ಬೆಂಗಳೂರು: ಎಣ್ಣೆ ಪಾರ್ಟಿ ವೇಳೆ ಗಲಾಟೆ ನಡೆದು ಸಿಮೆಂಟ್ ಇಟ್ಟಿಗೆಯಿಂದ (Cement Brick) ತಲೆಗೆ ಹೊಡೆದು ಟೆಕ್ಕಿಯನ್ನು (Techie) ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಡಿವಾಳದ (Madiwala) ವೆಂಕಟೇಶ್ವರ ಲೇಔಟ್‌ನಲ್ಲಿ ನಡೆದಿದೆ.
ಮಾರ್ಟಿನ್ ಸೈಮನ್ (29) ಕೊಲೆಯಾದ ಟೆಕ್ಕಿ. ಇನ್ಪೆಂಟ್ ರಾಜ್ ಎಂಬಾತ ಕೃತ್ಯ ಎಸಗಿಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ಮಾರ್ಟಿನ್ ಸೈಮನ್ ಹಾಗೂ ಶಂಕಿತ ಆರೋಪಿ ಇನ್ಪೆಂಟ್ ರಾಜ್ ಒಂದೇ ಬಿಲ್ಡಿಂಗ್‌ನಲ್ಲಿ ಬಾಡಿಗೆಗೆ ವಾಸವಾಗಿದ್ದರು. ಇದನ್ನೂ ಓದಿ: ಭಾರತ-ಪಾಕ್ ಸಂಘರ್ಷ ತ್ವರಿತ ಶಮನಕ್ಕೆ ಟ್ರಂಪ್ ಒತ್ತಾಯ
ಇಂದು ಸಂಜೆ ಬಿಲ್ಡಿಂಗ್ ಟೆರೆಸ್ ಮೇಲೆ ಇಬ್ಬರೂ ಪಾರ್ಟಿ ಮಾಡುತ್ತಿದ್ದರು. ರಾತ್ರಿ ಹತ್ತು ಗಂಟೆ ವೇಳೆ ಇಬ್ಬರ ನಡುವೆ ಜಗಳ ನಡೆದಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಸಿಮೆಂಟ್ ಇಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಾಗರಿಕ ವಿಮಾನಗಳನ್ನು ಬಳಸಿಕೊಂಡು ಪಾಕ್ ಡ್ರೋನ್ ದಾಳಿ