ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್, ಸಂಚಿತಾ ಪಡುಕೋಣೆ ಪ್ರಮುಖಪಾತ್ರದಲ್ಲಿ ನಟಿಸಿರುವ “ಓ ಮನಸೇ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಈ ಚಿತ್ರದ ಕುರಿತು ಮಾತನಾಡಿದರು. ನಾನು ಕೊರೋನ ಒಂದನೇ ಅಲೆ ಮುಗಿದ ಮೇಲೆ ನಿರ್ಮಾಪಕರಲೊಬ್ಬರಾದ ರಾಮು ಅವರ ಬಳಿ ಈ ಚಿತ್ರದ ಕಥೆ ಹೇಳಿದೆ. ಅವರಿಗೆ ಕಥೆ ಇಷ್ಟವಾಗಿ, ತಮ್ಮ ಮಿತ್ರರ ಒಡಗೂಡಿ ಈ ಚಿತ್ರ ನಿರ್ಮಾಣಕ್ಕೆ ಮುಂದಾದರು. ಆನಂತರ ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್ ಅವರಿಗೆ ಚಿತ್ರದ ಕಥೆ ಹೇಳಲಾಯಿತು. ಅವರು ಸಹ ನಟಿಸಲು ಒಪ್ಪಿದರು. ಸಂಚಿತಾ ಪಡುಕೋಣೆ ನಾಯಕಿಯಾಗಿ ಆಯ್ಕೆಯಾದರು. ಲವ್ ಮತ್ತು ಕ್ರೈಮ್ ಥ್ರಿಲ್ಲರ್ ಜಾನರ್ ನ ಈ ಚಿತ್ರಕ್ಕೆ ಮಡಿಕೇರಿ, ಗೋಣಿಕೊಪ್ಪ, ಕುಶಾಲನಗರ, ಬೆಂಗಳೂರು ಮುಂತಾದ ಕಡೆ 55 ದಿನಗಳ ಕಾಲ ನಡೆದಿದೆ. ಹಾಡುಗಳ ಚಿತ್ರೀಕರಣ ಥೈಲ್ಯಾಂಡ್ ನಲ್ಲಿ ಆಗಿದೆ. ಫೆಬ್ರವರಿಯಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆಯಿದೆ ಎಂದು ನಿರ್ದೇಶಕ ಉಮೇಶ್ ಗೌಡ ತಿಳಿಸಿದರು.
Advertisement
ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ಈ ನಡುವೆ ಪೊಲೀಸ್ ಪಾತ್ರಗಳು ನನಗೆ ಹೆಚ್ಚು ಬರುತ್ತಿದೆ. ಮುಂದಿನ ಎರಡು ಚಿತ್ರಗಳಲ್ಲೂ ನನ್ನದು ಪೊಲೀಸ್ ಪಾತ್ರ. ಇದಕ್ಕೆ ಕಾರಣ “ಓ ಮನಸೇ” ತಂಡ ಎನ್ನಬಹುದು. ಏಕೆಂದರೆ ಕೊರೋನ ಸಮಯದಲ್ಲಿ ಬಿಡುವಿದಾಗ ಇವರು ಬಂದು ಈ ಚಿತ್ರದ ಕಥೆ ಹೇಳಿದರು. ಈ ಚಿತ್ರ ಒಪ್ಪಿದ ನಂತರ ಸಾಲುಸಾಲು ಚಿತ್ರಗಳನ್ನು ನಾನು ಒಪ್ಪಿಕೊಂಡೆ. ತ್ರಿಕೋನ ಪ್ರೇಮಕಥೆ ಆಧಾರಿತ “ಓ ಮನಸೇ” ಚಿತ್ರವನ್ನು ತಾವು ನೋಡಿ ಹಾರೈಸಿ ಎಂದರು ವಿಜಯ ರಾಘವೇಂದ್ರ. ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುವ ಯುವಜನೋತ್ಸವಕ್ಕೆ ಮೋದಿ ಜೊತೆ ಅಕ್ಷಯ್ ಕುಮಾರ್‌ಗೆ ಆಹ್ವಾನ
Advertisement
Advertisement
ಕೊರೋನ ಸಮಯದಲ್ಲಿ ಸಿನಿಮಾಗಳು ಕಡಿಮೆಯಾಗಿದ್ದವು. ಅಂತಹ ಸಮಯದಲ್ಲಿ ನಿರ್ಮಾಪಕರು ಕರೆದು ಈ ಚಿತ್ರದ ಅಡ್ವಾನ್ಸ್ ನೀಡಿದರು. ಅವರು ಕೊಟ್ಟ ಘಳಿಗೆ ಚೆನ್ನಾಗಿದೆ. ಆನಂತರ ಸಾಕಷ್ಟು ಚಿತ್ರಗಳು ಬಂದವು. ಈ ಚಿತ್ರದ ಬಗ್ಗೆ ಹೇಳಬೇಕಾದರೆ, ನಾಯಕಿಯನ್ನು ನಾನು ಹಾಗೂ ವಿಜಯ ರಾಘವೇಂದ್ರ ಇಬ್ಬರೂ ಪ್ರೀತಿಸುತ್ತೇವೆ. ಯಾರಿಗೆ ಸಿಗುತ್ತಾರೆ? ಎಂಬುದನ್ನು ಸಿನಿಮಾದಲ್ಲಿ ನೋಡಬೇಕು. ನಿರ್ದೇಶಕರು ಅದ್ಭುತವಾಗಿ ಚಿತ್ರ ಮಾಡಿದ್ದಾರೆ ಎಂದರು ಧರ್ಮ ಕೀರ್ತಿರಾಜ್.
Advertisement
ನನಗೆ ಕನ್ನಡ ಚಿತ್ರದಲ್ಲಿ ನಟಿಸಲು ಬಹಳ ಆಸೆ. ನನ್ನನ್ನು ಈ ಚಿತ್ರದ ನಾಯಕಿಯಾಗಿ ಆಯ್ಕೆ ಮಾಡಿದ್ದ ನಿರ್ದೇಶಕ – ನಿರ್ಮಾಪಕರಿಗೆ ಧನ್ಯವಾದ ಎಂದರು ಸಂಚಿತಾ ಪಡುಕೋಣೆ. ನಿರ್ಮಾಪಕರಾದ ಎಂ.ಎನ್ ಭೈರೇಗೌಡ, ಧನಂಜಯ್, ಯುವರಾಜು, ಸು.ಕಾ.ರಾಮು ಮತ್ತು ವೆಂಕಟೇಶ್ ಚಿತ್ರ ನಿರ್ಮಾಣದ ಕುರಿತು ಮಾತನಾಡಿದರು. ಧನು ಮಾಸ್ಟರ್ ನೃತ್ಯ ನಿರ್ದೇಶನದ ಬಗ್ಗೆ ಮಾಹಿತಿ ನೀಡಿದರು. ರಮೇಶ್ ಹಂಡ್ರಂಗಿ ಕಥೆ ಬರೆದಿದ್ದಾರೆ. ಎಂ.ಆರ್.ಸೀನು ಛಾಯಾಗ್ರಹಣ, ಶ್ರೀನಿವಾಸ್ ಪಿ ಬಾಬು ಸಂಕಲನ ಹಾಗೂ ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ, ಬಂಡೆ ಚಂದ್ರು ಅವರ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದಾರೆ. ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್, ಸಂಚಿತಾ ಪಡುಕೋಣೆ, ಹರೀಶ್ ರಾಯ್, ಸಾಧುಕೋಕಿಲ, ಶೋಭ್ ರಾಜ್, ಕಿಲ್ಲರ್ ವೆಂಕಟೇಶ್, ವಾಣಿಶ್ರೀ, ಜಯರಾಮ್, ರುಶಿಕಾ ರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.