ಹುಬ್ಬಳ್ಳಿ: ರಂಜಾನ್ (Ramadan Festival) ಪ್ರಾರ್ಥನೆ ನಡೆಯುತ್ತಿದ್ದ ಚೆನ್ನಮ್ಮ ವೃತ್ತದ ಈದ್ಗಾ ಮೈದಾನದಲ್ಲಿ (Eidgah Maidan), ಹಳೇ ಹುಬ್ಬಳ್ಳಿ (Hubballi) ಗಲಭೆಯಲ್ಲಿ ಜೈಲು ಸೇರಿರುವ ತಮ್ಮ ಮಕ್ಕಳನ್ನ ಬಿಡುಗಡೆ ಮಾಡಿಸುವಂತೆ ಮುಸ್ಲಿಂ ಮುಖಂಡರ (Muslim Leaders) ಮುಂದೆ ಮಹಿಳೆಯರು ಕಣ್ಣೀರು ಹಾಕಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ನೀವೆಲ್ಲರೂ ಸಂತೋಷದಿಂದ ರಂಜಾನ್ ಮಾಡುತ್ತಿದ್ದೀರಿ. ನಮ್ಮ ಕುಟುಂಬಗಳು ಕಷ್ಟದಲ್ಲಿವೆ ಎಂದು ಅಳಲು ತೋಡಿಕೊಂಡಿದ್ದಾರೆ. ಜೊತೆಗೆ ಮುಸ್ಲಿಂ ಮುಖಂಡರು ನಮ್ಮ ಮಕ್ಕಳಿಗೆ ಜಾಮೀನು ಕೊಡಿಸುವಲ್ಲಿ, ಕಾನೂನು ಹೋರಾಟದಲ್ಲಿ ವಿಫಲರಾಗಿದ್ದಾರೆಂದು ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ. ಮಹಿಳೆಯರ ಆಕ್ರೋಶ ಕಂಡ ಮುಸ್ಲಿಂ ಮುಖಂಡರು ಈದ್ಗಾ ಮೈದಾನದಿಂದ ಕಾಲ್ಕಿತ್ತಿದ್ದಾರೆ.
ಹಳೇ ಹುಬ್ಬಳ್ಳಿ ಗಲಭೆಯಲ್ಲಿ 149 ಮುಸ್ಲಿಂ ಯುವಕರು ಕಳೆದ ಒಂದು ವರ್ಷದಿಂದ ಸೆರೆವಾಸ ಅನುಭವಿಸುತ್ತಿದ್ದಾರೆ. 149 ಮಂದಿ ಯುವಕರು ಬಳ್ಳಾರಿ, ಕಲಬುರ್ಗಿ ಹಾಗೂ ಮೈಸೂರು ಜೈಲುಗಳಲ್ಲಿ ಇದ್ದಾರೆ. ಇದನ್ನೂ ಓದಿ: ಬಿಜೆಪಿ, ಪಕ್ಷೇತರ ಅಭ್ಯರ್ಥಿ ಬೆಂಬಲಿಗರ ನಡುವೆ ಮಾರಾಮಾರಿ – ಹಲ್ಲೆಯಿಂದ ತಪ್ಪಿಸಿಕೊಳ್ಳ
ಏಪ್ರಿಲ್ 16 ರಂದು ತಡರಾತ್ರಿ ಹಳೇ ಹುಬ್ಬಳ್ಳಿಯಲ್ಲಿ ನಡೆದಿದ್ದ ಕೋಮುಗಲಭೆಯಲ್ಲಿ ಈ ಯುವಕರನ್ನ ಬಂಧಿಸಲಾಗಿತ್ತು. ಇದನ್ನೂ ಓದಿ: ಪಾಂಡ್ಯ ಪರಾಕ್ರಮದ ಮುಂದೆ ಮಂಡಿಯೂರಿದ ರಾಹುಲ್ ಪಡೆ – ಗುಜರಾತ್‌ಗೆ 7 ರನ್‌ಗಳ ರೋಚಕ ಜಯ