ಸಾಮಾನ್ಯವಾಗಿ ಚಿತ್ರಗಳ ಪ್ರೀಮಿಯರ್ ಶೋ ನಡೆಯುವುದು ವಾಡಿಕೆ. ಆದರೆ ಧ್ರುವ ಸರ್ಜಾ ನಾಯಕರಾಗಿ ನಟಿಸಿರುವ “ಮಾರ್ಟಿನ್” ಚಿತ್ರದ ಟೀಸರ್ ಗೆ ಪ್ರೀಮಿಯರ್ ನಡೆದಿದೆ. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ವೀರೇಶ ಚಿತ್ರಮಂದಿರದಲ್ಲಿ “ಮಾರ್ಟಿನ್” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಕನ್ನಡ ಸೇರಿದಂತೆ ಬೇರೆ ಯಾವ ಚಿತ್ರರಂಗದಲ್ಲೂ ಈ ರೀತಿ ಟೀಸರ್ ಪ್ರೀಮಿಯರ್ ನಡೆದಿರುವುದು ತಿಳಿದಿಲ್ಲ. ಇದೇ ಮೊದಲು ಎನ್ನಬಹುದು.
Advertisement
ಇತ್ತೀಚೆಗೆ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ “ಮಾರ್ಟಿನ್” ಚಿತ್ರದ ಟೀಸರ್ ವೀರೇಶ ಚಿತ್ರಮಂದಿರದಲ್ಲಿ ಬಿಡುಗಡೆಯಾಯಿತು. ಇದಕ್ಕೂ ಮುನ್ನ ಜಾನಪದ ಕಲಾ ತಂಡಗಳ ಜೊತೆ ವೈಭವದ ಮೆರವಣಿಗೆಯ ಮೂಲಕ ಚಿತ್ರತಂಡದ ಸದಸ್ಯರು ವೀರೇಶ ಚಿತ್ರಮಂದಿರ ಪ್ರವೇಶಿಸಿದರು. ಪ್ರೀಮಿಯರ್ ನಲ್ಲಿ ಟೀಸರ್ ವೀಕ್ಷಿಸಿದ ಧ್ರುವ ಸರ್ಜಾ ಅಭಿಮಾನಿಗಳು ಟೀಸರ್ ಗೆ ಫಿದಾ ಆಗಿದ್ದಾರೆ ಅದೇ ದಿನ ಸಂಜೆ ಚಿತ್ರದ ಪ್ಯಾನ್ ಇಂಡಿಯಾ ಪತ್ರಿಕಾಗೋಷ್ಠಿ ಸಹ ನಡೆಯಿತು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಪತ್ರಕರ್ತರು ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಚಿತ್ರತಂಡದ ಸದಸ್ಯರು “ಮಾರ್ಟಿನ್” ಬಗ್ಗೆ ಮಾತನಾಡಿದರು. ಇದನ್ನೂ ಓದಿ: ಹೂವುಗಳನ್ನ ದೇಹಕ್ಕೆ ಅಂಟಿಸಿ, ಪ್ಲಾಸ್ಟಿಕ್ ಕವರ್‌ನಲ್ಲಿ ಮೈಮುಚ್ಚಿಕೊಂಡು ಬಂದ ಉರ್ಫಿ
Advertisement
Advertisement
ನಾನು ಹಾಗೂ ಧ್ರುವ ಹೀರೋ ಹಾಗೂ ನಿರ್ದೇಶಕರ ತರಹ ಕೆಲಸ ಮಾಡಲ್ಲ. ಸ್ನೇಹಿತರಾಗಿ ಕೆಲಸ ಮಾಡುತ್ತೇವೆ. ಹತ್ತು ವರ್ಷಗಳ ಹಿಂದೆ ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ ಬಂದಿದ್ದ “ಅದ್ದೂರಿ” ಚಿತ್ರ “ಅದ್ದೂರಿ” ಯಶಸ್ಸು ಕಂಡಿದ್ದು ಎಲ್ಲರಿಗೂ ತಿಳಿದ ವಿಷಯ. ಈಗ “ಮಾರ್ಟಿನ್” ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. “ಮಾರ್ಟಿನ್” ಪಕ್ಕಾ ಆಕ್ಷನ್ ಚಿತ್ರ. ಅರ್ಜುನ್ ಸರ್ಜಾ ಅವರು ಕಥೆ ಬರೆದಿದ್ದಾರೆ. ಉದಯ್ ಕೆ ಮೆಹತಾ ಯಾವುದಕ್ಕೂ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ. ನಾವು ಇಷ್ಟು ದಿನ ಕರ್ನಾಟಕದಲ್ಲಿ ಮಾತ್ರ ಪರೀಕ್ಷೆ ಬರೆಯುತ್ತಿದ್ದೆವು. ಇದು ಪ್ಯಾನ್ ಇಂಡಿಯಾ ಚಿತ್ರ. ಎಲ್ಲರನ್ನು ಮೆಚ್ಚಿಸುವ ಜವಾಬ್ದಾರಿ ನಮಗಿದೆ. ಇಡೀ ನನ್ನ ತಂಡದ ಸಹಕಾರದಿಂದ “ಮಾರ್ಟಿನ್” ಉತ್ತಮವಾಗಿ ಬಂದಿದೆ. ಟೀಸರ್ ಗೆ ಸಿಗುತ್ತಿರುವ ಪ್ರತಿಕ್ರಿಯೆಗೆ ತುಂಬಾ ಖುಷಿಯಾಗಿದೆ ಎನ್ನುತ್ತಾರೆ ನಿರ್ದೇಶಕ ಎ.ಪಿ.ಅರ್ಜುನ್.
Advertisement
ನಮ್ಮ ಸಂಸ್ಥೆಯಿಂದ ಪ್ಯಾನ್ ಇಂಡಿಯಾ “ಮಾರ್ಟಿನ್” ಚಿತ್ರ ನಿರ್ಮಾಣವಾಗಿರುವುದು ಸಂತೋಷವಾಗಿದೆ. ಚಿತ್ರ ಏನು ಕೇಳುತ್ತದೊ ಅದನೆಲ್ಲಾ ನಿರ್ಮಾಪಕನಾಗಿ ಒದಗಿಸಿದ್ದೇನೆ. ಧ್ರುವ ಸರ್ಜಾ, ಎ.ಪಿ.ಅರ್ಜುನ್, ಅರ್ಜುನ್ ಸರ್ಜಾ, ಸತ್ಯ ಹೆಗಡೆ, ರವಿ ಬಸ್ರೂರ್ ಸೇರಿದಂತೆ ಇಡೀ ತಂಡದ ಸಹಕಾರಕ್ಕೆ ನನ್ನ ಧನ್ಯವಾದ ಎಂದರು ನಿರ್ಮಾಪಕ ಉದಯ್ ಕೆ ಮೆಹತಾ. “ಮಾರ್ಟಿನ್” ಚಿತ್ರದ ಟೀಸರ್ ಚೆನ್ನಾಗಿದೆ. ಇದು ಧ್ರುವ ಅಭಿನಯದ ಐದನೇ ಚಿತ್ರ. ನಾನು ಈ ಚಿತ್ರಕ್ಕೆ ಕಥೆ ಬರೆದಿದ್ದೇನೆ. ಧ್ರುವ ನಿಗೆ ಕಥೆ ಒಪ್ಪಿಸುವುದು ಅಷ್ಟು ಸುಲಭವಲ್ಲ. ಆತ ಚಿತ್ರಕ್ಕಾಗಿ ತುಂಬಾ ಶ್ರಮ ಪಡುತ್ತಾನೆ. ನಿದ್ದೆ ಕೂಡ ಸರಿಯಾಗಿ ಮಾಡಲ್ಲ. ನಮ್ಮ ಕುಟುಂಬದವರಿಗೆ ಧ್ರುವ ಎಂದರೆ ಪ್ರೀತಿ. ಅದರಲ್ಲೂ ನಮ್ಮ ತಾಯಿಗೆ ಧ್ರುವ ಎಂದರೆ ತುಂಬಾ ಪ್ರೀತಿ. ಅವರು ಇವತ್ತು ಇದ್ದಿದ್ದರೆ ತುಂಬಾ ಖುಷಿ ಪಡುತ್ತಿದ್ದರು. ನಿರ್ದೇಶಕ ಎ.ಪಿ.ಅರ್ಜುನ್ , ನಿರ್ಮಾಪಕ ಉದಯ್ ಕೆ ಮೆಹತಾ ಹಾಗೂ ಇಡೀ “ಮಾರ್ಟಿನ್” ಚಿತ್ರತಂಡಕ್ಕೆ ನಟ ಅರ್ಜುನ್ ಸರ್ಜಾ ಶುಭಾಶಯ ತಿಳಿಸಿದರು.
ನಮ್ಮ ಮಾವ ಅರ್ಜುನ್ ಸರ್ಜಾ ಅವರು ಈ ಚಿತ್ರದ ಕಥೆ ಬರೆದಿದ್ದಾರೆ. ಎ.ಪಿ.ಅರ್ಜುನ್ ಸುಂದರವಾಗಿ ನಿರ್ದೇಶಿಸಿದ್ದಾರೆ. ಉದಯ್ ಕೆ ಮೆಹತಾ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ರಾಮ್ – ಲಕ್ಷ್ಮಣ್ ಸೇರಿದಂತೆ ಖ್ಯಾತ ಸಾಹಸ ನಿರ್ದೇಶಕರ ಸಾಹಸ ಸಂಯೋಜನೆಯಲ್ಲಿ ಮೂಡಿ ಬಂದಿರುವ ಸಾಹಸ ದೃಶ್ಯಗಳು ಚೆನ್ನಾಗಿದೆ. ಇಡೀ ತಂಡದ ಕಾರ್ಯವೈಖರಿ ಟೀಸರ್ ನಲ್ಲಿ ಕಾಣುತ್ತಿದೆ. ಟೀಸರ್ ಗೆ ಅಭಿಮಾನಿಗಳು ತೋರುತ್ತಿರುವ ಪ್ರೀತಿ ಹಾಗೂ ಅವರು ಆಡುತ್ತಿರುವ ಮೆಚ್ಚುಗೆಯ ಮಾತುಗಳಿಗೆ ಮನ ತುಂಬಿ ಬಂದಿದೆ. ನಿಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ ಎಂದರು ನಾಯಕ ಧ್ರುವ ಸರ್ಜಾ. ಚಿತ್ರದ ನಾಯಕಿಯರಾದ ವೈಭವಿ ಶಾಂಡಿಲ್ಯ, ಅನ್ವೇಷಿ ಜೈನ್, ಛಾಯಾಗ್ರಾಹಕ ಸತ್ಯ ಹೆಗಡೆ, ಸಾಹಸ ಸಂಯೋಜಕರಾದ ರಾಮ್ – ಲಕ್ಷ್ಮಣ್ ಮುಂತಾದ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅನುಭವ ಹಂಚಿಕೊಂಡರು.
Can you be more specific about the content of your article? After reading it, I still have some doubts. Hope you can help me. https://accounts.binance.com/lv/register?ref=JHQQKNKN