ಸಂದೇಶ್ ಪ್ರೊಡಕ್ಷನ್ (Sandesh Nagaraj) ನಿರ್ಮಾಣದ 30ನೇ ಚಿತ್ರವಾದ ಮತ್ತು ತಮಿಳು, ಕನ್ನಡ, ಹಿಂದಿ, ತೆಲುಗು ಭಾಷೆಯಲ್ಲಿ ತಯಾರಾಗಿರುವ ‘ವುಲ್ಫ್’ (Wolf) ಚಿತ್ರದ ಟೀಸರ್ (Teaser) ರಿಲೀಸ್ ಆಗಿದೆ. ಡಾನ್ಸಿಂಗ್ ಸ್ಟಾರ್ ಪ್ರಭುದೇವ (Prabhudev), ಅನುಸೂಯ ಭಾರದ್ವಾಜ್, ಲಕ್ಷ್ಮಿ ರೈ, ವಸಿಷ್ಠ ಸಿಂಹ, ಅಂಜು ಕುರಿಯನ್ ಮುಂತಾದ ಖ್ಯಾತ ತಾರಾ ಬಳಗವನ್ನು ಹೊಂದಿರುವ ಸಿನಿಮಾ ಇದಾಗಿದೆ.
ವುಲ್ಫ್ ಚಿತ್ರ ತಾಂತ್ರಿಕ ಕೆಲಸಗಳನ್ನು ಮುಗಿಸಿ ಇದೀಗ ಮೊದಲ ಹಂತವಾಗಿ ಆಗಸ್ಟ್ 3ರಂದು ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯವನ್ನು ಆರಂಭಿಸಿದೆ ಚಿತ್ರತಂಡ. ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ವಿಭಿನ್ನವಾದ ಕಥಾ ಹಂದರವನ್ನು ಮೊದಲ ಬಾರಿಗೆ ಪ್ರೇಕ್ಷಕರ ಮುಂದೆ ಇಡಲು ಚಿತ್ರ ತಂಡ ತಯಾರಾಗಿದೆ. ಇದನ್ನೂ ಓದಿ:ಮದುವೆಯಾದ ಒಂದೇ ವರ್ಷಕ್ಕೆ ಪತಿಯನ್ನು ಕಳೆದುಕೊಂಡ ನಟಿ ಶ್ರುತಿ
ಇದೇ ತಿಂಗಳು 16 ರಂದು ನಿರ್ಮಾಪಕರಾದ ಸಂದೇಶ್ ನಾಗರಾಜ್ ಅವರ ಜನುಮದಿನ ಅಂದು ತಮಿಳುನಟ ವಿಜಯ ಸೇತುಪತಿ (Vijay Sethupathi) ಹಾಡಿರುವ ಚಿತ್ರದ ಮೊದಲ ಲಿರಿಕಲ್ ವೀಡಿಯೋ ಸಹ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ವಿನು ವೆಂಕಟೇಶ್ ನಿರ್ದೇಶನ ಮಾಡಿದ್ದು, ಖ್ಯಾತ ಛಾಯಾಗ್ರಾಹಕ ಅರುಳ್ ವಿನ್ಸೆಂಟ್ ಛಾಯಾಗ್ರಹಣ, ಖ್ಯಾತ ತಾರೆ ಜಯಸುಧಾ ಅವರ ಪುತ್ರ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಅಮರೀಶ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಆಗಿ ಪ್ರಸಾದ್ ಬಿ ಏನ್ ಮತ್ತು ಕಾಮರಾಜು ಕಾರ್ಯ ನಿರ್ವಹಿಸಿರುವ ಈ ಚಿತ್ರವನ್ನು ಸಂದೇಶ ನಾಗರಾಜ್ ಅವರು ಸಂದೇಶ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ.
Web Stories