ಪೊಲೀಸರಿಗೆ ನಾಪತ್ತೆಯಾಗಿದ್ದ ಟೆಕ್ಕಿ ಸಿಕ್ಕಿರಲಿಲ್ಲ. ಟೆಕ್ಕಿ ಸಿಗದೆ ಸಿ ರಿಪೋರ್ಟ್ ಹಾಕಲು ಮುಂದಾಗಿದ್ದ ಪೊಲೀಸರಿಗೆ ಬ್ಯಾಂಕ್ ಮೆಸೇಜ್ ಟೆಕ್ಕಿ ಕೋಟೆಪ್ಪ ಬಗ್ಗೆ ಮಾಹಿತಿ ನೀಡಿತ್ತು.
Advertisement
Advertisement
ಟೆಕ್ಕಿ ಕೋಟೆಪ್ಪ ಬಿಹಾರ, ರಾಜಸ್ಥಾ, ಯುಪಿ ಸುತ್ತಾಡಿ ಕೊನೆಗೆ ದಾವಣಗೆರೆಗೆ ಬಂದಿರುವುದು ತಿಳಿದುಬಂತು. ಪೊಲೀಸರು ಹುಡುಕುತ್ತಿಲ್ಲ ಅಂತ ಅರಿತು ಬ್ಯಾಂಕಿಗೆ ಎಫ್‍ಡಿ ಮಾಡಲು ಹೋಗಿದ್ದರು. ಫೆ.16ರಂದು 10ಸಾವಿರ ಹಣ ಎಫ್‍ಡಿ ಮಾಡಿದಾಗ ದಿಢೀರನೆ ಹಣ ವರ್ಗಾವಣೆ ಮೆಸೇಜ್ ಪತ್ನಿಗೆ ಬಂದಿತ್ತು. 10 ವರ್ಷದ ಹಿಂದೆ ಬ್ಯಾಂಕ್ ಅಕೌಂಟ್ ಮಾಡಿಸಿದಾಗ ಕೋಟೆಪ್ಪ ಅವರು ಪತ್ನಿ ಮೊಬೈಲ್ ನಂಬರ್ ನೀಡಿದ್ದರು. ಕಳೆದ ತಿಂಗಳು 16ರಂದು ಮೆಸೇಜ್ ಬರುತ್ತಿದ್ದಂತೆಯೇ ಪತ್ನಿ ಸವಿತಾ ಪೊಲೀಸರಿಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಬೆಂಗ್ಳೂರಲ್ಲಿ ಸರ್ಕಾರಿ ಶಾಲೆಗಳೀಗ ಕಲರ್‌ಫುಲ್ – ಗೋಡೆಗಳಲ್ಲಿ ರಾರಾಜಿಸಿದ ಏರ್ ಇಂಡಿಯಾ
Advertisement
Advertisement
ಮೆಸೇಜ್ ಜಾಡು ಹಿಡಿದು ಹೋದಾಗ ಅದು ಹರಿಹರ ಹೆಚ್‍ಡಿಎಫ್‍ಸಿ ಬ್ಯಾಂಕ್ ತೋರಿಸಿತ್ತು.ಬ್ಯಾಂಕಲ್ಲಿ ವಿಚಾರಣೆ ಮಾಡಿದಾಗ ಕೋಟೆಪ್ಪ ಬಂದು ಹಣ ಎಫ್‍ಡಿ ಮಾಡಿರೋದು ಗೊತ್ತಾಗಿದೆ. ಮತ್ತೆ ಬ್ಯಾಂಕಿಗೆ ಬಂದರೆ ಮಾಹಿತಿ ನೀಡುವಂತೆ ಆಡುಗೋಡಿ ಪೊಲೀಸರು ಹೇಳಿದ್ದರು. ವಾರದ ಹಿಂದೆ ಕೋಟೆಪ್ಪ ಮತ್ತೆ ಬ್ಯಾಂಕ್‍ಗೆ ಬಂದಿದ್ದರು. ಈ ವೇಳೆ ಪೊಲೀಸರು ಕೋಟೆಪ್ಪನ ಹಿಡಿದಿದ್ದಾರೆ. ಇದನ್ನೂ ಓದಿ: ಮದ್ವೆಯಾಗಿ ದೇವಸ್ಥಾನದಿಂದ ನೇರ ಎಸ್ಪಿ ಕಚೇರಿಗೆ ಬಂದ ನವ ದಂಪತಿ
ಟೆಕ್ಕಿಗೆ ಸ್ಥಳೀಯ ಠಾಣೆಗೆ ಕರೆದೊಯ್ದ ವಿಚಾರಣೆ ಮಾಡಿದಾಗ, ಪತ್ನಿ ಕಾಟಕ್ಕೆ ಮನೆ ಬಿಟ್ಟು ಹೋಗಿದ್ದಾಗಿ ಹೇಳಿರುವುದಾಗಿ ತಿಳಿದುಬಂದಿದೆ. ಟೆಕ್ಕಿ ಕೋಟೆಪ್ಪ 2012ರಲ್ಲಿ ಸವಿತಾರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಇವರ ದಾಂಪತ್ಯ ಮೂರು ವರ್ಷಕ್ಕೆ ಮುರಿದು ಬಿದ್ದಿತ್ತು. ಟೆಕ್ಕಿ ದಂಪತಿ ಬನ್ನೇರುಘಟ್ಟ ರಸ್ತೆಯ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು.