ಪ್ರಜ್ವಲ್ ದೇವರಾಜ್ ನಟನೆಯ ‘ಮಾಫಿಯಾ’ ಸಿನಿಮಾದ ಟೀಸರ್ ರಿಲೀಸ್

Public TV
1 Min Read
Mafia 3

ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ನಿರ್ಮಿಸಿರುವ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ನಾಯಕರಾಗಿ, ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿರುವ ಹಾಗೂ ಲೋಹಿತ್ ಹೆಚ್ ನಿರ್ದೇಶಿಸಿರುವ  ‘ಮಾಫಿಯಾ’ (Mafia) ಚಿತ್ರದ ಟೀಸರ್ (Teaser) ಇತ್ತೀಚಿಗೆ ಬಿಡುಗಡೆಯಾಯಿತು. ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರ್ಗಿ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾಫಿಯಾ ಕುರಿತು ಮಾತನಾಡಿದರು.

Mafia 2

ಮೊದಲು ಮಾತನಾಡಿದ ನಿರ್ದೇಶಕ ಲೋಹಿತ್ (Lohit), ಈವರೆಗೂ ಯಾರು ತೋರಿಸಿರದ ಮಾಫಿಯಾ ಈ ಚಿತ್ರದಲ್ಲಿ ತೋರಿಸಿದ್ದೇವೆ. ಬೇರೆ ಬೇರೆ ಮಾರ್ಕೆಟ್ ಹೆಸರು ಕೇಳಿರುತ್ತೀರಾ.‌ ಆದರೆ ಇದೆ ಮೊದಲ ಬಾರಿಗೆ ರೆಡ್ ಮಾರ್ಕೆಟ್ ಪರಿಚಯಿಸಲಾಗಿದೆ. ಅದು ಏನೆಂಬುದನ್ನು ಚಿತ್ರದಲ್ಲೇ ನೋಡಬೇಕು ಎಂದರು.

Mafia 1

ಪ್ರಜ್ವಲ್ ದೇವರಾಜ್ ಅಭಿನಯದ 35 ನೇ ಚಿತ್ರವನ್ನು ನಿರ್ಮಿಸುತ್ತಿರುವುದು ಖುಷಿಯಾಗಿದೆ. ನಿರ್ದೇಶಕ ಲೋಹಿತ್ ಸೇರಿದಂತೆ ಚಿತ್ರತಂಡದ ಸಹಕಾರದಿಂದ “ಮಾಫಿಯಾ” ಚಿತ್ರ ಚೆನ್ನಾಗಿ ಮೂಡಿಬಂದಿದೆ.  ಜನವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ ಎಂದರು ನಿರ್ಮಾಪಕ ಕುಮಾರ್ ಬಿ.

Mafia 1

ಸಿಕ್ಸರ್ ಚಿತ್ರದಿಂದ ನನ್ನ ಸಿನಿ ಜರ್ನಿ ಸಾಗಿಬಂದಿದೆ. ಮೂವತ್ತೈದು ಚಿತ್ರಗಳನ್ನು ಪೂರೈಸಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ. ಇನ್ನು ಮಾಫಿಯಾ ಚಿತ್ರದ ಬಗ್ಗೆ ಹೇಳಬೇಕಾದರೆ, ಕುಮಾರ್ ಅವರು ಒಳ್ಳೆಯ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಲೋಹಿತ್ ಅವರ ವಯಸ್ಸು ಚಿಕ್ಕದಾಗಿದ್ದರೂ ಕೆಲಸದಲ್ಲಿ ಅಸಾಧಾರಣ. ನಾನು, ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು ನಾಯಕ ಪ್ರಜ್ವಲ್ ದೇವರಾಜ್.

ಪಟಪಟ ಎಂದು ಮಾತನಾಡುವ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಾಯಕಿ ಅದಿತಿ ಪ್ರಭುದೇವ ಹೇಳಿದರು. ನಟ ಶೈನ್ ಶೆಟ್ಟಿ, ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಹಾಗೂ ಛಾಯಾಗ್ರಾಹಕ ಪಾಂಡಿಕುಮಾರ್ ಸೇರಿದಂತೆ ಅನೇಕರು “ಮಾಫಿಯಾ” ಚಿತ್ರದ ಬಗ್ಗೆ ಮಾತನಾಡಿದರು.

Share This Article