ಬೆಂಗಳೂರು: ಮ್ಯೂಸಿಕ್ ಬಜಾರ್ ಗೆ ಹೊಸದೊಂದು ಹಾಡು ಎಂಟ್ರಿ ಕೊಟ್ಟಿದೆ. ನಯಾ ಹಾಡಿನ ಬಗ್ಗೆ ಆ್ಯಕ್ಷನ್ ಪ್ರಿನ್ಸ್ ಧೃವ ಸರ್ಜಾ ಮಾತನಾಡಿದ್ದಾರೆ.
ಕಿನಾರೆ ನಿಮಗೆಲ್ಲಾ ತಿಳಿದಿರುವ ಹಾಗೇ ರೆಡ್ ಆ್ಯಪಲ್ ಮತ್ತು ಅದಿತಿ ಫಿಲ್‍ಂ ಬ್ಯಾನರ್ ನಲ್ಲಿ ರೆಡಿಯಾಗುತ್ತಿರುವ ಸಿನಿಮಾವಾಗಿದೆ. ಈ ಸಿನಿಮಾ ಒಂದು ಘಟನೆಯಿಂದ ಎರಡು ಮುಗ್ಧ ಜೀವಗಳ ಬದುಕಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ ಅನ್ನೋದನ್ನ ಹೇಳಲು ಹೊರಟಿದೆ. ಈಗಾಗಲೇ ಸಿನಿಮಾದ ಟೀಸರ್ ಮತ್ತು ಮೇಕಿಂಗ್ ಬಹಳಷ್ಟು ಭರವಸೆ ಮೂಡಿಸಿದೆ.
Advertisement
ಚಿತ್ರತಂಡ ಈಗ ಮೊದಲ ಹಾಡನ್ನ ರಿವೀಲ್ ಮಾಡಿದ್ದು ಇನ್ನಷ್ಟು ನಿರೀಕ್ಷೆ ಹೆಚ್ಚಿಸಿದೆ. ಹೊಸ ಪ್ರತಿಭೆಗಳು ಸೇರಿಕೊಂಡು ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ದೇವರಾಜ್ ಪೂಜಾರಿ ಆ್ಯಕ್ಷನ್ ಕಟ್ ಹೇಳಿದ್ದು, ನಟ ಸತೀಶ್ ಮತ್ತು ನಟಿ ಗೌತಮಿ ಬಣ್ಣ ಹಚ್ಚಿದ್ದಾರೆ. ಅಭಿಷೇಕ್ ಕಾಸರಗೋಡು ಕ್ಯಾಮೆರಾ ಕೈ ಚಳಕ ತೋರಿಸಿದ್ದಾರೆ.
Advertisement
Advertisement
ನಿರ್ದೇಶಕ ರವಿ ಪೂಜಾರಿ ಬರೆದಿರುವ ಸಾಹಿತ್ಯಕ್ಕೆ ಸುರೇಂದ್ರನಾಥ್ ಟ್ಯೂನ್ ಕಂಪೋಸ್ ಮಾಡಿದ್ದಾರೆ. ಚಂದನ್ ಶೆಟ್ಟಿ ಕಂಠಸಿರಿಯಲ್ಲಿ ಮೂಡಿಬಂದಿರುವ ಕೋಳಿ ಸಾಂಗ್ ಕಿನಾರೆಯ ಸತ್ವ ಸಾರುತ್ತಿದೆ. ಈ ತಿಂಗಳು ವಾರಕ್ಕೊಂದು ಹೊಸ ಹಾಡು ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿದೆ. ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ಟ್, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.
Advertisement
ಕಡಲ ಕಿನಾರೆಯ ಕಥೆಯನ್ನ ಹೇಳುತ್ತಿರುವ ಚಿತ್ರತಂಡ ಮಂಗಳೂರು, ಉಡುಪಿ, ಕಾಸರಗೋಡು ಸೇರಿದಂತೆ ಹಲವು ಕಡೆ ಚಿತ್ರೀಕರಣ ಕಂಪ್ಲೀಟ್ ಮಾಡಿಕೊಂಡಿದೆ. ಹಾಡುಗಳಿಂದ ಹೈಪ್ ಕ್ರಿಯೇಟ್ ಮಾಡಿ ಥೇಟರ್ ಗೆ ಎಂಟ್ರಿ ಕೊಡಲು ಸಜ್ಜಾಗಿದ್ದು, ರಿವಿಲ್ ಆಗಿರೋ ಹಾಡು ಮತ್ತು ಟೀಜರ್ ನಿಂದ ಹೊಸ ಥರ ಸಿನಿಮಾ ಸಿನಿರಸಿಕರನ್ನ ರಂಜಿಸಬಹುದು ಅನ್ನೊ ಕ್ಲೂ ಸಿಕ್ಕಿದೆ.