ಕ್ಯಾನ್ಬೆರಾ: ಆಸ್ಟ್ರೇಲಿಯಾದಲ್ಲಿ (Australia) ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ (T20 WorldCup) ಪಾಕಿಸ್ತಾನದ ಪಯಣ ಬಹುತೇಕ ಖೇಲ್ ಕತಂ ಆದಂತೆ ಕಾಣ್ತಿದೆ. ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ (Team India) ಎದುರು ಸೋಲಿನ ರುಚಿ ಕಂಡ ಪಾಕಿಸ್ತಾನ (Pakistan) ತನ್ನ 2ನೇ ಪಂದ್ಯದಲ್ಲಿ ಜಿಂಬಾಬ್ವೆ ಎದುರು ಹೀನಾಯ ಸೋಲು ಅನುಭವಿಸಿತ್ತು.
Advertisement
ಕೊನೆಯವರೆಗೂ ರೋಚಕತೆಯಿಂದ ಕೂಡಿದ್ದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಬಾಬರ್ ಸೇನೆ ಕೇವಲ 1 ರನ್ ಅಂತರದಲ್ಲಿ ಸೋಲು ಕಂಡಿತು. ಇದೀಗ ಬಾಬರ್ (BabarAzam) ಪಡೆಗೆ ಸೆಮಿಸ್‌ಗೆ ತೆರಳಲು ಕಠಿಣ ಪರಿಸ್ಥಿತಿ ಎದುರಾಗಿದೆ. ಪಾಕ್ ಉಳಿದ 3 ಪಂದ್ಯಗಳಲ್ಲೂ ಗೆಲ್ಲುವುದು ನಿರ್ಣಾಯಕವಾಗಿದೆ. ಅಲ್ಲದೇ ಕೆಲ ತಂಡಗಳ ಸೋಲು ಗೆಲುವಿನ ಮೇಲೂ ಪಾಕ್ ಅವಲಂಬಿತವಾಗಿದೆ. ಇದನ್ನೂ ಓದಿ: ಸೆಮಿಫೈನಲ್ ನಂತರ ಭಾರತ ಕೂಡ ಮನೆಗೆ – ಶೋಯೆಬ್ ಅಖ್ತರ್
Advertisement
Advertisement
2021ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಸ್ಥಿತಿಯೂ ಹೀಗೆ ಇತ್ತು. ಆಗ ಕೊಹ್ಲಿ (Virat Kohli) ಪಡೆಯ ಸ್ಥಿತಿ ನೋಡಿ ನಗೆ ಬೀರಿದ ಪಾಕ್ ತಂಡ ಇದೀಗ ಹಿಟ್‌ಮ್ಯಾನ್ ರೋಹಿತ್ (Rohit Sharma) ಪಡೆಯ ಸತತ ಗೆಲುವಿಗಾಗಿ ದೇವರಿಗೆ ಮೊರೆ ಇಡುತ್ತಿದ್ದಾರೆ.
Advertisement
ಸೂಪರ್-12 ಗುಂಪು-2ರಲ್ಲಿರುವ 6 ತಂಡಗಳ ಪೈಕಿ ಸತತ ಗೆಲುವು ಸಾಧಿಸಿರುವ ಭಾರತ ಅಗ್ರಸ್ಥಾನದಲ್ಲಿದ್ದರೆ, 2 ಪಂದ್ಯಗಳಲ್ಲೂ ಸೋಲು ಕಂಡಿರುವ ಪಾಕಿಸ್ತಾನ (Pakistan) 5ನೇ ಸ್ಥಾನದಲ್ಲಿದೆ. ನೆದರ್‌ಲ್ಯಾಂಡ್ (Netherlands) 6ನೇ ಸ್ಥಾನದಲ್ಲಿದೆ. ಪಾಕ್ ಈಗಾಗಲೇ 2 ಪಂದ್ಯಗಳಲ್ಲಿ ಸೋತಿದ್ದು, ಉಳಿದ 3 ಪಂದ್ಯಗಳಲ್ಲಿ ಗೆಲುವು ನಿರ್ಣಾಯಕವಾಗಿ ಬೇಕಿದೆ. ಜೊತೆಗೆ ರನ್‌ರೇಟ್‌ನತ್ತಲೂ ಗಮನಿಸಬೇಕಿದೆ. ಇದನ್ನೂ ಓದಿ: `ಹೃದಯದ ರಾಣಿ’ ಎಂದು ಪ್ರೇಯಸಿಯನ್ನ ಹಾಡಿ ಹೊಗಳಿದ ಸಿದ್ಧಾರ್ಥ್
ಭಾರತದ ಸತತ ಗೆಲುವಿಗಾಗಿ ಪ್ರಾರ್ಥನೆ:
ಪಾಕಿಸ್ತಾನ ಸೆಮಿಫೈನಲ್‌ಗೆ ಬರಬೇಕಾದ್ರೆ ಮೂರು ಪಂದ್ಯಗಳ ಗೆಲುವು ಮಾತ್ರವಲ್ಲ. ನಾಳೆ ನಡೆಯುವ ಸೂಪರ್ ಸಂಡೇ ಮ್ಯಾಚ್‌ನಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾವನ್ನು ಸೋಲಿಸಬೇಕಾಗಿದೆ. ಮುಂದಿನ ಪಂದ್ಯಗಳಲ್ಲಿ ಜಿಂಬಾಬ್ವೆ ತನ್ನ ಉಳಿದ ಮೂರು ಪಂದ್ಯಗಳಲ್ಲಿ ಎರಡು ಪಂದ್ಯ ಸೋಲಬೇಕಿದೆ. ಅದೇ ಸಮಯದಲ್ಲಿ ಬಾಂಗ್ಲಾದೇಶ (Bangladesh) ಇನ್ನೊಂದು ಪಂದ್ಯದಲ್ಲಿ ಸೋಲಬೇಕು. ಭಾರತ ದಕ್ಷಿಣ ಆಫ್ರಿಕಾ (South Africa), ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ಈ ಮೂರು ತಂಡಗಳನ್ನು ಸೋಲಿಸಬೇಕು. ಅಂದುಕೊಂಡಂತೆ ಎಲ್ಲವೂ ಆದ್ರೆ ಪಾಕಿಸ್ತಾನ ಸೆಮಿಸ್‌ಗೆ ತಲುಪುವ ಸಾಧ್ಯತೆಯಿದೆ. ಎದುರಾಳಿ ತಂಡಗಳು ಬಲಿಷ್ಠವಾಗಿರುವುದರಿಂದ ಇದು ಸಾಧ್ಯವಾಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ. ಹಾಗಾಗಿ ಪಾಕಿಸ್ತಾನ ತಂಡ ಈಗ ಭಾರತದ ಗೆಲುವಿಗಾಗಿ ಪ್ರಾರ್ಥಿಸುತ್ತಿದೆ.
ಒಂದು ವೇಳೆ ಸೂಪರ್ 12 ಸುತ್ತಿನಲ್ಲಿ ಭಾರತ ಸೋತರೆ, ಪಾಕಿಸ್ತಾನ ಸೆಮಿಸ್ ರೇಸ್‌ನಿಂದ ಹೊರಗುಳಿಯುತ್ತದೆ. ಅದಕ್ಕಾಗಿಯೇ ಪಾಕಿಸ್ತಾನದ ಅಭಿಮಾನಿಗಳು ಈಗ ಭಾರತದ ಗೆಲುವಿಗಾಗಿ ಕಾದುಕುಳಿತಿದ್ದಾರೆ.