ಬೆಂಗಳೂರು: ಕೌಟುಂಬಿಕ ಕಲಹ (Family Feud) ಹಿನ್ನೆಲೆ ಟೆಕ್ಕಿ ದಂಪತಿ (Techie Couple) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊತ್ತನೂರು (Kothanur) ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಅಪಾರ್ಟ್‌ಮೆಂಟ್‌ನ ನಡೆದಿದೆ.
ಭಾನು ಚಂದ್ರ ರೆಡ್ಡಿ ಹಾಗೂ ಸಾಜಿಯಾ ಆತ್ಮಹತ್ಯೆ ಮಾಡಿಕೊಂಡ ದಂಪತಿ. ಮೊದಲಿಗೆ ಪತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡನ ಮೃತದೇಹ ಕಂಡು ಪತ್ನಿ ಸಹ ಅಪಾರ್ಟ್‌ಮೆಂಟ್‌ನ 17ನೇ ಫ್ಲೋರ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಹಳ್ಳಿಗಳಿಗೂ ಗ್ಯಾಸ್ ತಂದ್ರು, ಈಗ ಸಿಟಿಗಳಲ್ಲಿ ಸೌದೆ ಎಲ್ಲಿಂದ ತರೋದು: ಕೇಂದ್ರಕ್ಕೆ ಡಿಕೆಶಿ ಪ್ರಶ್ನೆ
ಗಂಡ – ಹೆಂಡತಿ ಇಬ್ಬರೂ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದರು. ಇಬ್ಬರ ನಡುವೆ ಅನೇಕ ಬಾರಿ ಕಲಹಗಳಾಗಿದೆ. ಇಬ್ಬರೂ ಮಾನಸಿಕ ಒತ್ತಡ ಮತ್ತು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಸೋಮವಾರ ಸಹ ಇಬ್ಬರ ನಡುವೆ ಜಗಳ ಆಗಿದೆ. ಬಳಿಕ ಪತ್ನಿ ಇಲ್ಲದಿರುವಾಗ ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಜಿಯಾ ಮನೆಗೆ ಬಂದು ಗಂಡನ ಹೆಣ ನೋಡಿ ಆಕೆಯೂ ಸಹ ಅಪಾರ್ಟ್‌ಮೆಂಟ್‌ನ ಮೇಲಿನಿಂದ ಹಾರಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬಗ್ಗೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಜೈಲಲ್ಲಿದ್ದ ಪತಿಗೆ ಗಾಂಜಾ, ಬೀಡಿ, ಸಿಮ್ ಸಾಗಿಸಲು ಯತ್ನ – ಗುಪ್ತಾಂಗದಲ್ಲಿ ಬಚ್ಚಿಟ್ಟು ತಂದಿದ್ದ ಮಹಿಳೆ ಅರೆಸ್ಟ್

