ಪ್ಯಾರಿಸ್: ಕೆಲದಿನಗಳ ಹಿಂದೆ ಬಾರ್ಸಿಲೋನಾ ತೊರೆದು ಪ್ಯಾರಿಸ್ ಸೇಂಟ್-ಜರ್ಮೈನ್ ತಂಡಕ್ಕೆ ಖ್ಯಾತ ಫುಟ್‍ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಸೇರಿದ್ದಾರೆ. ಈ ಮುನ್ನ ಬಾರ್ಸಿಲೋನಾ ತಂಡದೊಂದಿಗಿನ ತನ್ನ 21 ವರ್ಷಗಳ ಒಡನಾಟಕ್ಕೆ ಅಂತ್ಯ ಆಡಿದ ಸುದ್ದಿಗೋಷ್ಠಿಯಲ್ಲಿ ಮೆಸ್ಸಿ ಕಣ್ಣೀರು ಹಾಕಿದ್ದರು. ಈ ವೇಳೆ ಕಣ್ಣೀರು ಒರೆಸಿಕೊಳ್ಳಲು ಬಳಸಿದ ಟಿಶ್ಯೂ ಪೇಪರ್ 7.43 ಕೋಟಿ(1 ಮಿಲಿಯನ್)ಕೋಟಿ ರೂಪಾಯಿಗೆ ಹರಾಜು ಹಾಕಲಾಗಿದೆ.
Advertisement
ಮೆಸ್ಸಿ ಬಾರ್ಸಿಲೋನಾ ತಂಡಕ್ಕೆ ವಿದಾಯ ಹೇಳುವ ಸಂದರ್ಭ ತನ್ನ 21 ವರ್ಷಗಳ ಒಡನಾಟವನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದರು. ಈ ವೇಳೆ ಅವರೊಂದಿಗಿದ್ದ ಅವರ ಪತ್ನಿ ಆಂಟೋನೆಲಾ ರೊಕುಜೊ ಅವರು ಟಿಶ್ಯೂ ಪೇಪರ್ ನ್ನು ನೀಡಿದ್ದರು. ಆ ಟಿಶ್ಯೂನಲ್ಲಿ ಮೆಸ್ಸಿ ಕಣ್ಣೀರು ಒರೆಸಿಕೊಂಡು ಅಲ್ಲೇ ಕೆಳಕ್ಕೆ ಹಾಕಿದ್ದರು. ಸುದ್ದಿಗೋಷ್ಠಿ ಬಳಿಕ ಆ ಟಿಶ್ಯೂ ಪೇಪರ್ ನ್ನು ವ್ಯಕ್ತಿಯೊಬ್ಬರು ಎತ್ತಿಕೊಂಡು ಇದೀಗ ಇ-ಕಾಮರ್ಸ್ ವೆಬ್‍ಸೈಟ್ ಒಂದರಲ್ಲಿ ಸುಮಾರು 7.43 ಕೋಟಿಗೆ ಹರಾಜಿಗಿಟ್ಟಿದ್ದಾರೆ. ಇದನ್ನೂ ಓದಿ: ಕ್ರೀಡಾ ಇತಿಹಾಸದಲ್ಲಿ ಅತಿ ದೊಡ್ಡ ಡೀಲ್ ಲೀಕ್ – 4,900 ಕೋಟಿಗೆ ಸಹಿ ಹಾಕಿದ್ದ ಮೆಸ್ಸಿ
Advertisement
Por si ocupan…
En internet se vende en un millón de dólares el pañuelo que uso Messi en su despedida. ???? pic.twitter.com/c0gfTohsnl
— ZEL (@Mariazelzel) August 18, 2021
Advertisement
ಹರಾಜಿಗಿಟ್ಟ ವ್ಯಕ್ತಿ, ಈ ಟಿಶ್ಯೂನಲ್ಲಿ ಮೆಸ್ಸಿ ಅವರ ಜೆನೆಟಿಕ್ ಡಿಎನ್‍ಎ ಇದೆ. ಮೆಸ್ಸಿ ಅವರ ಕ್ಲೋನ್ ಸಿದ್ಧಪಡಿಸಲು ಇದು ಉಪಯೋಗವಾಗಬಹುದೆಂದು ಮಾಹಿತಿ ಹಂಚಿಕೊಂಡಿದ್ದಾರೆ. ಈ ಟಿಶ್ಯೂವನ್ನು ಯಾರು ಖರೀದಿಸುತ್ತಾರೆ ಎಂಬ ಕುತೂಹಲ ಮನೆಮಾಡಿದೆ. ಇದನ್ನೂ ಓದಿ: ಟಿ20 ವರ್ಲ್ಡ್ ಕಪ್ – ಅಕ್ಟೋಬರ್ 24ರಂದು ಭಾರತ Vs ಪಾಕಿಸ್ತಾನ
Advertisement