ಬೆಂಗಳೂರು: ಐಪಿಎಲ್ (IPL 2025) ಟಿಕೆಟ್ ಮಾರಾಟ ಮಾಡುತ್ತಿದ್ದ ಟೆಕ್ಕಿಯೊಬ್ಬನನ್ನು (Techie) ಬಂಧಿಸಲಾಗಿದೆ.
ತೆಲಂಗಾಣ ಮೂಲದ ಸೋಮರಾಪು ವಂಶಿ (22) ಬಂಧಿತ ಆರೋಪಿ. ಈತ ಮೇ 17 ರ ಆರ್‌ಸಿಬಿ ವರ್ಸಸ್ ಕೆಕೆಆರ್ ಪಂದ್ಯದ ವೇಳೆ 1,200 ರೂ. ಬೆಲೆಯ ಟಿಕೆಟ್‌ನ್ನು 6000 ರೂ. ಮಾರಾಟ ಮಾಡುತ್ತಿದ್ದ. ಈತನನ್ನು ಸಿಸಿಬಿ ವಿಶೇಷ ವಿಚಾರಣಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಇದನ್ನೂ ಓದಿ: ಟಾಸ್ ಗೆದ್ದು ಫೀಲ್ಡಿಂಗ್‌ಗೆ ಇಳಿದ ಆರ್‌ಸಿಬಿ – ದೈತ್ಯ ಬ್ಯಾಟರ್ ಕೈಬಿಟ್ಟು ತಪ್ಪು ಮಾಡಿತೆ?
ವಂಶಿ ಐಐಟಿ ಪದವೀಧರನಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಬಂಧಿತನಿಂದ 1600 ರೂ. ಮೌಲ್ಯದ 10 ಟಿಕೆಟ್ ಹಾಗೂ 1 ಮೊಬೈಲ್ ಸೀಜ್ ಮಾಡಲಾಗಿದೆ.
ಮೇ 17 ರಂದು ಕೆಕೆಆರ್ ವಿರುದ್ಧದ ಆರ್‌ಸಿಬಿ ಪಂದ್ಯ ಬೆಂಗಳೂರಿನಲ್ಲಿ ನಡೆಯಬೇಕಿತ್ತು. ಆದರೆ, ಮಳೆ ಕಾರಣ ಪಂದ್ಯ ರದ್ದಾಗಿತ್ತು. ಎರಡು ತಂಡಗಳಿಗೆ ಒಂದೊಂದು ಪಾಯಿಂಟ್ ಸಿಕ್ಕಿತ್ತು. ಇದನ್ನೂ ಓದಿ: IPL 2025 ಫೈನಲ್ ಪಂದ್ಯದ ವೇಳೆ ʻಆಪರೇಷನ್ ಸಿಂಧೂರʼ ವಿಜಯೋತ್ಸವ – ಸೇನೆಗೆ ಗೌರವ