– ರನ್ ಮಳೆ ಕಂಡು ಅಭಿಮಾನಿಗಳು ಫುಲ್ ಖುಷ್
ಢಾಕಾ: ಬಾಂಗ್ಲಾದೇಶದ ದೇಶಿಯ ಕ್ರಿಕೆಟ್‍ನ ಏಕದಿನ ಪಂದ್ಯವೊಂದರಲ್ಲಿ ಎರಡು ತಂಡಗಳ ಆಟಗಾರರು ಸೇರಿ 48 ಸಿಕ್ಸ್ ಮತ್ತು 70 ಬೌಂಡರಿಗಳ ಸಹಾಯದಿಂದ ಒಟ್ಟು 818 ರನ್ ಹೊಡೆದು ರನ್ ಮಳೆಯನ್ನೇ ಹರಿಸಿದ್ದಾರೆ.
ಬಾಂಗ್ಲಾ ದೇಶದ ಕ್ರಿಕೆಟ್ ಆಟಗಾರರ ಹೋರಾಟ ಮತ್ತು ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಸಾಕಷ್ಟು ಬಾರಿ ಸುದ್ದಿಯಾಗಿದೆ. ಆದರೆ ಸೋಮವಾರ ನಡೆದ ಉತ್ತರ ಬಂಗಾಳ ಕ್ರಿಕೆಟ್ ಅಕಾಡೆಮಿ ಮತ್ತು ಢಾಕಾದ ಟ್ಯಾಲೆಂಟ್ ಹಂಟ್ ಕ್ರಿಕೆಟ್ ಅಕಾಡೆಮಿ ನಡುವೆ ಪಂದ್ಯದಲ್ಲಿ ರನ್ ಹೊಳೆಯ ಹರಿದೆ. ಎರಡು ತಂಡಗಳು ಪಂದ್ಯದಲ್ಲಿ ಒಟ್ಟು 818 ರನ್ ಸಿಡಿಸಿ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿವೆ.
Advertisement
Advertisement
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಉತ್ತರ ಬಂಗಾಳ ಕ್ರಿಕೆಟ್ ಆಕಾಡೆಮಿ ನಿಗದಿತ 50 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 432 ರನ್ ಗಳಿಸಿತು. ಇನ್ನಿಂಗ್‍ನಲ್ಲಿ ಉತ್ತರ ಬಂಗಾಳ ಕ್ರಿಕೆಟ್ ಅಕಾಡೆಮಿ ಆಟಗಾರರು ಭರ್ಜರಿ 27 ಸಿಕ್ಸರ್ ಸಿಡಿಸಿದ್ದರು.
Advertisement
ಬೃಹತ್ ಮೊತ್ತವನ್ನು ಬೆನ್ನತ್ತಿದ ಟ್ಯಾಲೆಂಟ್ ಹಂಟ್ ಕ್ರಿಕೆಟ್ ಅಕಾಡೆಮಿ ತಂಡ ಭರ್ಜರಿಯಾಗಿ ಆಟವಾಡಿ ಗೆಲುವಿನ ಸನಿಹ ಹೋಗಿತ್ತು. ಆದರೆ ಕೇವಲ 46 ರನ್‍ಗಳಿಂದ ಸೋಲನ್ನು ಅನುಭವಿಸಿತು. ಬೃಹತ್ ರನ್ ಬೆನ್ನತ್ತಿದ್ದ ತಂಡ ಸ್ಫೋಟ ಆಟದೊಂದಿಗೆ ಇನ್ನಿಂಗ್ಸ್ ಆರಂಭಿಸಿತ್ತು. ರನ್ ಗಳಿಸುವುದರೊಂದಿಗೆ ನಿರಂತರವಾಗಿ ವಿಕೆಟ್ ಕಳೆದುಕೊಂಡ ಪರಿಣಾಮ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 386 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಇತ್ತಂಡಗಳು ಪಂದ್ಯದಲ್ಲಿ 818 ರನ್ ಸಿಡಿಸಿದ್ದವು.
Advertisement
ಕಳೆದ ಅಕ್ಟೋಬರ್ ನಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಶಕೀಬ್ ಅಲ್ ಹಸನ್ ಕ್ರಿಕೆಟ್ ಮಂಡಳಿಯ ವಿರುದ್ಧ ಕಿಡಿಕಾರಿದ್ದರು. ದೇಶೀಯ ಕ್ರಿಕೆಟ್‍ನ ಎಲ್ಲಾ ಪಂದ್ಯಗಳ ಫಲಿತಾಂಶ ಪೂರ್ವ ನಿರ್ಧರಿತ ಎಂಬ ಆರೋಪ ಮಾಡಿದ್ದರು. ಅಲ್ಲದೇ ಈ ಆರೋಪವನ್ನು ಬಿಸಿಬಿ ಅಧ್ಯಕ್ಷ ಹೊಸೈನ್ ಚೌಧರಿ ಒಪ್ಪಿಕೊಂಡು ದೇಶೀಯ ಕ್ರಿಕೆಟ್‍ನಲ್ಲಿ ಭಷ್ಟಾಚಾರ ಆಳವಾಗಿ ಬೇರೂರಿಗೆ ಎಂದು ಹೇಳಿದ್ದರು.